ಬೆಳಗಾವಿ:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮನೆ ಮೇಲಿನ ಸಿಬಿಐ ದಾಳಿಯು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಉಪಚುನಾವಣೆಯ ಸಂದರ್ಭ. ಹೀಗಾಗಿ ಈ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ. ಉಪಚುನಾವಣೆ ಒಂದು ತಿಂಗಳು ಇದೆ‌. ಜನರೇ ನೀವೇ ವಿಚಾರ ಮಾಡಿ ಎಂದು ಮನವಿ ಮಾಡಿದರು.
ಇದನ್ನೂ ಓದಿ:ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ದುಷ್ಟತನದ ಪರಮಾವಧಿ ಎಂದ ಸಿದ್ದುಗೆ ಕಮೆಂಟಿಗರಿಂದ ಗುದ್ದೋ ಗುದ್ದು!
ಚುನಾವಣೆಯಲ್ಲಿ ನಾವೆಲ್ಲರೂ ಪಾಲ್ಗೊಳ್ಳುತ್ತಿದ್ದೇವೆ. ಆ ದುರುದ್ದೇಶ ಇಟ್ಟುಕೊಂಡು ದಾಳಿ ಮಾಡಿದೆ. ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿದ್ದಾರೆ ಎಂಬುದನ್ನು ಡಿಕೆಶಿಯವರನ್ನು ಕೇಳಿ. ಇಡಿ, ಐಟಿ ಅಥವಾ ಸಿಬಿಐ ಯಾವುದೇ ದಾಳಿ ಇರಲಿ ನಮ್ಮ ನಾಯಕರು ಸಮರ್ಥರಿದ್ದಾರೆ. ಕಾನೂನು ಮೇಲೆ ನಮಗೆ ವಿಶ್ವಾಸ ಇದೆ. ಕಾನೂನುಗೆ ತಲೆ ಬಾಗಲೇಬೇಕು ಎಂದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ನಮಗೆ ಅಡಚಣೆ ಮಾಡುವ ನಿಟ್ಟಿನಲ್ಲಿ ಈ ದಾಳಿ ಮಾಡಿದ್ದಾರೆ‌. ಏನಾಗುತ್ತದೆ ಮುಂದೆ ನೋಡೋಣ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ಬೆಳ್ಳಂಬೆಳಗ್ಗೆ ಡಿಕೆ ಬ್ರದರ್ಸ್​ಗೆ ಸಿಬಿಐ ಶಾಕ್​: ಐಟಿ, ಇಡಿ ಬೆನ್ನಲ್ಲೇ ಡಿಕೆಶಿಗೆ ಮತ್ತೊಂದು ಆಘಾತ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 13 =
Remember me
