ಬೆಂಗಳೂರು:ರಾಜ್ಯದ ಜನರು ನಮಗೆ ದೊಡ್ಡ ಶಕ್ತಿ ಕೊಟ್ಟಿದ್ದಾರೆ. ಅವರ ಪಾದಕ್ಕೆ ನಮ್ಮ ‌ನಮಸ್ಕಾರ. ಇಂದು ಹಚ್ಚಿದ ಜ್ಯೋತಿ ಮನೆ ಮನ ಬೆಳಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ಹೇಳಿದರು.
ದೀಪ ಬೆಳಗುವುದರ ಮೂಲಕ ಶಕ್ತಿ ಯೋಜನೆಯನ್ನು ಉದ್ಘಾಟಿಸಿದ ಡಿಸಿಎಂ ಡಿಕೆಶಿ, ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ‌ಮಾತ್ರ ಅಲ್ಲ ಪ್ರತಿ ಜಿಲ್ಲೆಯಲ್ಲಿ ‌ನಡೆಯುತ್ತಿದೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮ ಮಾಡ್ತಾ ಇದ್ದಾರೆ ಎಂದರು.
ಜನರ ಸೇವೆಯೇ ಜನಾರ್ದನ ಸೇವೆ ಎನ್ನುತ್ತಾರೆ. ಜನರ ಕೆಲಸ ದೇವರ ಕೆಲಸ ಅಂತ ವಿಧಾನಸೌಧದ ಮೇಲೆಯೂ ಬರದಿದ್ದಾರೆ. ಅದರಂತೆ ನಾವು ಕಾರ್ಯನಿರ್ವಹಿಸುತ್ತೇವೆ. ದೇಶಕ್ಕೆ ಇತಿಹಾಸ, ಸ್ವಾತಂತ್ರ್ಯ ತಂದ ಪಕ್ಷ ಕಾಂಗ್ರೆಸ್ ಪಕ್ಷ. ಡಬಲ್ ಇಂಜಿನ್ ಸರ್ಕಾರ ಇದ್ದರೂ ಜನರು ಕಾಂಗ್ರೆಸ್ ಸರ್ಕಾರವನ್ನು ತಂದಿದ್ದಾರೆ. ನಮ್ಮ ನಡೆ, ನುಡಿ ಮೇಲೆ ನಂಬಿಕೆ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ನಾವು ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ಹೆಣ್ಣು ಕುಟುಂಬದ ಕಣ್ಣು ಅಂತ ಕರೆಯುತ್ತೇವೆ. ಪುರುಷರ ಹೆಸರಿಗೂ ಮೊದಲು ಮಹಿಳಾ ಹೆಸರು ಇರುತ್ತದೆ. ಇದು ನಮ್ಮ ಭಾರತೀಯ ಸಂಸ್ಕೃತಿ ಎಂದರು. ಇಂದು ಸ್ವಲ್ಪ ತಡ‌ಮಾಡಿ ಕಾರ್ಯಕ್ರಮ ಆರಂಭ ಮಾಡಿದ್ದೇವೆ. ಇವತ್ತು ಹಚ್ಚಿದ ಜ್ಯೋತಿ ಮನೆ ಮನ ಬೆಳಗಲಿ ಎಂದು ಹಾರೈಸಿದರು.
ಪರಿಶುದ್ಧ ಆಡಳಿತ ನಾವು‌ ಕೊಡಬೇಕಿದೆ. ಬಿಜೆಪಿ, ಜೆಡಿಎಸ್ ಟೀಕೆ ಮಾಡುತ್ತಿದೆ. ಆದರೆ, ಟೀಕೆಗಳು ಸಾಯುತ್ತೇವೆ ಮತ್ತು ಕೆಲಸ ಮಾತ್ರ ಉಳಿಯುತ್ತದೆ ಎನ್ನುವ ಮೂಲಕ ವಿರೋಧ ಪಕ್ಷಗಳಿಗೆ ಡಿಕೆಶಿ ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರ ಹಳೆಯ ಬಸ್ ಬಿಲ್ ಕಟ್ಟಿಲ್ಲ. ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬಸ್ ಕರೆಸಲಾಗಿತ್ತು. ಅದರ ಬಿಲ್ ಬಾಕಿ ಉಳಿಸಿಕೊಂಡಿದೆ. ಆ ರೀತಿಯಲ್ಲಿ ಸರ್ಕಾರ ಮಾಡಬಾರದು. ಸಾರಿಗೆ ಸಂಸ್ಥೆ ಉಳಿಯಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಎರಡು ಸಾವಿರ‌ ಕೊಡ್ತೇವೆ ಅಂದಾಗ ಟೀಕೆ ಮಾಡಿದರು. ಇಂದು ಮಧ್ಯಪ್ರದೇಶದಲ್ಲಿ ಸಾವಿರ ರೂಪಾಯಿ ಕೊಡ್ತಾ ಇದ್ದಾರೆ. ಆದರೆ, ನಾವು ಟೀಕೆ ಮಾಡುತ್ತಿಲ್ಲ ಎಂದು ಬಿಜೆಪಿ ದ್ವಂದ್ವ ನಿಲುವಿನ ವಿರುದ್ಧ ಕಿಡಿಕಾರಿದರು.(ದಿಗ್ವಿಜಯ ನ್ಯೂಸ್​)
ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದು: ರಾಜ್ಯದಲ್ಲಿ ಇನ್ಮುಂದೆ ಮಹಿಳೆಯರಿಗೆ ಬಸ್​ ಪ್ರಯಾಣ ಫ್ರೀ!

ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಕಾಂಗ್ರೆಸ್ 5% ಕಮಿಷನ್ ಕೇಳುತ್ತಿದೆ ಎಂದ ಕುಮಾರಸ್ವಾಮಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
