ಬೆಂಗಳೂರು:ಸಿಬಿಐ ಸಮನ್ಸ್​ ನೀಡಿದ್ದ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬುಧವಾರ ಸಿಬಿಐ ಕಚೇರಿಗೆ ಆಗಮಿಸಿದರು.
ಮಗಳು ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್​ ಹೆಗ್ಡೆ ಪುತ್ರ ಅಮರ್ತ್ಯ ಅವರ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದ ದಿನವೇ (ನ.19) ಡಿಕೆಶಿ ಕಚೇರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು. ನ.23ರಂದು ವಿಚಾರಣೆಗೆ ಹಾಜರ್​ ಆಗುವಂತೆ ಸೂಚಿಸಿತ್ತು. ನ.23, 24ರಂದು ಡಿಕೆಶಿ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗೆ ಕರೆ ಮಾಡಿ 2 ದಿನ ಟೈಂ ಕೇಳಿದ್ದರು. ನ.25ರ ಸಂಜೆ 4 ಗಂಟೆಗೆ ಸಿಬಿಐ ಕಚೇರಿಗೆ ಹಾಜರಾಗುವುದಾಗಿ ಹೇಳಿದ್ದರು.
ಅಕ್ಟೋಬರ್ 5ರಂದು ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು, ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು. 2013ರ ಏಪ್ರಿಲ್​ನಿಂದ 2018ರ ಏಪ್ರಿಲ್ ವರೆಗಿನ ಆರ್ಥಿಕ ವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದ್ದು, 74.93 ಕೋಟಿ ರೂ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಡಿಕೆಶಿ ಮೇಲಿದೆ. ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಸಿಬಿಐ, ಡಿಕೆ ಸಹೋದರರ ಮನೆ ಸೇರಿ ಒಟ್ಟು 14 ಕಡೆ ದಾಳಿ ಮಾಡಿತ್ತು. ದಾಳಿ ವೇಳೆ 57 ಲಕ್ಷ ರೂಪಾಯಿ ನಗದು ಹಾಗೂ ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು. ದಾಖಲೆಗಳ ಪರಿಶೀಲನೆ ನಂತರ ವಿಚಾರಣೆಗೆ ಹಾಜರಾಗಲು ಸಿಬಿಐ ನೋಟಿಸ್​ ನೀಡಿತ್ತು.
ವಕೀಲರ ಜತೆ ಚರ್ಚಿಸಿ ವಿಚಾರಣೆ ಎದುರಿಸಲು ಡಿಕೆಶಿ ತಯಾರಾಗಿಯೇ ಸಿಬಿಐ ಕಚೇರಿಗೆ ಬಂದಿದ್ದಾರೆ. ಬುಧವಾರ ಮಧ್ಯಾಹ್ನ ಸುಮಾರು 3.55ಕ್ಕೆ ಸಹೋದರ ಡಿ.ಕೆ. ಸುರೇಶ್​ ಜತೆ ಡಿಕೆಶಿ ಗಂಗಾನಗರದ ಸಿಬಿಐ ಕಚೇರಿಗೆ ಆಗಮಿಸಿದರು.
ಡಿಸಿಎಂ-ಶಾಸಕರಿಗೆ ಉಡುಗೊರೆಯಾಗಿ ಬಂತು 3 ಚಿನ್ನದ ಕಿರೀಟಗಳು! ಆದ್ರೂ ಸಿಡಿಮಿಡಿಗೊಂಡ ಶಾಸಕ

ದುಡ್ಡು ಸಿಗುತ್ತೆ ಅಂತ ಗಂಡನ ಮನೆಗೆ ಓಡೋಡಿ ಬಂದವಳು ಆ ಮನೆಯಲ್ಲೇ ಹೆಣವಾದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 19 =
Remember me
