ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಅವರು ಬೇಲ್​​ನಲ್ಲಿದ್ದಾರೆ. ಯಾವಾಗ ಜೈಲಿಗೆ ಹೋಗುತ್ತಾರೆಂದು ಗೊತ್ತಿಲ್ಲ. ಇವರು ಲೋಕಾಯುಕ್ತ ದಾಳಿ ಬಗ್ಗೆ ಮಾತಾಡುತ್ತಿದ್ದಾರೆ. ಸಾವಿರಾರು ಕೋಟಿ ಲೂಟಿ ಮಾಡಿ ಸಿಕ್ಕು ಬಿದ್ದ ಡಿಕೆಶಿಗೆ ಮುಜಗರ ಇಲ್ಲ ನಮಗೇಕೆ? ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗರಂ ಆಗಿದ್ದಾರೆ.
ಲೋಕಾಯುಕ್ತ ಪೊಲೀಸ್​​ ಅಧಿಕಾರಿಗಳು ಇಂದು ಬಿಜೆಪಿ ಶಾಸಕನ ಮಗನ ಮೇಲೆ ಲೋಕಾಯುಕ್ತ ದಾಳಿ ಮಾಡಿ 6 ಕೋಟಿ ರೂ. ನಗದು ವಶಕ್ಕೆ ಪಡೆದಿದ್ದಾರೆ. ದಾಳಿ ಬಗ್ಗೆ ಡಿಕೆಶಿ ಪ್ರತಿಕ್ರಿಯೆಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗರಂ ಆಗಿದ್ದಾರೆ. ತಿಹಾರ್ ಜೈಲಿನಿಂದ ಬಂದವರು ಈ ದಾಳಿ ಬಗ್ಗೆ ಮಾತಾಡುತ್ತಿದ್ದಾರೆಂದು ವಾಗ್ಧಾಳಿ ಮಾಡಿದ್ದಾರೆ.
ಇದನ್ನೂ ಓದಿ:ಕೈಲಾಸ ದೇಶಕ್ಕಾಗಿ ಸಲ್ಲಿಸಿದ ಅರ್ಜಿ ವಜಾ ಮಾಡಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ
ಡಿಕೆಶಿ ಮನೆಯಲ್ಲಿ ಎಷ್ಟು ಬಂಡಲ್ ಹಣ ಇತ್ತು ಹಾಗೂ ಎಷ್ಟು ಅಕ್ರಮ ದಾಖಲೆ ಇತ್ತು ಎಂಬುದು ಜನರು ನೋಡಿದ್ದಾರೆ. ಡಿಕೆಶಿ ಈ ಬೇಲ್​ನಲ್ಲಿದ್ದಾರೆ. ಯಾವಾಗ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಇಂತವರು ಲೋಕಾಯುಕ್ತ ದಾಳಿ ಬಗ್ಗೆ ಮಾತಾಡುತ್ತಿದ್ದಾರೆ. ದಾಳಿ ಬಗ್ಗೆ ಸ್ಪಷ್ಟವಾದ ತನಿಖೆ ಆಗಬೇಕು. ಯಾರೇ ಮಾಡಿದ್ದರು ತಪ್ಪು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಈ ದಾಳಿಯಿಂದ ಬಿಜೆಪಿಗೆ ಯಾವುದೇ ಮುಜಗರ ಇಲ್ಲ. ಸಾವಿರಾರು ಕೋಟಿ ಲೂಟಿ ಮಾಡಿ ಸಿಕ್ಕು ಬಿದ್ದ ಡಿಕೆಶಿಗೆ ಮುಜಗರ ಇಲ್ಲ ನಮಗೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಸಿಕ್ಕಿರುವ ಹಣದ ಬಗ್ಗೆ ನಮಗೆ ಎಬಿಸಿಡಿ ಗೊತ್ತಿಲ್ಲ.  ಟಿವಿಯಲ್ಲಿ ನೋಡಿದ್ದೇವೆ. ಅಷ್ಟನ್ನೇ ನೋಡಿ ಯಾವ ತೀರ್ಮಾನಕ್ಕೂ ಬರಲು ಆಗುವುದಿಲ್ಲ. ತನಿಖೆ ಆಗಲಿ. ಯಾರೆ ತಪ್ಪು ಮಾಡಿದರು ಶಿಕ್ಷೆ ಆಗುತ್ತದೆ ಎಂದಿದ್ದಾರೆ.
ಬಿಜೆಪಿಗರ ಅಕ್ರಮ ಬಯಲಾದರೆ ಅವರನ್ನು ಇಡಲು 15 ಪರಪ್ಪನ ಅಗ್ರಹಾರ ಬೇಕು ಎಂಬ ಎಚ್​ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಅಕ್ರಮಗಳ ಬಗ್ಗೆ ತನಿಖೆ ಆದರೆ ಎಚ್​ಡಿಕೆ ಕುಟುಂಬದವರೆಲ್ಲಾ ಜೈಲಿಗೆ ಹೋಗುತ್ತಾರೆ. ಅವರನ್ನು ಕುಟುಂಬದವರನ್ನು ಜೈಲಿಗೆ ಕಳಿಸಲು 50 ಜೈಲು ಕಟ್ಟಬೇಕು. ಮಾಜಿ ಸಿಎಂ ಆಗಿದ್ದವರು ಈ ರೀತಿ ಸಾಕ್ಷಿ ಇಲ್ಲದೆ ಮಾತಾಡಬಾರದು ಎಂದು ಕಿಡಿಕಾರಿದ್ದಾರೆ.
ಕಲಬೆರಕೆ ಪದಾರ್ಥಗಳ ಅಭಿಷೇಕದಿಂದಾಗಿ ಶಿವಲಿಂಗ ಬಿರುಕು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
