ಬೆಂಗಳೂರು:ಟ್ರಾಫಿಕ್, ಮಾಲಿನ್ಯ ಮತ್ತು ನೀರಿನ ಕೊರತೆಯಂತಹ ನಗರದ ಸಮಸ್ಯೆಗಳಿಗೆ ಕಲ್ಪನೆಗಳು ಮತ್ತು ಸಂಭವನೀಯ ಪರಿಹಾರಗಳನ್ನು ಚರ್ಚಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)  ‘ಬ್ಯಾಂಡ್ ಬೆಂಗಳೂರು ಅಭಿಯಾನ’ ವನ್ನು ಹಮ್ಮಿಕೊಂಡಿದೆ.
ಬೆಂಗಳೂರಿನಲ್ಲಿ 1 ಕೋಟಿ‌ 40 ಜನರು ವಾಸವಾಗಿದ್ದಾರೆ. ಹೊಸ ಮನೆಗಳು ನಿರ್ಮಾಣವಾಗುತ್ತಿರುವುದು ವಿದ್ಯುತ್ ಸಂಪರ್ಕದಿಂದ ಗೊತ್ತಾಗುತ್ತಿದೆ. ನೀರಿನ ಬೇಡಿಕೆ ಕೂಡ ಜಾಸ್ತಿ ಆಗುತ್ತಿದೆ. ಟ್ರಾಫಿಕ್ ಸಮಸ್ಯೆ ಸಹ ದಟ್ಟವಾಗಿ ಕಾಡುತ್ತಿದೆ. ಹೀಗಾಗಿ ಎಂಟು ಜನರ ತಂಡ ರಚಿಸಿ ಕೆಲವು ಸಮಸ್ಯೆಗಳ ಪಟ್ಟಿಯನ್ನು ಮಾಡಿ ಪರಿಹಾರೋಪಾಯ ಮಾರ್ಗವನ್ನು ಚರ್ಚೆ ಮಾಡಲಾಗುತ್ತಿದೆ.
ಬೆಂಗಳೂರು ಯಾವ ನಿಟ್ಟಿನಲ್ಲಿ ಬದಲಾವಣೆ ಆಗಬೇಕು ಅಂತ ಈಗಾಗಲೇ 70 ಸಾವಿರ ಸಲಹೆಗಳು ಬಂದಿದೆ. ಎಂಟು ಜನರ ತಂಡ ಈ ಸಲಹೆಗಳನ್ನು ಪರಿಶೀಲಿಸಿ, ಸದ್ಯದರಲ್ಲೇ ಅವರು ವರದಿ ನೀಡಲಿದ್ದಾರೆ.
ನಗರದ ಸೆಂಟ್ರಲ್‌ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಾಗರೀಕರ ಧ್ವನಿಯೇ ಸರ್ಕಾರ ಧ್ವನಿ ಎಂಬ ಶೀರ್ಷಿಕೆಯಡಿ ನಡೆದ ಬ್ರ್ಯಾಂಡ್ ಬೆಂಗಳೂರು ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ  ಡಿ.ಕೆ ಶಿವಕುಮಾರ್​​ ಮಾತನಾಡಿ, “ಸಹಾಯ ಹಸ್ತ” ವೆಬ್ ಸೈಟ್ ಓಪನ್ ಮಾಡಲಿದ್ದೇವೆ. ನೀರು, ವಿದ್ಯುತ್, ಕಸ ಇತ್ಯಾದಿ ಬಗ್ಗೆ ಜನರು ದೂರು ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಬೆಂಗಳೂರು ಸರ್ವತೋಮುಖ ಅಭಿವೃದ್ದಿ ವಿಚಾರವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ ರೆಡ್ಡಿ, ಶಾಸಕ ಎನ್ .ಎ ಹ್ಯಾರೀಸ್, ರವಿ ಸುಬ್ರಹ್ಮಣ್ಯ, ಎಂಎಲ್ ಸಿ ಶರವಣ‌ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ಎಂಟು ಪ್ರದೇಶಗಳು :
ಸಂಚಾರಯುಕ್ತ ಬೆಂಗಳೂರುಹಸಿರು ಬೆಂಗಳೂರುಸ್ವಚ್ಛ ಬೆಂಗಳೂರುಜನಸ್ನೇಹಿ ಬೆಂಗಳೂರುಆರೋಗ್ಯಕರ ಬೆಂಗಳೂರುಟೆಕ್ ಬೆಂಗಳೂರುಜಲ ಭದ್ರತೆ ಬೆಂಗಳೂರುಶೈಕ್ಷಣಿಕ ಬೆಂಗಳೂರು
ಬ್ರಾಂಡ್ ಬೆಂಗಳೂರು ಪರಿಕಲ್ಪನೆ:ಬ್ರಾಂಡ್ ಬೆಂಗಳೂರು ಪರಿಕಲ್ಪನೆಯು ಪರಿಣಾಮಕಾರಿ ನಗರ ಯೋಜನೆ, ಸುಸ್ಥಿರ ಒಳಚರಂಡಿ ವ್ಯವಸ್ಥೆಗಳು, ಸಮರ್ಥ ಸಾರಿಗೆ ವ್ಯವಸ್ಥೆಗಳು ಮತ್ತು ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ, ಪಾದಚಾರಿ ಸ್ನೇಹಿ ರಸ್ತೆಗಳು, ನಾಗರಿಕ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಆದ್ಯತೆ ನೀಡುತ್ತದೆ. ಸಕ್ರಿಯ ಸಾರಿಗೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಉತ್ತಮ-ಯೋಜಿತ ಕಾಲುದಾರಿಗಳು, ಮೀಸಲಾದ ಸೈಕ್ಲಿಂಗ್ ಲೇನ್‌ಗಳು ಮತ್ತು ಹಸಿರು ಸ್ಥಳಗಳನ್ನು ಮಾಲಿನ್ಯ-ಮುಕ್ತ ಮತ್ತು ಹಸಿರು ನಗರವನ್ನಾಗಿ ಮಾಡುವ ಪರಿಕಲ್ಪನೆ ಹೊಂದಿದೆ.
ಬ್ರಾಂಡ್ ಬೆಂಗಳೂರು ಲೋಗೋ ಬಿಡುಗಡೆ ಮಾಡಿದ ಬಿಬಿಎಂಪಿ



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 7 =
Remember me
