ಬೆಂಗಳೂರು:“ಎಚ್​.ಡಿ. ಕುಮಾರಸ್ವಾಮಿ ಜತೆ ಇದ್ದುಕೊಂಡು ಗುಂಡಿ ತೋಡಿದರು. ಅಬ್ಬಬ್ಬಾ.. ಯಾವ ಸಿನಿಮಾದಲ್ಲೂ ನೋಡಲು ಆಗೋದಿಲ್ಲ. ಇವರು ಎಲ್ಲ ಆಟಗಳನ್ನು ಆಡಿದ್ದಾರೆ. ಜತೆಯಲ್ಲಿ ಇದ್ದುಕೊಂಡು ದ್ರೋಹ ಮಾಡುವವರನ್ನು ಏನಂತಾರೆ? ಮೀರ್​ ಸಾದಿಕ್​ ಎನ್ನದೆ ಇನ್ನೇನು ಹೇಳಬೇಕು ಹೇಳಿ?… ”
ಇದು ಬುಧವಾರ ಕೆಪಿಸಿಸಿ ಅಧ್ಯ ಡಿ.ಕೆ. ಶಿವಕುಮಾರ್​ ವಿರುದ್ಧ ಉಪ ಮುಖ್ಯಮಂತ್ರಿ ಡಾ. ಸಿ.ಎನ್​. ಅಶ್ವತ್ಥನಾರಾಯಣ ಮತ್ತೊಮ್ಮೆ ಹರಿಹಾಯ್ದ ಪರಿ.
”ಸರ್ಕಾರ ಪತನ ಮಾಡಿದವರೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​. ಕುತಂತ್ರ, ತಂತ್ರ ಎಲ್ಲ ಮಾಡಿದ್ದಾರೆ. ಕುಮಾರಸ್ವಾಮಿ ಅವರಿಗೆ ನುಂಗಲೂ ಆಗುತ್ತಿಲ್ಲ, ಉಗುಳಲೂ ಆಗುತ್ತಿಲ್ಲ. ಆಗಾಗ ಕೋಪ ವ್ಯಕ್ತಪಡಿಸುತ್ತಲೇ ಇದ್ದಾರೆ ಎಂದು ಅಶ್ವತ್ಥನಾರಾಯಣ ವ್ಯಂಗ್ಯಭರಿತವಾಗಿ ನುಡಿದರು.
ಕಾಂಗ್ರೆಸ್​ಗೆ ನಿಷ್ಠೆ ಇಲ್ಲದೆ ಕೆಲಸ ಮಾಡಿದ್ದಾರೆ. ತಮ್ಮದೇ ಪಕ್ಷಕ್ಕೆ ವಿಶ್ವಾಸ ದ್ರೋಹ ಬಗೆದಿದ್ದಾರೆ. ನನಗೆ ಇಲ್ಲವೆಂದರೆ, ತಮ್ಮ ಪಕ್ಷಕ್ಕೂ ಇರಬಾರದು ಎಂಬ ಧೋರಣೆ ಅವರದ್ದು. ಮೈತ್ರಿ ಸರ್ಕಾರ ಬೀಳಿಸಲು ಯಾರು ಕಾರಣ ಎಂಬುದನ್ನು ಬಹಿರಂಗವಾಗಿ ಹೇಳಿದ್ದೇನೆ ಎಂದು ಡಿಸಿಎಂ, ರಾಜರಾಜೇಶ್ವರಿ ನಗರದಲ್ಲಿ ಜಾತಿ ರಾಜಕಾರಣ ಮಾಡುತ್ತಿಲ್ಲ. ಎಲ್ಲ ಜಾತಿ, ಜನಾಂಗಗಳ ವಿಶ್ವಾಸ ಗಳಿಸುತ್ತೇವೆ ಎಂದು ತಿಳಿಸಿದರು.
‘ಧಮ್ಕಿಗಿಮ್ಕಿ ಹಾಕಿದ್ರೆ ಪೊಲೀಸ್​ ಸ್ಟೇಷನ್​ ಮುಂದೆಯೇ ಚುನಾವಣೆ! ಮುನಿರತ್ನಗೆ ಇದು ಕೊನೇ ವಾರ್ನಿಂಗ್​’

ಊರಿಗೆ ಊರೇ ಕೊಚ್ಚಿಕೊಂಡು ಹೋದರೂ ಸಾಹೇಬ್ರಿಗೆ ಟೆನ್ಶನ್​ ಇಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − one =
Remember me
