ಬೆಂಗಳೂರು:ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನಕಲಕುವ ವಿಡಿಯೋವನ್ನು ಹಂಚಿಕೊಂಡು, ನೊಂದ ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ.
#ChamarajanagaraInsideStoriesuncovers the horror of the Oxygen Tragedy which shattered the life of 36 families!We are the voice of their despair and helplessness, as they grapple the devastating loss, seeking answers from the Govt!Here is another heart wrenching account:pic.twitter.com/mZhjnaU5GW— DK Shivakumar (@DKShivakumar)August 1, 2021
#ChamarajanagaraInsideStoriesuncovers the horror of the Oxygen Tragedy which shattered the life of 36 families!We are the voice of their despair and helplessness, as they grapple the devastating loss, seeking answers from the Govt!Here is another heart wrenching account:pic.twitter.com/mZhjnaU5GW
ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದಾಗಿ, 36 ಜನರ ಕುಟುಂಬಗಳು ತಮ್ಮವರನ್ನು ಕಳೆದುಕೊಂಡು ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಈ ದುರಂತದ ಹಿಂದಿನ ಸತ್ಯ ಹೊರಬರುತ್ತಿದೆ. ಆಡಳಿತದ ದೌರ್ಜನ್ಯಕ್ಕೊಳಗಾದ ಅಸಹಾಯಕರ ದನಿಯಾಗಿ ನಾವಿದ್ದೇವೆ ಎನ್ನುವ ಮೂಲಕ ನೊಂದ ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ.
ಇದನ್ನೂ ಓದಿ:ಚಾಮರಾಜನಗರ ಆಕ್ಸಿಜನ್​ ದುರಂತ: ರಾಜ್ಯ ಸರ್ಕಾರದಿಂದ ನ್ಯಾಯಾಂಗ ತನಿಖೆಗೆ ಆದೇಶ
ದುರಂತದ ಹಿನ್ನೆಲೆ:
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೇ 02 ರಂದು 20ಕ್ಕೂ ಹೆಚ್ಚು ಜನ ಕರೊನಾ ಸೋಂಕಿತರು ಪ್ರಾಣಬಿಟ್ಟಿದ್ದರು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.ಆಕ್ಸಿಜನ್​ ಹಾಹಾಕಾರ ಭೀಕರತೆಗೆ ಚಾಮರಾಜಗರದಲ್ಲಿನ ಈ ಘಟನೆಯೇ ಸಾಕ್ಷಿಯಾಗಿತ್ತು. ಆಕ್ಸಿಜನ್​ ಇಲ್ಲದೆ 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಒಳಗೆ ಹೆಣವಾಗಿದ್ದರೆ, ಆಸ್ಪತ್ರೆ ಹೊರಗೆ ಹಲವರ ಶವ ಅನಾಥವಾಗಿ ಬಿದ್ದಿದ್ದ ದೃಶ್ಯ ಎಲ್ಲೆಡೆ ಹರಿದಾಡಿತ್ತು.
ಚಾಮರಾಜನಗರ ಆಕ್ಸಿಜನ್​ ದುರಂತ: ರೋಹಿಣಿ ಸಿಂಧೂರಿ ಸೇಫ್​​, ಕೊನೆಗೂ ಆ ದಿನದ ರಹಸ್ಯ ಬಿಚ್ಚಿಟ್ಟ ಸಮಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − three =
Remember me
