ಶಿವಮೊಗ್ಗ:ರಾಮ ಕೇವಲ ಬಿಜೆಪಿಗೆ ಮಾತ್ರ ಸೇರಿದವನಾ? ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾವೆಲ್ಲಾ ಶ್ರೀರಾಮನ ಮಕ್ಕಳು ಎಂದಿದ್ದಾರೆ.
ಶಿವಮೊಗ್ಗ ಚಲೋ ಸಮಾವೇಶಕ್ಕೂ ಮುನ್ನ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾವು ಕೂಡ ಹಿಂದುಗಳೆ. ರಾಮನ ಭಕ್ತರೆ. ನನ್ನ ಹೆಸರಲ್ಲಿ ‘ಶಿವ’ನಿದ್ದರೆ, ಸಿದ್ದರಾಮಯ್ಯ ಹೆಸರಲ್ಲಿ ‘ರಾಮ’ನಿದ್ದಾನೆ. ಹಾಗಾಗಿ ನಾವೆಲ್ಲಾ ಶ್ರೀರಾಮನ ಮಕ್ಕಳು ಎಂದರು.ಇದನ್ನೂ ಓದಿರಿಪೊಲೀಸ್​ ವಿರುದ್ಧವೇ ದೂರು ಕೊಡ್ತೀನಿ ಎಂದ ಜಾರಕಿಹೊಳಿ ಸಿಡಿ ಕೇಸ್​ ಕಿಂಗ್​ಪಿನ್​ ಪತ್ನಿ!
ರಾಜ್ಯದೆಲ್ಲೆಡೆ ಕಾರ್ಯಕರ್ತರ ಮೇಲೆ ಕಿರುಕುಳ ನೀಡಲು ಬಿಜೆಪಿ ಯತ್ನಿಸಿದೆ. ನಾವು ಕೂಡ ಎಲ್ಲೆಡೆ ಕೇಸು ದಾಖಲಿಸುತ್ತೇವೆ. ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ಭದ್ರಾವತಿಯಲ್ಲಿ ನಮ್ಮ ಶಾಸಕ ಬಿ.ಕೆ.ಸಂಗಮೇಶ್ವರರ ಮೇಲೆ ಕೇಸು ಹಾಕಿದೆ. ಕಬಡ್ಡಿ ಪಂದ್ಯಾವಳಿಯಲ್ಲಿ ಮ್ಯಾಟ್ ಅನ್ನು ಸುಟ್ಟುಹಾಕಲು ಯತ್ನಿಸಿದ್ದು, ಇದೀಗ ಅದಕ್ಕೆ ಬೇರೆ ಬಣ್ಣ ಕಟ್ಟಿ ಸಮಸ್ಯೆ ಸೃಷ್ಟಿಸಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಎಸ್‌ಐಟಿ ತನಿಖೆ ಸರಿದಾರಿಯಲ್ಲಿ ನಡೆಯಬೇಕು. ಈ ಬಗ್ಗೆ ನಾವು ಕೂಡ ಗಮನ ಹರಿಸುತ್ತೇವೆ ಎಂದು ಹೇಳಿದರು.

ಸಿಎಂ ಬಿಎಸ್​ವೈ ತವರಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಕಾಂಗ್ರೆಸ್​ನ ಜನಾಕ್ರೋಶ ಪ್ರತಿಭಟನೆ-ಶಿವಮೊಗ್ಗ ಚಲೋ ಸಮಾವೇಶ ಇಂದು ಸಂಜೆ 4ಕ್ಕೆ ಆರಂಭವಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ, ಎಸ್.ಆರ್.ಪಾಟೀಲ್, ಆರ್.ಧ್ರುವನಾರಾಯಣ ಸೇರಿ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

ರಸ್ತೆಬದಿಯ ತಂಗುದಾಣದಲ್ಲಿ ಹಾಡಹಗಲೇ ವೃದ್ಧೆ ಮೇಲೆ ಅತ್ಯಾಚಾರ! ಪೈಶಾಚಿಕ ಕೃತ್ಯಕ್ಕೆ ಬೆಚ್ಚಿದ ಸ್ಥಳೀಯರು

ಪೊಲೀಸ್​ ವಿರುದ್ಧವೇ ದೂರು ಕೊಡ್ತೀನಿ ಎಂದ ಜಾರಕಿಹೊಳಿ ಸಿಡಿ ಕೇಸ್​ ಕಿಂಗ್​ಪಿನ್​ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 4 =
Remember me
