ಬೆಂಗಳೂರು:ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಬದಲು ಬೇರೆಯವರನ್ನು ನೇಮಿಸಬೇಕೆಂದು ಒಂದು ಬಣದಿಂದ ಒತ್ತಡತಂತ್ರ ಆರಂಭವಾಗಿರುವ ಬೆನ್ನಲ್ಲೇ, ಕೆಪಿಸಿಸಿ ಮುಂಚಿನ ಕಾರ್ಯಚಟುವಟಿಕೆಗೆ ಡಿಕೆಶಿ ಕಾರ್ಯಯೋಜನೆ ಸಿದ್ಧಪಡಿಸಿದ್ದು, ಆ ಚೌಕಟ್ಟಿನಲ್ಲೇ ಮತ್ತು ಕಾಲಮಿತಿಯಲ್ಲಿ ಕೆಲಸ ಮಾಡ ಬೇಕೆಂದು ಪಕ್ಷದ ದಂಡನಾಯಕರಿಗೆ ಸ್ಪಷ್ಟಸೂಚನೆ ನೀಡಿದ್ದಾರೆ.
ಪಕ್ಷದ ಎಲ್ಲ ಚಟುವಟಿಕೆ ಮೇಲೆ ಗಮನಹರಿಸಲು, ಪರಾಮರ್ಶೆ ಮಾಡಲು ಮತ್ತು ನಿಯಂತ್ರಿಸುವ ಸಲುವಾಗಿ ಕ್ರಿಯಾಯೋಜನೆ ರೂಪಿಸಲಾಗಿದೆ. ಈ ಕ್ರಿಯಾಯೋಜನೆ ಮುಂಬರುವ ದಿನಗಳಲ್ಲಿ ಕಾಲಮಿತಿಯೊಳಗೆ ಕಾರ್ಯ ನಿರ್ವಹಣೆಗೆ ನೀಲಿನಕ್ಷೆಯೂ ಆಗಿರಲಿದೆ. ಕೈಗೊಳ್ಳಬೇಕಾದ ಕಾರ್ಯಗಳು ಮತ್ತು ಅವುಗಳನ್ನು ಪೂರ್ಣಗೊಳಿಸುವ ಸಮಯ ಮಿತಿ ಸೂಚಿಸಲಿದೆ. ಹಾಗೆಯೇ, ಪಕ್ಷ ಸಂಘಟನೆ, ತಕ್ಷಣಕ್ಕೆ, ಮಧ್ಯಮ, ದೀರ್ಘಕಾಲೀನ ಯೋಜನೆಗಳಾಗಿ ವಿಂಗಡಿಸಲಾಗಿದೆ. ಮುಖ್ಯವಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಿ ಎಲ್ಲರಿಗೂ ಜವಾಬ್ದಾರಿ ನೀಡಲು ಉದ್ದೇಶಿಸಲಾಗಿದೆ. ಕಾರ್ಯಯೋಜನೆಯನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು, ಸಂಘಟನಾ ಸನ್ನದ್ಧತೆ ಮತ್ತು ಚುನಾವಣೆಗೆ ಸಿದ್ಧವಾಗಿರುವಂತೆ ರೂಪಿಸಲಾಗಿದೆ. ಬೂತ್, ಬ್ಲಾಕ್ ಮಟ್ಟದಿಂದ ಸರ್ವಶಕ್ತಿ ವಿನಿಯೋಗಿಸಿ ಸದಾ ಸಕ್ರಿಯರಾಗಿರುವುದು ಉದ್ದೇಶ. ಇದು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವ ಭಾಗವೂ ಆಗಿರಲಿದೆ.
ಗುರಿ ನಿಗದಿ:ಎಲ್ಲ ಕೆಪಿಸಿಸಿ ಪದಾಧಿಕಾರಗಳನ್ನು ಜಿಲ್ಲಾ, ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳನ್ನಾಗಿ ನೇಮಿಸುತ್ತಿದೆ, ಅವರು ಮುಂದೆ ಯಾವ ಕಾರ್ಯ ಮಾಡಬೇಕೆಂದು ಸಂದೇಶ ಕಳಿಸಲಾಗುತ್ತದೆ. ಕೆಪಿಸಿಸಿ ವಿಭಾಗವಾರು ಸಭೆಯನ್ನು ಜುಲೈ- ಆಗಸ್ಟ್​ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಜಿಲ್ಲಾ ಮಟ್ಟದಲ್ಲಿ ಒಂದು ತಿಂಗಳ ಒಳಗಾಗಿ ಮತ್ತು ಪ್ರತಿ ಬ್ಲಾಕ್ ಮಟ್ಟದಲ್ಲಿ ಎರಡು ತಿಂಗಳ ಒಳಗಾಗಿ ಎಲ್ಲ ಮುಂಚೂಣಿ ಘಟಕಗಳು, ಸೆಲ್​ಗಳು ಮತ್ತು ವಿಭಾಗಳಗಳ ಅಧ್ಯಕ್ಷರ ನೇಮಕಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಗುರಿ ನೀಡಲಾಗಿದೆ.
