ದೇವನಹಳ್ಳಿ:ಮಾಜಿ ಶಾಸಕ ವೆಂಕಟಸ್ವಾಮಿ ನಿಧನದ ಹಿನ್ನಲೆ ಕೆಪಿಸಿಸಿ ಅಧ್ಯಕ್ಷ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಈ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖಂಡನ ಜತೆ ಮಾತನಾಡುತ್ತಾ ನನ್ನನ್ನು ಸಿಎಂ ಯಾವಾಗ ಮಾಡ್ತೀರಾ ಎಂದು ಹೇಳುತ್ತಾ ಕೆಹೆಚ್ ಮುನಿಯಪ್ಪ ಮತ್ತು ಬಿಜೆಪಿ ಮುಖಂಡ ಬಸವರಾಜ್ ಎಂಬುವವರ ನಡುವೆ ಕೂತು ಸಿಎಂ ಸ್ಥಾನದ ಬೇಡಿಕೆ ಇಟ್ಟರು. ನನ್ನ ಆತ್ಮೀಯನಿಗೆ ಕೇಳ್ತಿದ್ದೀನಿ ನನ್ನನ್ನು ಸಿಎಂ ಮಾಡಬೇಕು ಅಂತಿದ್ದಿಯೋ ಇಲ್ವೋ ಎಂದು ಕೆಹೆಚ್ ಮುನಿಯಪ್ಪಗೆ ಹೇಳುವ ರೀತಿಯಲ್ಲಿತ್ತು. ಡಿಕೆಶಿ ಮಾತಿಗೆ ದೇವನಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕೆಹೆಚ್ ಮುನಿಯಪ್ಪ ನಕ್ಕು ಸುಮ್ಮನಾದರು.
ವೆಂಕಟಸ್ವಾಮಿ ಅಂತಿಮ ದರ್ಶನ ಪಡೆದ ಮಾತನಾಡಿದ ಡಿಕೆಶಿ “ನನ್ನ ಸ್ನೇಹಿತರು ನನ್ನ ಜೊತೆ ಶಾಸಕರಾಗಿದ್ದ ವೆಂಕಟಸ್ವಾಮಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನ ಸುದ್ದಿ ಕೇಳಿ ನನಗೆ ಶಾಕ್ ಆಯ್ತು. ಸಂಘಟನೆ ಮಾಡಿಕೊಂಡಿದ್ದು ಕ್ಷೇತ್ರದ ಟಿಕೆಟ್ ಬಯಸಿದ್ದವರು‌. ಅವರ ಸಾವಿನಿಂದ ನಮಗೆಲ್ಲ ತುಂಬಾ ದುಃಖವಾಗಿದೆ” ಎಂದರು.
ವೆಂಕಟಸ್ವಾಮಿ ಅಂತಿಮ ದರ್ಶನ ಪಡೆದ ಡಿಕೆ ಶಿವಕುಮಾರ್ ಬಂಡಾಯಗಾರರೊಂದಿಗೆ ಮಾತುಕತೆ ನಡೆಸಿದರು. ದೇವನಹಳ್ಳಿ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಸಿ ಶ್ರೀನಿವಾಸ್ ಹಾಗೂ ಶಾಂತಕುಮಾರ್ ಜೊತೆ ಡಿಕೆ ಗುಪ್ತ ಚರ್ಚೆ ನಡೆಸಿದರು. ಈಗಾಗಲೇ ಕೆಹೆಚ್ ಮುನಿಯಪ್ಪಗೆ ದೇವನಹಳ್ಳಿ ಟಿಕೆಟ್ ಆದ ಹಿನ್ನಲೆ ಎಲ್ಲಿಯೂ ಕಾಣಿಸಿಕೊಳ್ಳದೆ ಇಬ್ಬರು ಆಕಾಂಕ್ಷಿಗಳು ಮುನಿಸಿಕೊಂಡಿದ್ದಾರೆ. ಹೀಗಾಗಿ ವೆಂಕಟಸ್ವಾಮಿ ಅಂತಿಮ ದರ್ಶನ ಜತೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸಿ ಶ್ರೀನಿವಾಸ್ ಒಬ್ಬರನ್ನೆ ಪಕ್ಕಕ್ಕೆ ಕರೆದುಕೊಂಡು ಡಿಕೆಶಿ ಮಾತುಕತೆ ನಡೆಸಿದ್ದು ಕೂಡ ವಿಶೇಷ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 20 =
Remember me
