ಬೆಂಗಳೂರು:ಮಧ್ಯಪ್ರದೇಶದಲ್ಲಿ ಅಧಿಕಾರ ‘ಕೈ’ತಪು್ಪತ್ತಿರುವ ಬೆಳವಣಿಗೆಗಳಿಂದ ಎಚ್ಚೆತ್ತ ಕಾಂಗ್ರೆಸ್ ವರಿಷ್ಠರು ಕೊನೆಗೂ ರಾಜ್ಯ ಕಾಂಗ್ರೆಸ್​ನ ಸಾರಥ್ಯವನ್ನು ಹಿರಿಯ ರಾಜಕಾರಣಿ ಡಿ.ಕೆ. ಶಿವಕುಮಾರ್​ಗೆ ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಮೂವರು ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿಸಲಾಗಿದ್ದು, ಈಗಾಗಲೇ ಹುದ್ದೆ ನಿಭಾಯಿಸುತ್ತಿರುವ ಈಶ್ವರ ಖಂಡ್ರೆ, ಜತೆಗೆ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಇದು ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಸಮಾನತೆ ಕಾಪಾಡುವ ನಿಟ್ಟಿನಲ್ಲಿ ಹೈಕಮಾಂಡ್ ಇಟ್ಟಿರುವ ಎಚ್ಚರಿಕೆಯ ನಡೆ ಎನ್ನಲಾಗುತ್ತಿದ್ದರೂ ಡಿಕೆಶಿಗೆ ಮೂಗುದಾರ ಹಾಕುವ ತಂತ್ರವೂ ಹೌದೆಂದು ವಿಶ್ಲೇಷಿಸಲಾಗುತ್ತಿದೆ.
ಹೈಕಮಾಂಡ್​ನ ನಿಷ್ಕ್ರಿಯ ಧೋರಣೆಯಿಂದ ಬೇಸತ್ತು ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಎಐಸಿಸಿ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ನನೆಗುದಿಯಲ್ಲಿಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಭರ್ತಿ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಸಿಎಲ್​ಪಿ ಹಾಗೂ ಪ್ರತಿಪಕ್ಷದ ನಾಯಕ ಹುದ್ದೆಗಳನ್ನು ವಿಭಜಿಸಲಾಗುತ್ತದೆ ಎಂಬ ವಾದವಿತ್ತಾದರೂ ಎರಡು ಹುದ್ದೆಗಳಲ್ಲಿ ಸಿದ್ದರಾಮಯ್ಯರನ್ನೇ ಮುಂದುವರಿಸುವ ಮೂಲಕ ಅವರಿಗೂ ಮಣೆ ಹಾಕಲಾಗಿದೆ. ಶಿವಕುಮಾರ್ ನೇಮಕವಾದರೆ ನಾಲ್ವರು ಕಾರ್ಯಾಧ್ಯಕ್ಷರಿರಬೇಕೆಂಬ ಸಿದ್ದರಾಮಯ್ಯ ವಾದಕ್ಕೂ ಪುಷ್ಟಿ ನೀಡುವಂತೆ ಮೂರು ಹುದ್ದೆ ಸೃಷ್ಟಿಸಿದ್ದಾರೆ. ಆ ಮೂಲಕ ಎಲ್ಲರನ್ನೂ ಸಮಾಧಾನ ಮಾಡುವ ಪ್ರಯತ್ನ ಮಾಡಲಾಗಿದೆ. ಎರಡು ವರ್ಷ ಅವಧಿಯ ಈ ಜವಾಬ್ದಾರಿಯನ್ನು ವಹಿಸಿಕೊಂಡ 57ರ ಹರೆಯದ ಡಿಕೆಶಿ ರಾಜ್ಯ ಕಾಂಗ್ರೆಸ್ ಘಟಕದ 23ನೇ ಅಧ್ಯಕ್ಷ.
ಸವಾಲಿನ ಗುರಿ:ಹೊಸಬರು, ಹಳಬರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸವಾಲಿನೊಂದಿಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬ ಗುರಿಯೊಂದಿಗೆ ಹೈಕಮಾಂಡ್ ಡಿಕೆಶಿಗೆ ಹೊಣೆಗಾರಿಕೆ ವಹಿಸಿದೆ. ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್ ಈ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದರೂ ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಅಹ್ಮದ್ ಪಟೇಲ್, ಶಿವಕುಮಾರ್ ಪರ ಪ್ರಬಲ ಒತ್ತಡ ಹಾಕಿದ್ದರಿಂದಲೇ ಅವರ ನೇಮಕಕ್ಕೆ ಹೈಕಮಾಂಡ್ ಅಸ್ತು ಎಂದಿದೆ.
