ಬೆಂಗಳೂರು:ಸಿಬಿಐನವರು ಏನೇ ಹೇಳಬಹುದು, ನ್ಯಾಯಾಲಯವಿದೆ. ನಾವು ಅಲ್ಲಿ ಹೋರಾಡುತ್ತೇವೆ. ಸಿಬಿಐ ದಾಳಿ ಹಿಂದೆ ಚುನಾವಣಾ ಗಿಮಿಕ್ ಇದೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ದಾಳಿ. ನಾನು ಹಿಂದೆ ಸರಿಯಲೆಂದು ಇಂಥ ಹುನ್ನಾರ ನಡೀತಾ ಇದೆ. ನಾನು ಹಿಂದೆ ಹೋಗುವ ಮಗನೇ ಅಲ್ಲ ಎಂದು ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉಪ ಚುನಾವಣೆ ಬರ್ತಿದೆ. ಎಲ್ಲವನ್ನೂ ಮತದಾರರ ಮೇಲೆ ಬಿಡ್ತೀನಿ ಎಂದರು.
ಸಿಬಿಐ ದಾಳಿ ಮುಗಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ, ಸಿಬಿಐ ದಾಳಿ ವೇಳೆ ನ‌ನ್ನ ತಾಯಿ ಬಳಿ ಏನೇನು ಸಿಕ್ಕಿದೆ ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ 70 ಲಕ್ಷ ರೂ. ಸಿಕ್ಕಿದೆ ಅನ್ನೋದು ಸಾಬೀತಾದ್ರೆ ನನ್ನನ್ನು ನೇಣಿಗೆ ಹಾಕಲಿ ಎಂದು ಸವಾಲು ಹಾಕಿದ ಡಿಕೆಶಿ, ನಾವು ರೈತರು. ವೃತ್ತಿಯಲ್ಲಿ ನಾನು ಉದ್ಯಮಿ. ನನ್ನ ಬಳಿ ಇರುವ ಜಮೀನು ಯಾವಾಗ? ಎಷ್ಟು ರೂ.ಗೆ ಖರೀದಿ ಮಾಡಿದ್ದೀವಿ ಎಂಬ ದಾಖಲೆ ನನ್ನ ಬಳಿ ಇದೆ. ಮತ್ತೆ ಸಿಬಿಐ ವಿಚಾರಣೆಗೆ ಕರೆದರೆ ಹೋಗ್ತೀನಿ ಎಂದರು.
2017ರಲ್ಲಿ ಐಟಿ ದಾಳಿಯಾಗಿತ್ತು. ಆ ವೇಳೆ ಇಡೀ ದೇಶದ ಉದ್ದಗಲಕ್ಕೂ ಎಲ್ಲ ಮುಖಂಡರು ನನಗೆ ಧೈರ್ಯ ತುಂಬಿದ್ದರು. ಕೆಲ ಸಂಘಟನೆಗಳು ನನ್ನ ಮೇಲಿನ ಅಭಿಮಾನದಿಂದ ಪ್ರತಿಭಟಿಸಿದವು. ಮಠ-ಮಾನ್ಯರು ಎಲ್ಲರೂ ಆರ್ಶೀವಾದ ಮಾಡಿದ್ದು, ತಿಹಾರ್ ಜೈಲಿನಿಂದ ಹೊರ ಬಂದ ಮೇಲೆ ನನಗೆ ಸ್ವಾಗತ ಕೋರಿದ ಕ್ಷಣವನ್ನೂ ಮರೆಯಲು ಸಾಧ್ಯವಿಲ್ಲ. ಅವರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಭಾವುಕರಾದರು.
ಇದನ್ನೂ ಓದಿರಿನನ್ನ ಮಗನನ್ನು ಅವರ ಮನೆಯಲ್ಲೇ ಕೂರಿಸಿಕೊಳ್ಳಲಿ… ನಮಗೆ ಊಟ ಕೊಟ್ಟರೆ ಸಾಕೆಂದ ಡಿಕೆಶಿ ತಾಯಿ
ವಿರೋಧ ಪಕ್ಷವಾಗಿ ಜನರ ದನಿಯಾಗಿ ನಿಲ್ಲದಿದ್ದರೆ ಹೇಗೆ? ಕೇಂದ್ರದಲ್ಲಿ‌ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿವೆ. ದಲಿತ ಹೆಣ್ಣುಮಗಳ ಮೇಲೆ ರೇಪ್ ಆಗಿದೆ. ಇದನ್ನು ಕಾಂಗ್ರೆಸ್ ಕೇಳಬಾರದೆ? ಎಂದ ಡಿಕೆಶಿ, ನೀವು ಸಿಬಿಐ ತನಿಖೆಗೆ ಅನುಮತಿ ಕೊಟ್ಟಿದ್ದೀರಾ? ಮುಂಚೆಯೇ ಏಕೆ ನನ್ನ ವಿರುದ್ಧ ಎಫ್​ಐಆರ್​ ಹಾಕಲಿಲ್ಲ? ಜೈಲು ಅಥವಾ ಎಫ್​ಐಆರ್​ಗೆ ನಾನು ಹೆದರುವುದಿಲ್ಲ ಎಂದು ಸಿಎಂ ವಿರುದ್ಧ ಗುಡುಗಿದರು.
ಐಟಿ, ಇಡಿ ಬಿಟ್ಟರೆ ನನ್ನ ವಿರುದ್ಧ ಬೇರೆ ಯಾವುದೇ ಎಫ್​ಐಆರ್​ ಆಗಿಲ್ಲ. ಈಗಲೂ ಜಾಲಾಡಿಸಿ ನಾನು ತಪ್ಪು ಮಾಡಿದ್ದರೆ ನೀವು ಕೊಡುವ ಶಿಕ್ಷೆಗೆ ಬದ್ಧ. ನನ್ನ ಬಳಿಯೂ ದಾಖಲೆಗಳಿವೆ. ಸಂದರ್ಭ ಬಂದಾಗ ಉಪಯೋಗಿಸುವೆ ಎಂದು ಎಚ್ಚರಿಸಿದ ಡಿಕೆಶಿ, ಬೇರೆ ಯಾರೂ ನಿಮಗೆ ಸಿಕ್ಕಿಲ್ಲವೇ? ನಿಮ್ಮ ಕುತಂತ್ರ ಮತ್ತು ಒತ್ತಡಕ್ಕೆ ನಾನು ಮಣಿಯುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
LIVE| ಸಿಬಿಐ ರೇಡ್​ ಮುಗಿದ ಬಳಿಕೆ ಡಿಕೆಶಿ ಸುದ್ದಿಗೋಷ್ಠಿ

ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗಲ್ಲ ಎಂದ ಡಿಕೆ ಬ್ರದರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + ten =
Remember me
