ಬೆಂಗಳೂರು:ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿಯನ್ನು ಪಡೆದುಕೊಂಡಿರುವ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ರಾಜ್ಯದ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ಇತ್ತೀಚೆಗಷ್ಟೇ ಭೇಟಿ ಕೊಟ್ಟಿದ್ದರು. ಒಂದು ದಿನದ ಮಟ್ಟಕ್ಕೆ ಮನಯೊಳಗೆ ಇದ್ದು, ವಾಪಸ್​ ಬಂದ ಪ್ರದೀಪ್​ ವಿರುದ್ಧ ಇದೀಗ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕಲ್ಯಾಣ ನಾಡಲ್ಲಿ ಜನಾಂದೋಲನವಾಗಲಿ : ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ಆಶಯ
ಬಿಗ್​ ಬಾಸ್​ ಮನೆಗೆ ಒಬ್ಬ ಶಾಸಕ ಹೋಗುವುದು ಸರಿಯೇ? ಹೋಗಬೇಕಿತ್ತಾ ಎಂಬ ಹಲವು ಪ್ರಶ್ನೆಗಳು ಕೇಳಿಬಂದಿದ್ದು, ಈ ಕುರಿತು ಸ್ವತಃ ಪ್ರದೀಪ್​ ಈಶ್ವರ್​ ಇಂದು ತಮ್ಮ ಶೈಲಿಯಲ್ಲೇ ಉತ್ತರಿಸಿದ್ದಾರೆ. ಈ ಮಧ್ಯೆ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್​ ಅವರನ್ನು ಪ್ರದೀಪ್​ ಈಶ್ವರ್​​ ಅವರು ಬಿಗ್​ಬಾಸ್​ ಮನೆಯೊಳಗೆ ಪ್ರವೇಶಿಸಿದರ ಬಗ್ಗೆ ಪ್ರಶ್ನಿಸಲಾಯಿತು.
ಈ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್​, “ಬಿಗ್ ಬಾಸ್ ಕನ್ನಡಕ್ಕೆ ಪ್ರವೇಶಿಸುವುದು ಅವರ ವೈಯಕ್ತಿಕ ಆಯ್ಕೆಯಾಗಿದ್ದು, ಹಾಗೆ ಮಾಡುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ” ಎಂದು ಹೇಳಿದರು.
ಇದನ್ನೂ ಓದಿ:ವಯಸ್ಸು 88, ಹುಮ್ಮಸ್ಸು 18! ವಿವಿಧ ಸ್ಪರ್ಧೆಗಳಲ್ಲಿ 20 ಪದಕ ಗೆದ್ದ ಹಾವೇರಿಯ ಸಿದ್ದಮತಿ ನೆಲವಗಿ ಯಶೋಗಾಥೆ
ಬಿಗ್​ಬಾಸ್​ ಮನೆಗೆ ಅತಿಥಿಯಾಗಿ ಬಂದ ಶಾಸಕ ಪ್ರದೀಪ್​ ಈಶ್ವರ್​ಗೆ ರಿಯಾಲಿಟಿ ಶೋ ತಂಡ ಹಣವನ್ನು ಕೊಟ್ಟಿದೆ. ಬಿಗ್​ಬಾಸ್​ನಿಂದ ಸಿಕ್ಕ ಹಣವನ್ನು ಪ್ರದೀಪ್​ ಅನಾಥಾಶ್ರಮಕ್ಕೆ ನೀಡುವುದಾಗಿ ಹೇಳಿದರು. ಸದ್ಯ ಶಾಸಕ ಮನೆಯೊಳಗೆ ಹೋದ ನಂತರ ಮತ್ತು ಹೊರಬಂದ ನಂತರವೂ ಸಾಕಷ್ಟು ಟ್ರೋಲ್​ ಮತ್ತು ವಿವಾದಗಳಿಗೆ ಗುರಿಯಾಗಿದ್ದಾರೆ.
ಇಂಡೋ-ಫ್ರೆಂಚ್ ಉತ್ಸವದಲ್ಲಿ 9 ಪ್ರಶಸ್ತಿಗಳನ್ನು ಬಾಚಿಕೊಂಡ ಸಿನಿಮಾ ಈಗ ಒಟಿಟಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + two =
Remember me
