ಬೆಂಗಳೂರು:ನೈಸ್ ವಿಚಾರಕ್ಕೆ ಸಂಬಂಧಿಸಿದಂತೆ ಎಚ್​.ಡಿ. ಕುಮಾರಸ್ವಾಮಿ ಅವರು ದಾಖಲೆ ಬಿಡುಗಡೆಗೊಳಿಸಲಿದ್ದೇನೆ ಎಂದು ನೀಡಿದ ಹೇಳಿಕೆಗೆ ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್​ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಕೆಲ್ಲೂರು ಹಾಲು ಉತ್ಪಾದಕರ ಸಂಘಕ್ಕೆ ಜೆಡಿಎಸ್ ಬೆಂಬಲಿತರ ಆಯ್ಕೆ
“ಕುಮಾರಸ್ವಾಮಿ ಅವರನ್ನು ತಡೆದಿರುವವರು ಯಾರು? ಯಾವ ದಾಖಲೆಗಳನ್ನು ಬೇಕಾದರೂ ಬಿಡುಗಡೆ ಮಾಡಲಿ. ತನಿಖೆ ನಡೆಸುವ ಅವಕಾಶ ಅವರಿಗೆ ಇತ್ತಲ್ವಾ? ಪ್ರಜಾಪ್ರಭುತ್ವದಲ್ಲಿ ಯಾರು ಏನು ದಾಖಲೆಯನ್ನು ರಿಲೀಸ್​ ಮಾಡಲು ಸ್ವಾತಂತ್ರ್ಯರಿದ್ದಾರೆ. ಅದನ್ನು ಯಾರಾದರೂ ತಡೆಯಲು ಆಗುತ್ತಾ. ರಾಮನಗರಕ್ಕೆ ನೈಸ್​ನಿಂದ ಏನು ಅನುಕೂಲವಾಗ್ತಿತ್ತು, ಬೇರೆ ಬೇರೆಯವರದು ಎಲ್ಲೆಲ್ಲಿ ಏನಿದೆ. ಇದ್ಯಾವುದು ನನಗೆ ಗೊತ್ತಿಲ್ವಾ” ಎಂದು ಹೇಳಿದರು.
“ನೈಸ್​ನಿಂದ ಬಿಡದಿಗೆ, ಚನ್ನಪಟ್ಟಣಕ್ಕೆ ಏನು ನಷ್ಟವಾಗಿದೆ ಎಂಬುದು ನನಗೆ ತಿಳಿದಿಲ್ವಾ? ನನ್ನ ಬಳಿ ಯಾವ ದಾಖಲೆಗಳೂ ಇಲ್ಲ, ಅದರ ಅವಶ್ಯಕತೆಯೂ ನನಗಿಲ್ಲ. ಕಾನೂನಿನಲ್ಲಿ ತಪ್ಪು ಮಾಡಿದರೆ, ಅದನ್ನು ಅವರು ಮುಗಿಸಿಕೊಳ್ತಾರೆ. ಸದಾ ಸುದ್ದಿಯಲ್ಲಿರಲು ಕುಮಾರಸ್ವಾಮಿ ನನ್ನ ವಿರುದ್ಧ ಈ ರೀತಿ ಮಾತನಾಡುತ್ತಿದ್ದಾರೆ. ಅವರಿಗೆ ತಿಳಿದಿದೆ ನಾನು ಎಷ್ಟು ಹೆದರಿಕೊಳ್ಳುತ್ತೀನಿ ಎಂಬುದು” ಎಂದು ಹೇಳಿದರು.
ಇದನ್ನೂ ಓದಿ:ಸ್ನೇಹಿತನ ಮಗಳ ಮೇಲೆ ನಿರಂತರ ಅತ್ಯಾಚಾರ ಆರೋಪ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕನನ್ನು ವಜಾಗೊಳಿಸಿ ಕೇಜ್ರಿವಾಲ್ ಆದೇಶ
“ಕುಮಾರಸ್ವಾಮಿ ಅವರು ಏನು ಬೇಕಾದರು ಮಾಡಿಕೊಳ್ಳಲಿ. ಅವರು ಏನೋ ಮಾತನಾಡುತ್ತಿದ್ದಾರೆ. ಎಚ್​ಡಿಕೆ ಹೇಳಿಕೆಗಳಿಗೆಲ್ಲಾ ನಾನು ಉತ್ತರ ಕೊಡುವುದಿಕ್ಕೆ ಹೋಗುವುದಿಲ್ಲ. ನಮ್ಮ ಬಗ್ಗೆ ಮಾತನಾಡಿ ಸಂತೋಷ ಪಡುವವರನ್ನು ತಡೆಯಲು ಆಗುತ್ತದೆಯೇ? ಅವರು ಸಂತೋಷವಾಗಿರಲಿ ಬಿಡಿ” ಎಂದು ಹೇಳುವ ಮುಖೇನ ಎಚ್​.ಡಿ. ಕುಮಾರಸ್ವಾಮಿ ಹೇಳಿಕೆಗೆ ಟಾಂಗ್​ ನೀಡಿದ್ದಾರೆ.
ಕಾವೇರಿ ವಿಚಾರ; ರಾಜ್ಯದ ಜನತೆಗೆ ನಾನು ಉತ್ತರಿಸಬೇಕು, ವಿಪಕ್ಷದವರಿಗಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
