ಬೆಂಗಳೂರು: ಕಳೆದ ಬಾರಿ ಮಂಡಿಸಿದ್ದ ಬಜೆಟ್​ನಲ್ಲಿ ಏನು ಮಾಡಿದ್ರಿ ಎಂದು ಕೇಳಿದ್ದೆವು. ಈ ಪ್ರಶ್ನೆಗೆ ಇನ್ನೂ ಉತ್ತರ ಬಂದಿಲ್ಲ. 90% ಆಶ್ವಾಸನೆಯನ್ನು ಈವರೆಗೆ ಈಡೇರಿಸಿಲ್ಲ. ಜನರ ಕಿವಿಗೆ ಚೆಂಡು ಹೂ ಇಟ್ಟಿದ್ದಾರೆ. ಇದು ಇದು ಬಿಸಿಲ‌ ಕುದುರೆ ಬಜೆಟ್ ಎಂದು ಕೆಪಿಸಿಸಿ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್ ಪ್ರತಿಕ್ರಿಯಿಸಿದ ಡಿಕೆಶಿ, ಜಿಎಸ್‌ಟಿ‌ ಹಣದಲ್ಲಿ 15% ಹಣ ಕೂಡ‌ ರಾಜ್ಯಕ್ಕೆ ಬರುವುದಿಲ್ಲ. ಈ‌ ಬಾರಿಯ ಬಜೆಟ್​ನ್ನು ಜಾತ್ರೆಯ ಕನ್ನಡಕ‌ ಹಾಕಿಕೊಂಡು ನೋಡಬೇಕು. ಧಮ್ ಧೈರ್ಯ ಅಂತ ಭಾಷ‌ಣ ಮಾಡುವ ಸಿಎಂ ಭಾಷಣದಲ್ಲಿ ಧಮ್ ಇರಲಿಲ್ಲ ಎಂದು ವ್ಯಂಗ್ಯವಾಡಿದರು.
ಬೊಮ್ಮಾಯಿ ಅವರು ಬಿಜೆಪಿ ಎಂಎಲ್​ಎ‌ ಕ್ಷೇತ್ರಗಳಿಗೆ ಬಜೆಟ್​ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಮಹಾದಾಯಿ, ಕೃಷ್ಣಾಗೆ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ. ಈ ಮೂಲಕ ಡಬಲ್ ಇಂಜಿನ್ ಆಫ್ ಆಗಿದೆ. ಮನೆಯ ಶೋಕೇಸ್​​ನಲ್ಲಿ ಪ್ರದರ್ಶನಕ್ಕೆ ಇಟ್ಟುವಂತಹ ಬಜೆಟ್ ಇದಾಗಿದೆ. ಈ ಬಜೆಟ್​​ನಿಂದ ಕಾಂಗ್ರೆಸ್​ಗೆ ಇನ್ನಷ್ಟು ಶಕ್ತಿ ಬರಲಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಅವಧಿಯ ಕೊನೆಯ ಬಜೆಟ್ ಮಂಡನೆ ಮಾಡಿದ್ದಾರೆ. ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಬೊಮ್ಮಾಯಿ ಅವರ ಪಾಲಿಗೆ ಇದು 2ನೇ ಬಜೆಟ್​ ಮಂಡನೆಯಾಗಿದೆ. ಈ ಬಾರಿಯ ಬಜೆಟ್​ ಗಾತ್ರ ಒಟ್ಟು 3 ಲಕ್ಷ 9 ಸಾವಿರ 182 ಕೋಟಿ ರೂ. ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
