ಬೆಂಗಳೂರು:“ಬಿಬಿಎಂಪಿ ಗುತ್ತಿಗೆದಾರರ ಬಳಿ ಡಿಸಿಎಂ ಡಿಕೆ ಶಿವಕುಮಾರ್ ಹಣಕ್ಕೆ ಬೇಡಿಕೆ‌ಯಿಡುತ್ತಿದ್ದಾರೆ. ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ” ಎಂದು ಬಿಬಿಎಂಪಿ ಗುತ್ತಿಗೆದಾರರು ಡಿಕೆ ಶಿವಕುಮಾರ್ ವಿರುದ್ಧ ಸವಾಲು ಹಾಕಿದ್ದರು. ಇದೀಗ ಗುತ್ತಿಗೆದಾರರ ಆಣೆ ಪ್ರಮಾಣ ವಿಚಾರ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್ “ನಾನು ಯಾವ ಗುತ್ತಿಗೆದಾರನಿಗೂ ಉತ್ತರ ಕೊಡಲ್ಲ, ಯಾವ ಬಿಲ್ ವಿಚಾರವೂ ಗೊತ್ತಿಲ್ಲ” ಎಂದು ತಿಳಿಸಿದರು.
“ನನಗೂ ಪ್ರಜ್ಞೆ ಇದೆ, ರಾಜಕಾರಣ ಗೊತ್ತಿದೆ. ಯಾವ ಕಂಟ್ರಾಕ್ಟರ್ ಹಿಂದೆ ಯಾರಿದ್ದಾರೆ ನನಗೂ ಗೊತ್ತಿದೆ. ಯಾವ ಬ್ಲಾಕ್​​​​​ಮೇಲ್ ನನ್ನ ಮುಂದೆ ನಡೆಯಲ್ಲ, ನಾವು ವಿಪಕ್ಷ ಇದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರ್ತಿರಲಿಲ್ವಾ.?, ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ. ಕೆಲಸ ಮಾಡಿದರೆ ಹಣ ಬಿಡುಗಡೆ ಆಗುತ್ತದೆ, ಇಲ್ಲ ಅಂದ್ರೆ ಹಣ ಇಲ್ಲ” ಎಂದು ಡಿಕೆಶಿ ಹೇಳಿದರು.
“ಒಂದೇ ವಾರದಲ್ಲಿ ಹಣ ಬಿಡುಗಡೆ ಆಗುತ್ತಾ ಎಂದು ಪ್ರಶ್ನಿಸಿರುವ ಡಿಕೆಶಿ, ಯಾವ ಒತ್ತಡ ಇದ್ರೂ ತಡೆದುಕೊಳ್ಳಲು ರೆಡಿ. ಯಾರಿಗೋ ಬ್ಲಾಕ್ ಮೇಲ್ ಮಾಡುವಂತೆ ನನಗೆ ಮಾಡಲು ಬರಬೇಡಿ, ನನಗೆ ಥ್ರೆಟ್ ಮಾಡಿದ್ರೆ ಕೇಳ್ತೀನಾ.?ಬಿಜೆಪಿ ವಿರುದ್ಧ ನಾವು ಆರೋಪ ಮಾಡಿದ್ದು ಸತ್ಯ. ಲೆಟರ್ ಕೊಟ್ಟಿದ್ದು ಸತ್ಯ. ಅಶ್ವಥ್ ನಾರಾಯಣ್, ಬೊಮ್ಮಾಯಿ ಸೇರಿದಂತೆ ಎಲ್ಲರೂ ತನಿಖೆ ಮಾಡಿ ಅಂತ ಸದನದಲ್ಲಿ ಅಂದಿದ್ದು ಸತ್ಯ” ಎಂದರು.
“ಬಿಲ್ ಬಗ್ಗೆ ನೀವು ಯಾಕೆ ತಲೆ ಕೆಡಿಸ್ಕೊಳ್ತೀರಾ, ತಪ್ಪು ಇಲ್ಲದವರು ಯಾಕೆ ವಿರೋಧ ಮಾಡಬೇಕು, 25 ಸಾವಿರ ಕೋಟಿ ಬಿಲ್ಲಿದೆ ಇರಿಗೇಷನ್ ಡಿಪಾರ್ಟ್ಮೆಂಟ್ ನಲ್ಲಿ. ಎರಡುವರೆ ಕೋಟಿಯಲ್ಲಿ, ಯಾರಿಗೆ ಹಣ ಕೊಡಲು ಸಾಧ್ಯ” ಎಂದು ಪ್ರಶ್ನಿಸಿದರು ಡಿಕೆಶಿ.
‘ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ’: ಡಿಕೆಶಿಗೆ ಸವಾಲು ಹಾಕಿದ ಬಿಬಿಎಂಪಿ ಗುತ್ತಿಗೆದಾರರು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
