ಬೆಂಗಳೂರು:ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಸರ್ಕಾರ ಉಚಿತವಾಗಿ ನೀಡುವ ಪದಾರ್ಥಗಳ ಪೊಟ್ಟಣದಲ್ಲಿ ಬಿಜೆಪಿ ಸಿಂಬಲ್​ ಬಳಕೆ ಮಾಡುತ್ತಿದ್ದಾರೆ. ಬಿಜೆಪಿಯರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ನ ಮಹಿಳಾ ಘಟಕ ಆರೋಪಿಸಿತು.
ಆನಂದ್ ರಾವ್ ಸರ್ಕಲ್​ ಬಳಿ ಇರುವ ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಘಟಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಜಿ‌ ಸಚಿವರಾದ ಮೋಟಮ್ಮ, ಜಯಮಾಲ, ಉಮಾಶ್ರೀ, ರಾಣಿ ಸತೀಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ:ವಲಸೆ ಕಾರ್ಮಿಕರಿಗೆ 3 ದಿನ ಫ್ರೀ ಬಸ್
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್​ಐಆರ್ ದಾಖಲಾಗಿದೆ. ನೈತಿಕ ಹೊಣೆ ಹೊತ್ತು ಯಡಿಯೂರಪ್ಪ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ರಾಜೀನಾಮೆ ನೀಡಬೇಕು. ಸರ್ಕಾರ ಕ್ರಮ ಕೈಗೊಳ್ಳದೆ ಇದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ವೇಳೆ ಕಣ್ಣು, ಮೂಗುಗಳಿಗೆ ಬಟ್ಟೆ ಕಟ್ಟಿಕೊಂಡು ಹೈಡ್ರಾಮಾ ಸೃಷ್ಟಿಸಿದರು.
ನಾನು ಗಾಂಧಾರಿ ರೀತಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತೇನೆ ಎನ್ನುತ್ತ ಇಡೀ ಮುಖಕ್ಕೆ ಬಿಳಿ ಕರ್ಚಿಫ್​ ಕಟ್ಟಿಕೊಂಡು ಮಾಧ್ಯಮಗಳಿಗೆ ಪೋಸ್​ ಕೊಟ್ಟರು.
ಇದನ್ನೂ ಓದಿ:VIDEO| ಒರಿಸ್ಸಾ ಮೂಲದ ಸೆಕ್ಯುರಿಟಿ ಗಾರ್ಡ್​ ಹಾಗೂ ಪುತ್ರಿಗೆ ರೈಲು ಟಿಕೆಟ್​ ಖರೀದಿಸಿ ಸಾರ್ಥಕತೆ ಮೆರೆದ ಪಿಎಸ್​ಐ ಅನಿತಾ
ಸುದ್ದಿಗೋಷ್ಠಿಯಂತೂ ಅಕ್ಷರಶಃ ಜಾತ್ರೆಯಾಗಿತ್ತು. ಇಲ್ಲೂ ಸಹ ಸಾಮಾಜಿಕ ಅಂತರ ನಿಯಮ ಪಾಲನೆಯನ್ನು ಕಾಂಗ್ರೆಸ್ ನಾಯಕರು ಮಾಡಲಿಲ್ಲ. ಅಲ್ಲಿಂದ ಮಹಿಳಾ ಘಟಕ ಸಿಎಂ ಕಚೇರಿಗೆ ಮುತ್ತಿಗೆ ಹಾಕಲು ಕೃಷ್ಣಾಕ್ಕೆ ಮೆರವಣಿಗೆ ಹೊರಟಿತು.
ಇದಕ್ಕೂ ಮೊದಲು ಬಸ್​ಗಳ ಮೂಲಕ ತಮ್ಮ ಊರುಗಳಿಗೆ ತೆರಳುತ್ತಿರುವ ಕೂಲಿ ಕಾರ್ಮಿಕರನ್ನು ಭೇಟಿಯಾಗಲು ಕಾಂಗ್ರೆಸ್​ ನಿಯೋಗ ಮೆಜೆಸ್ಟಿಕ್​ಗೆ ತೆರಳಿತ್ತು.
ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ದಿನೇಶ್​ ಗುಂಡೂರಾವ್​, ಎಚ್.ಕೆ. ಪಾಟೀಲ್, ಅಜೇಯ್ ಸಿಂಗ್, ಬೈರತಿ ಸುರೇಶ್, ನಾರಯಣ ಸ್ವಾಮಿ ಮತ್ತಿತರರು ಮೆಜೆಸ್ಟಿಕ್​ಗೆ ತೆರಳಿ ಕೂಲಿ ಕಾರ್ಮಿಕರ ಬಳಿ ಮಾತುಕತೆ ನಡೆಸಿದರು.
ಡಿ.ಕೆ.ಶಿವಕುಮಾರ್​, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರರು ಬಸ್​ ಹತ್ತಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಬಸ್​ಗಳನ್ನೂ ವೀಕ್ಷಣೆ ಮಾಡಿದರು. ಈ ವೇಳೆ ಸಾಮಾಜಿಕ ಅಂತರ ಪಾಲನಾ ನಿಯಮ ಸಂಪೂರ್ಣ ಉಲ್ಲಂಘನೆಯಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
