ಬೆಂಗಳೂರು:ಇಂದು ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರವಾಗಿ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆದಿದ್ದು ಡಿಸಿಎಂ ಡಿ‌ಕೆ‌ ಶಿವಕುಮಾರ್ ಮಾತನಾಡಿದರು. ಈ ಸಂದರ್ಭ ತಾವು ತಮಿಳುನಾಡು ಮುಖ್ಯಮಂತ್ರಿ ಜತೆ ಮಾತನಾಡಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುವ ಸಮಯದಲ್ಲಿ ಅವರು ಕಾವೇರಿ ವಿಚಾರವಾಗಿ ಹೇಳಿಕೆ ನೀಡಿದ್ದು “CWC ಮೀಟಿಂಗ್ ನಲ್ಲಿ 24 ಸಾವಿರ ಕ್ಯೂಸೆಕ್ಸ್ ನೀರು ಕೇಳಿತ್ತು. ಆದರೆ ಅದನ್ನು ಐದು ಸಾವಿರಕ್ಕೆ ಇಳಿಸಲಾಗಿತ್ತು. ನಾವು ಮೂರು ಸಾವಿರ ಕ್ಯೂಸೆಕ್ಸ್ ನೀರು ಬೀಡುವಂತೆ ಕೋರ್ಟ್ ಹೇಳಿದೆ. ಮುಂದಿನ ದಿನಾಂಕವನ್ನು ಕೋರ್ಟ್ ಮುಂದಕ್ಕೆ ಹಾಕಿದ್ದು ಮುಂದಿನ ಬುಧವಾರಕ್ಕೆ ದಿನಾಂಕವನ್ನು ನಿಗದಿಪಡಿಸಿದೆ.
ತಮಿಳುನಾಡಿಗೆ ನೀರು ಬಿಡುವುದರಿಂದ ನಮ್ಮ ರೈತರಿಗೆ ಬಹಳ ತೊಂದರೆಯಾಗಿದೆ. ನಮ್ಮ ರೈತರನ್ನು ಕಾಪಡಬೇಕು. ಆದರೆ ನೀರು ಬೀಡಬೇಕಿದೆ. ತಮಿಳುನಾಡಿಗೆ ಎಲ್ಲವೂ ಗೊತ್ತಿದೆ. ಆದರೆ ತಮಿಳುನಾಡು‌ ಅವಶ್ಯಕತೆ ಮೀರಿ ನೀರನ್ನು ಖರ್ಚು ಮಾಡುತ್ತಿದೆ. ಅವರು ಹೆಚ್ಚುವರಿ ನೀರು ಉಪಯೋಗ ಮಾಡುತ್ತಿದ್ದಾರೆ. ನೀರು ಹೆಚ್ಚು ಉಪಯೋಗಿಸಿದ್ದ ಬಗ್ಗೆ ನಾವು ನ್ಯಾಯಾಲಯಕ್ಕೆ ತಿಳಿಸಿದ್ದೇವೆ. ನಮ್ಮ ರಾಜ್ಯದ ವಾಸ್ತವ ಸ್ಥಿತಿ ನೋಡಲು ಹೇಳಿದ್ದೇವೆ. ಕಾನೂನು ತಜ್ಞರ ಜತೆ ನಾನು ಸಭೆ ನಡೆಸಿದ್ದೇನೆ. ಅವರು ರಾಜ್ಯದ ವಾಸ್ತವ ಪರಿಸ್ಥಿತಿಯ ಬಗ್ಗೆ ಕೋರ್ಟ್‍ಗೆ ಮಾಹಿತಿಯನ್ನು ನೀಡಿ ಬಳಿಕ ಕೋರ್ಟ್‍ಗೆ ಅರ್ಜಿ ಹಾಕೋಣ ಅಂದಿದ್ದಾರೆ” ಎಂದು ಮಾಹಿತಿ ನೀಡಿದರು.
