ಬೆಂಗಳೂರು:ಕನ್ನಡ ಚಿತ್ರರಂಗದ ನಟ ವಿಜಯ್​ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹಠಾತ್​ ಹೃದಯಾಘಾತದಿಂದ ಭಾನುವಾರ (ಆಗಸ್ಟ್​ 06) ರಾತ್ರಿ ವಿದೇಶದಲ್ಲಿ ಮೃತಪಟ್ಟಿದ್ದು, ಇಂದು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಮಲ್ಲೇಶ್ವರದಲ್ಲಿ ಅಂತಿಮ ದರ್ಶನಕ್ಕೆ ಎಂದು ಇರಿಸಲಾಗಿದೆ. ಈ ವೇಳೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್​, ಘಟನೆಯನ್ನು ನೆನೆದು ಭಾವುಕರಾಗಿದ್ದಾರೆ.
ಇದನ್ನೂ ಓದಿ:“ಮೊದಲು ಮಣಿಪುರ ನಂತರ ಹರಿಯಾಣ, ನೀವು ದೇಶ ಸುಡಲು ಯತ್ನಿಸುತ್ತಿದ್ದೀರಿ”: ಪ್ರಧಾನಿ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ, “ಒಂದು ವಾರದ ಹಿಂದೆಯಷ್ಟೇ ದಂಪತಿ ನನ್ನನ್ನು ಭೇಟಿ ಮಾಡಿದ್ದರು. ಸೈಟ್ ವಿಚಾರವಾಗಿ ಹಾಗೂ ನನಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ್ದರು. ಸ್ಪಂದನಾ ತುಂಬಾ ಆರೋಗ್ಯಕರವಾಗಿಯೇ ಇದ್ದರು. ಅವರ ಅಂತಿಮ ದರ್ಶನಕ್ಕೆ ಬರುತ್ತಿರುವ ಈ‌ ಅಭಿಮಾನದ ಸಾಗರವನ್ನು ನೋಡಿದರೆ ತಿಳಿಯುತ್ತದೆ, ಜನರು ಅವರನ್ನು ಎಷ್ಟು ಇಷ್ಟ ಪಡುತ್ತಿದ್ದರು ಎಂಬುದು. ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು” ಎಂದು ಹೇಳಿದರು.
“ವಿಜಯ ರಾಘವೇಂದ್ರ ಅವರ ಕುಟುಂಬದ ಸದಸ್ಯರೆಲ್ಲರೂ ನನಗೆ ಬಹಳ ಆತ್ಮೀಯರು. ಸ್ಪಂದನಾ ಕುಟುಂಬದವರಿಗೆ, ಪತಿಗೆ ಮತ್ತು ಅಭಿಮಾನಿಗಳಿಗೆ ಭಗವಂತ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಆಶಿಸುತ್ತೇನೆ. ಪ್ರತಿಯೊಬ್ಬರು ನಿಮ್ಮ ಆರೋಗ್ಯದ ಬಗ್ಗೆ ಗಮನ‌ಕೊಡಿ” ಎಂದು ಹೇಳಿದರು.
‘ಆರ್​ಆರ್​ಆರ್’​ ದಾಖಲೆಯನ್ನು ಬ್ರೇಕ್​ ಮಾಡಲಿದೆ ಪ್ರಭಾಸ್​ ನಟನೆಯ ‘ಸಲಾರ್’​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 15 =
Remember me
