ಮೈಸೂರು:ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೆ ತಿಹಾರ್ ಜೈಲಿಗೆ ಹೋಗುವ ಕಾಲ ಸನ್ನಿಹಿತವಾಗಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಕೇಂದ್ರ ಸರ್ಕಾರ ದಮ್ಮು, ತಾಕತ್ ತೋರಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಶಿವಕುಮಾರ್​ ಮತ್ತು ಅವರ ಸಂಸದ ಡಿಕೆ ಸುರೇಶ್ ಇಬ್ಬರೂ ಗೂಂಡಾಗಳು ಎಂಬುದು ರಾಜ್ಯ ಜನರಿಗೆ ತಿಳಿದಿದೆ ಎಂದು ಟೀಕಿಸಿದರು.
ರಾಷ್ಟ್ರದ್ರೋಹಿ ಹೇಳಿಕೆಗೆ ಡಿಕೆ ಸುರೇಶ್ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿರುವ ಈಶ್ವರಪ್ಪ, ಕ್ರಮ ಕೈಗೊಳ್ಳಿ ಅಂದರೆ ನನಗೆ ನೋಟಿಸ್ ಕಳುಹಿಸುತ್ತಾರೆ. ರಾಷ್ಟ್ರ ದ್ರೋಹಿಗಳನ್ನ ರಕ್ಷಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಂಪೇಗೌಡ ಅವರು ಡಿಕೆ ಶಿವಕುಮಾರ್​ ಆಸ್ತಿ ಆಲ್ಲ. ಅವರು ರಾಜ್ಯ ಕಟ್ಟಿದ ವ್ಯಕ್ತಿಯ ಜೊತೆ ಹೋಲಿಕೆ ಮಾಡುವುದು ಸಮಂಜಸವಲ್ಲ ಎಂದು ಹೇಳಿದರು.ನನ್ನ ಮಾತಿಗೆ ಸಿನಿಮಾ ಸ್ಟೈಲ್​ನಲ್ಲಿ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅವರ ಅರ್ಧ ಜೀವನ ತಿಹಾರ್ ಜೈಲಿನಲ್ಲಿ ಸೆಟ್ಲ್‍ಮೆಂಟ್ ಆಗಿದೆ. ಉಳಿದ ಇನ್ನೊಂದು ಪಾರ್ಟ್ ಕೂಡ ಜೈಲಿನಲ್ಲೇ ಸೆಟ್ಲ್‍ಮೆಂಟ್ ಆಗುತ್ತೆ. ನೋಡ್ತಾ ಇರಿ ಇಷ್ಟರಲ್ಲೆ ಡಿಕೆ ಶಿವಕುಮಾರ್ ಮತ್ತೆ ತಿಹಾರ್ ಜೈಲು ಸೇರುತ್ತಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯದ ಕೋರ್ ಕಮಿಟಿ ಸಭೆ ಇದೆ. ರಾಜ್ಯದ ಕಾರ್ಯಕರ್ತರ ದೃಷ್ಟಿಯಲ್ಲಿ ಒಳ್ಳೆಯದು. ಮುಂದಿನ ಅಭ್ಯರ್ಥಿಗಳ ಅಯ್ಕೆ ಬಗ್ಗೆ ಚರ್ಚೆ ಅಗಬಹುದು. ಮೈತ್ರಿ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ 2 ದಿನ ಊಟ ಬಿಡಿ: ಮಕ್ಕಳಿಗೆ ಶಾಸಕ ಸಂತೋಷ್‌ ಕರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + nineteen =
Remember me