ಡಿಕೆಶಿ ಆಯ್ಕೆಗೆ ಕಾರಣ
1. ಪಕ್ಷ ನಿಷ್ಠ, ವಿವಿಧ ಘಟಕಗಳ ಮೂಲಕ ಹಂತಹಂತವಾಗಿ ಬೆಳೆದುಬಂದಿದ್ದು
2. ರಾಜ್ಯದೆಲ್ಲೆಡೆ ತಮ್ಮದೇ ಆದ ನೆಟ್​ವರ್ಕ್ ಹೊಂದಿರುವುದು
3. ಪಕ್ಷಕ್ಕೆ ಆಪತ್ತು ಎದುರಾದ ಕೆಲವು ಸಂದರ್ಭದಲ್ಲಿ ನೆರವಿಗೆ ನಿಂತಿದ್ದು
4. ಪ್ರಸ್ತುತ ನಾಯಕತ್ವ ಗುಣ ಇರುವ ನಾಯಕರ ಪಟ್ಟಿಯಲ್ಲಿ ಮೊದಲ ಹೆಸರು
5. ಎಲ್ಲ ಅಸಮಾಧಾನ ಮೆಟ್ಟಿನಿಂತು ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ
ವ್ಯಕ್ತಿ ಪೂಜೆ ಇಲ್ಲ, ಪಕ್ಷ ಪೂಜೆ
‘ಪಕ್ಷದಲ್ಲಿ ಯಾವುದೇ ಪವರ್, ಸೆಂಟರ್ ಇಲ್ಲ, ಇಲ್ಲಿ ಏನಿದ್ದರೂ ಪಕ್ಷ ಪೂಜೆಯೇ ಹೊರತು ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ’ ಇದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಎದುರಾಳಿಗಳಿಗೆ ನೀಡಿರುವ ಟಾಂಗ್. ತಮ್ಮ ನೇಮಕಾತಿ ಆದೇಶ ಹೊರಬಿದ್ದ ಕೂಡಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲ ಹಿರಿಯ, ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಪಕ್ಷ ಕಟ್ಟುವೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವುದು ನನ್ನ ಮೊದಲ ಆದ್ಯತೆ ಎಂದರು. ವರಿಷ್ಠರು ನನ್ನ ಮೇಲೆ ನಂಬಿಕೆಯನ್ನಿಟ್ಟು ಜವಾಬ್ದಾರಿ ನೀಡಿದ್ದಾರೆ. ಸೋನಿಯಾ ಗಾಂಧಿ ನನ್ನನ್ನು ಗುರುತಿಸಿದ್ದಾರೆ. ವಿದ್ಯಾರ್ಥಿ ನಾಯಕ ಆಗಿದ್ದಾಗಲೇ ರಾಜೀವ್ ಗಾಂಧಿ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದರು. ಅದನ್ನು ನಾನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೆ. ಈಗಲೂ ಕೆಲಸ ಮಾಡುವ ಮೂಲಕ ತೋರಿಸುತ್ತೇನೆ. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ನಾನೂ ಕಾರ್ಯಕರ್ತನೇ ಆಗಿರುತ್ತೇನೆ. ಎಲ್ಲರ ಧ್ವನಿಯಾಗಿ ನಾನು ಕೆಲಸ ಮಾಡುತ್ತೇನೆ ಎಂದು ಡಿಕೆಶಿ ತಿಳಿಸಿದರು.
ಯಾರಿಗೆಲ್ಲ ನಿರಾಸೆ?
ದಲಿತ ಕಾರ್ಡ್ ಬಳಸಿ ಅಧ್ಯಕ್ಷರಾಗಬಹುದೆಂಬ ಆಸೆಯಲ್ಲಿದ್ದ ಕೆ.ಎಚ್.ಮುನಿಯಪ್ಪ ಬಿ.ಕೆ. ಹರಿಪ್ರಸಾದ್​ಗೆ ನಿರಾಸೆ ಆಗಿದೆ. ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ದೆಹಲಿಗೆ ಹೋಗಿ ಪಕ್ಷ ಹಿಂದೆ ನೀಡಿದ್ದ ಆಫರ್ ನೆನಪಿಸಿ ಅವಕಾಶ ಕೇಳಿದ್ದರು.
ಪರಿಣಾಮಗಳೇನು?
ಬಿಜೆಪಿ: ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವತ್ತ ಹೆಜ್ಜೆ ಇಟ್ಟಿರುವಾಗಲೇ ಅದೇ ಭಾಗದ ಡಿ.ಕೆ. ಶಿವಕುಮಾರ್ ಭವಿಷ್ಯದಲ್ಲಿ ದೊಡ್ಡ ಸವಾಲಾಗಬಹುದು. ಒಕ್ಕಲಿಗರ ಒಲಿಸಿಕೊಳ್ಳುವ ಪ್ರಯತ್ನ ಕೊಂಚ ಕಷ್ಟವಾಗಬಹುದು.
ಜೆಡಿಎಸ್: ಹಳೆ ಮೈಸೂರಿನಲ್ಲಿ ಜೆಡಿಎಸ್ ಈಗಲೂ ಪ್ರಬಲ ಪಕ್ಷ .ಇದೀಗ ಡಿಕೆಶಿ ಪ್ರವೇಶದಿಂದಾಗಿ ಆ ಪಕ್ಷಕ್ಕೆ ಹೊಸ ಸವಾಲು ಎದುರಾಗಿದೆ. ಇತ್ತೀಚಿನ ವರ್ಷದಲ್ಲಿ ಕಾಂಗ್ರೆಸ್​ನಲ್ಲಿದ್ದ ಪಕ್ಷದ ಅತ್ಯಾಪ್ತನೇ ಈಗ ಆ ಪಕ್ಷದ ಸಾರಥಿ ಯಾಗಿರುವುದು ಜೆಡಿಎಸ್ ಪಾಲಿಗೆ ಮಗ್ಗಲು ಮುಳ್ಳು.
ಡಿ.ಕೆ.ಶಿವಕುಮಾರ್​ಗೆ ಕೆಪಿಸಿಸಿ ಅಧ್ಯಕ್ಷನ ಪಟ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + thirteen =
Remember me
