ಬೆಂಗಳೂರು:ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ 41ನೇ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್​ ಇಂದು ಪದಗ್ರಹಣ ಮಾಡಿದ್ದು, ಡಿಕೆಶಿ ಪಟ್ಟಾಭಿಷೇಕ ಸಮಾರಂಭವನ್ನು ರಾಜ್ಯದ ವಿವಿಧೆಡೆ 7,800 ಸ್ಥಳಗಳಲ್ಲಿ ಎಲ್​ಇಡಿ ಮೂಲಕ ನೇರ ಪ್ರಸಾರದ ಕಾಂಗ್ರೆಸ್​ ​ ಕಾರ್ಯಕರ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹಲವೆಡೆ ಡಿಕೆಶಿ ಅಭಿಮಾನಿಗಳು ಕೆಪಿಸಿಸಿ ನೂತನ ಸಾರಥಿಯ ಹೆಸರಲ್ಲಿ ಪೂಜೆ ಸಲ್ಲಿಸಿ ಅಭಿಮಾನ ಮೆರೆದರು. ಬೆಳಗ್ಗೆ 11ಕ್ಕೆ ಬೆಂಗಳೂರಿನ ಕ್ವೀನ್ಸ್​ ರಸ್ತೆಯ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಆರಂಭವಾದ ಡಿಕೆಶಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ಝೂಮ್​ ಕಾನ್ಫರೆನ್ಸ್​, 100ಕ್ಕೂ ಹೆಚ್ಚು ಫೇಸ್​ಬುಕ್​ ಖಾತೆಗಳಿಂದ ಲೈವ್​ನಲ್ಲಿ ಲಕ್ಷಾಂತರ ಜನರು ವೀಕ್ಷಿಸುತ್ತಿದ್ದಾರೆ. ಇದೇ ವೇಳೆ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್​, ಈಶ್ವರ ಖಂಡ್ರೆ, ಸತೀಶ್​ ಜಾರಕಿಹೊಳಿ ಅವರೂ ಪದಗ್ರಹಣ ಮಾಡಲಿದ್ದಾರೆ.ಇದನ್ನೂ ಓದಿರಿಇನ್ನೂ ಒಂದು ವಾರ ಮಾರುಕಟ್ಟೆಗಳು ಬಂದ್​!
ನವ ದೃಷ್ಟಿಕೋನ, ನವ ಚೈತನ್ಯ, ನವ ಕರ್ನಾಟಕ ಮತ್ತು ಪರಿಕಲ್ಪನೆಯಲ್ಲಿ ಪದಗ್ರಹಣ ನಡೆಯಿತು. ನಿಕಟಪೂರ್ವ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಜವಾಬ್ದಾರಿಯನ್ನು ಹೊಸ ತಂಡಕ್ಕೆ ಹಸ್ತಾಂತರಿಸುವರು.
ಡಿ.ಕೆ ಶಿವಕುಮಾರ್ ಅವರು ಪದಗ್ರಹಣ ಕಾರ್ಯಕ್ರಮಕ್ಕೂ ಮುನ್ನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂಭಾಗ ಧ್ವಜಾರೋಹಣ ನೆರವೇರಿಸಿದರು.
ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್​ ಸೋಂಕು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − twelve =
Remember me