ದಾಖಲೆಗಳನ್ನು ಸುಸ್ಥಿತಿಯಲ್ಲಿಡುವ ಸಲುವಾಗಿ ಬೂತ್ ಮಟ್ಟದ ಈವರೆಗಿನ ಎಲ್ಲ ಪದಾಧಿಕಾರಿಗಳು, ಹಿರಿಯ ನಾಯಕರು, ಎಲ್ಲ ಮುಂಚೂಣಿ ಘಟಕ, ಸೆಲ್ ಮತ್ತು ವಿಭಾಗಗಳ ಪದಾಧಿಕಾರಿಗಳ ವಿವರ ಮತ್ತು ಸಂಪರ್ಕದ ವಿವರ ಗಣಕೀಕರಣಗೊಳಿಸಲಾಗುತ್ತದೆ. ಬೂತ್ ಮತ್ತು ಬ್ಲಾಕ್ ಮಧ್ಯೆ ತಳಮಟ್ಟದಲ್ಲಿ ಸಮನ್ವಯತೆ ಸಾಧಿಸುವ ಸಲುವಾಗಿ ವಾರ್ಡ್, ಪಂಚಾಯಿತಿ ಸಮಿತಿ ರಚನೆ ಸಾಧ್ಯತೆಯ ಅನ್ವೇಷಣೆ ಮಾಡಲೂ ಸೂಚಿಸಲಾಗಿದೆ. ಪಕ್ಷದ ಎಲ್ಲ ವರ್ಗಗಳ ಜನರು ಒಳಗೊಳ್ಳುವಂತೆ ಮಾಡುವ ಸಲುವಾಗಿ ಕೆಪಿಸಿಸಿ ಮುಂಚೂಣಿ ಘಟಕಗಳು, ವಿಭಾಗಗಳ ಸದಸ್ಯತ್ವ ಅಭಿಯಾನ ಪುನರಾರಂಭ ಮಾಡಲು ಸಹ ಉದ್ದೇಶಿಸಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ನಾಯಕರು ಮತ್ತು ಕೆಪಿಸಿಸಿ ಪದಾಧಿಕಾರಿಗಳ ನೇತೃತ್ವದಲ್ಲಿ ಒಂದು ಸಕ್ರಿಯ ತಂಡವು ಎಲ್ಲ ಚುನಾವಣಾ ಪ್ರಕ್ರಿಯೆ ಮತ್ತು ಕರ್ತವ್ಯಗಳ ಸಮನ್ವಯ ನಡೆಸುವುದು. ಇದರ ಉದ್ದೇಶವು ಪಕ್ಷದ ಅಭ್ಯರ್ಥಿಗೆ ಸಕಲ ಸಹಕಾರ ನೀಡುವುದು, ಪರಿಸ್ಥಿತಿ ನಿಭಾಯಿಸುವುದು ಮತ್ತು ಕೆಪಿಸಿಸಿ ವರದಿ ಸಲ್ಲಿಸುವ ಜವಾಬ್ದಾರಿ ನೀಡಲಾಗುತ್ತದೆ. ಪಕ್ಷದ ಎಲ್ಲ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ವಿರೋಧ ಪಕ್ಷದ ನಾಯಕರ ಸಭೆಯನ್ನು ವಿಭಾಗ ಅಥವಾ ಜಿಲ್ಲಾ ಮಟ್ಟದಲ್ಲಿ ಕರೆದು ಅವರ ಸಲಹೆ ಪಡೆಯಬೇಕೆಂದು ಪದಾಧಿಕಾರಿಗಳಿಗೆ ಸೂಚಿಸಿದ್ದು, ಅವರಿಗೆ ತಳಮಟ್ಟದಲ್ಲಿ ಕೆಲಸ ಮಾಡಲು ಸೂಕ್ತ ಜವಾಬ್ದಾರಿ ವಹಿಸುವ ಮೂಲಕ ಪಕ್ಷಕ್ಕೆ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕೆಂದು ತಿಳಿಸಲಾಗಿದೆ.
ಮುಂಬರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪದಾಧಿಕಾರಿಗಳಿಗೆ ಜವಾಬ್ದಾರಿ ನಿಗದಿಮಾಡಲಾಗಿದೆ. ಯೋಜನಾ ಬದ್ಧವಾಗಿ ಮುಂದುವರಿಯಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಪ್ರತಿ ತಿಂಗಳೂ ರೀವ್ಯೂ ಮಾಡಲಾಗುತ್ತದೆ.
| ಜಿ.ಸಿ.ಚಂದ್ರಶೇಖರ್ ಕೆಪಿಸಿಸಿ ಕಾರ್ಯಾಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