ಇದೇ ವೇಳೆ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ, “ಮಳೆ ಬರುತ್ತೆ ಅಂತ ನಿರೀಕ್ಷೆ ಮಾಡಿದ್ದೆವು. ಆದರೆ ಬಂದಿಲ್ಲ. ಬುಧವಾರ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಇದೆ. ನಮ್ಮ ವಾಸ್ತವ ಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುತ್ತೇವೆ. ಈ ಎಲ್ಲ ಸಮಸ್ಯೆಗೆ ಮೇಕೆದಾಟು ಯೋಜನೆ ಪರಿಹಾರ. ನಮ್ಮಲ್ಲಿ ಹೆಚ್ಚು ನೀರು ಸಂಗ್ರಹ ಆಗಿದ್ದಲ್ಲಿ ನಾವು ನೀರು ಬಿಡ್ತಾ ಇದ್ವಿ” ಎಂದು ಹೇಳಿದರು.
ಇದೇ ವೇಳೆ ಅವರು ಬಿಎಲ್ ಸಂತೋಷ್ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು “ಅವರು ರಾಷ್ಟ್ರೀಯ ನಾಯಕ ಅಂದುಕೊಂಡಿದ್ದೇನೆ. ಈಶ್ವರಪ್ಪ, ರವಿ ತರಹ ಮಾತನಾಡಿದ್ರೆ ನಾನು ಏನು ಹೇಳಲಿ? ಬೇಕಿದ್ದರೆ 136 ಶಾಸಕರನ್ನು ಕರೆದುಕೊಂಡು ಹೋಗಲಿ. ನಮ್ಮನ್ನು ಸೇರಿ ಅವರು ಇಟ್ಟುಕೊಳ್ಳಲಿ. ಅವರು ರಾಷ್ಟ್ರೀಯ ಗೌರವದಿಂದ ನಡೆದುಕೊಳ್ಳಲಿ. ಅವರು ಹಿಂದೆ ಆಪರೇಷನ್ ಮಾಡಲು ನೋಡಿದ್ರು. ಅದು ಏನೇನೋ ನಡೀತು ಬಿಡಿ” ಎಂದು ಹೇಳಿದರು.
ವಿಪಕ್ಷಗಳಿಗೆ ಟಾಂಗ್ ನೀಡಿದ ಡಿಕೆಶಿ, ಜನರ ಹಿತರಕ್ಷಣೆ ಮಾಡುವುದಾಗಿ ಹೇಳಿದ್ದಾರೆ. ಅವರು “ಬೆಂಗಳೂರು, ಮೈಸೂರು, ರಾಮನಗರಕ್ಕೆ ಕುಡಿಯುವ ನೀರು ಕಾವೇರಿ. ನಮ್ಮ ಜನರ ಹಿತರಕ್ಷಣೆಯನ್ನು ನಾವು ಮಾಡುತ್ತೇವೆ. ಜತೆಗೆ ಕಾನೂನಿಗೆ ಗೌರವ ಕೂಡ ಕೊಡಬೇಕು. ವಿರೋಧ ಪಕ್ಷಗಳಿಗೆ ವಾಸ್ತವ ಸ್ಥಿತಿ ಗೊತ್ತಿದೆ. ಆದರೂ ರಾಜಕೀಯ ಹೇಳಿಕೆ ಕೊಡುತ್ತಾರೆ. ಎಲ್ಲರ ಜೊತೆ ಸೇರಿಯೇ ನಾವು ನಿರ್ಧಾರ ಮಾಡಿದ್ದು. ನಾನು ತಮಿಳುನಾಡಿನ ಸಿಎಂ ಜೊತೆ ಮಾತನಾಡಿಲ್ಲ. ರಾಜಕೀಯವೇ ಬೇರೆ, ರಾಜ್ಯದ ಹಿತಾಸಕ್ತಿಯೇ ಬೇರೆ. ನೀರಿನ ವಿಚಾರವಾಗಿ ತಮಿಳುನಾಡು ಸಿಎಂ ಜೊತೆ ಮಾತನಾಡಲ್ಲ” ಎಂದು ಖಡಕ್‍ ಆಗಿ ಹೇಳಿಕೆ ನೀಡಿದ್ದಾರೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + three =
Remember me
