ಬೆಂಗಳೂರು:ಜೆಡಿಎಸ್​ನ ಮಾಜಿ ಶಾಸಕ, ಮಧುಬಂಗಾರಪ್ಪ ಜತೆ ಅವರ ಅಕ್ಕ ಗೀತಾ ಶಿವರಾಜ್​ಕುಮಾರ್​ ಕೂಡ ಕಾಂಗ್ರೆಸ್​ ಸೇರಲಿದ್ದಾರೆ. ಈ ಬಗ್ಗೆ ಸ್ವತಃ ಮಧುಬಂಗಾರಪ್ಪಅವರೇ ತಿಳಿಸಿದ್ದಾರೆ.
ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದ ಮಧುಬಂಗಾರಪ್ಪ, ಇಂದು ಸದಾಶಿವನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರನ್ನ ಭೇಟಿ ಮಾಡಿ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾತ್ರವಲ್ಲ ನನ್ನ ಅಕ್ಕ ನನ್ನ ಅಕ್ಕ ಗೀತಾ ಶಿವರಾಜ್​ಕುಮಾರ್​ ಕೂಡ ಕಾಂಗ್ರೆಸ್​ಗೆ ಬರಲಿದ್ದಾರೆ. ಮಾತುಕತೆ ಆಗಿದೆ. ಬಂದಿದ್ದಾರೆ ಅಂದುಕೊಳ್ಳಿ. ಡಿಕೆಶಿ ಅಧ್ಯಕ್ಷತೆಯಲ್ಲಿ ಕೆಲಸ ಮಾಡೋ ಅವಕಾಶ ಸಿಕ್ಕಿದೆ ಎಂದರು.
ಮಧುಬಂಗಾರಪ್ಪ ಕಾಂಗ್ರೆಸ್​ಗೆ ಹೋಗುತ್ತಿರುವ ಕುರಿತು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಬೆನ್ನಿಗೆ ಚೂರಿ ಹಾಕೋದು ಹೊಸದಲ್ಲ ಎಂದಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಮಧುಬಂಗಾರಪ್ಪ, ಅವರಿಗೆ ನಾನು ಅಣ್ಣನ ಸ್ಥಾನ ಕೊಟ್ಟಿದ್ದೇನೆ. ಪ್ರತಿಕ್ರಿಯೆಗೆ ಮನಸ್ಸು ಒಪ್ಪುತ್ತಿಲ್ಲ. ಹತ್ತು ವರ್ಷದ ಹಿಂದಿನ ಕಥೆ ಈಗ ಬೇಡ. ದ್ವೇಷದ ರಾಜಕಾರಣ ನಾನು ಮಾಡಲ್ಲ ಎಂದರು.
ಮಧುಬಂಗಾರಪ್ಪ ಮತ್ತು ಗೀತಾ ಶಿವರಾಜ್​ಕುಮಾರ್​ ಅವರು ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಅವರ ಮಕ್ಕಳು. ಗೀತಾ ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ರ ಪತ್ನಿ.
ಅಪ್ಪ-ಮಕ್ಕಳದ್ದೂ ಸೇರಿ ಇನ್ನೂ 23 ಸಿಡಿ ಇವೆ ಎಂದ ಯತ್ನಾಳ್

ಜಾರಕಿಹೊಳಿ ಸಿಡಿ ಕೇಸ್​: ಸಿಕ್ಕಿಬಿದ್ದದ್ದು ಇಬ್ಬರಲ್ಲ, ಐವರು! ಯುವತಿಯೂ ಇದ್ದಾಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 4 =
Remember me
