ಬೆಂಗಳೂರು:ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾಗಿ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್ ಅವರು ಜುಲೈ 2ರಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದು, ‘ಪ್ರತಿಜ್ಞೆ’ ಹೆಸರಿನ ಕಾರ್ಯಕ್ರಮ ಆಯೋಜನೆಗೊಂಡಿದೆ.
ಕೆಪಿಸಿಸಿ ಹೊಸ ಕಟ್ಟಡದಲ್ಲಿ ಅಧಿಕೃತ ಕಾರ್ಯಕ್ರಮ ನಡೆಯಲಿದ್ದು, ಇದೇ ವೇಳೆ ರಾಜ್ಯದ 7,831 ಕಡೆ ಪರೋಕ್ಷವಾಗಿ ನಡೆಯಲಿದ್ದು. ಈ ಹಿನ್ನೆಲೆಯಲ್ಲಿ ಮಂಗಳವಾರ ಅಂತಿಮ ಸಿದ್ಧತೆ ಬಗ್ಗೆ ಸಭೆ ನಡೆಯಿತು. ಕಾರ್ಯಕ್ರಮದ ರೂಪುರೇಷೆ ಕುರಿತು ಬಿ.ಎಲ್.ಶಂಕರ್ ವಿವರಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು ಈ ಸಭೆಯಲ್ಲಿ ಪಾಲ್ಗೊಂಡರು.
ಜುಲೈ 2ರಂದು ಇಡೀ ವೇದಿಕೆಯಲ್ಲಿ 10 ಪ್ರಮುಖರಷ್ಟೇ ಉಪಸ್ಥಿತರಿರಲಿದ್ದು, ದಕ್ಷಿಣ ಭಾರತದ 10 ರಾಜ್ಯಗಳ ಪಿಸಿಸಿ ಅಧ್ಯಕ್ಷರು ಹಾಜರಾಗಲಿದ್ದಾರೆ. ಒಟ್ಟು ಒಂದೂವರೆ ಗಂಟೆ ಕಾರ್ಯಕ್ರಮ ನಡೆಸಲು ನಿಶ್ಚಯಿಸಲಾಗಿದ್ದು, ಕೆಲವೇ ಮಂದಿ ಭಾಷಣ ಮಾಡಲಿದ್ದಾರೆ. ಇಡೀ ರಾಜ್ಯದ 7,831 ಕಡೆ ಏಕಕಾಲದಲ್ಲಿ ‘ವಂದೇ ಮಾತರಂ’ ಹಾಗೂ ಸಂವಿಧಾನದ ಪೀಠಿಕೆಯನ್ನು ಒಟ್ಟಿಗೇ ಹೇಳಲಾಗುತ್ತದೆ. ಹಾಗೇ ಪಕ್ಷ ಸಂಘಟಿಸೋಣ, ಪುನಃ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ತರೋಣ ಎಂದು ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಪ್ರತಿಜ್ಞೆ ಬೋಧಿಸಲಿದ್ದಾರೆ.
ಇನ್ನೊಂದು ಪ್ರಮುಖ ಸಂಗತಿ ಎಂದರೆ, ಇಡೀ ಕಾರ್ಯಕ್ರಮದಲ್ಲಿ ಯಾರು ಪಾಲ್ಗೊಂಡಿದ್ದರು, ಯಾರು ಕೈಕೊಟ್ಟರು, ಯಾರ ಆಸಕ್ತಿ ಎಷ್ಟಿತ್ತು, ಎಷ್ಟು ಮಂದಿ ಪಾಲ್ಗೊಂಡಿದ್ದರು ಎಂಬ ವರದಿಯನ್ನು ಕೆಪಿಸಿಸಿ ಪಡೆಯಲಿದೆ. ಈ ಮೂಲಕ ಪಕ್ಷದ ಸಂಘಟನೆ ಎಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿದೆ ಎಂದು ಅರಿಯಲು ಉದ್ದೇಶಿಸಿದೆ.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪಕ್ಷ ಸಂಘಟನೆಯಾಗಬೇಕು, ಪುನಃ ಅಧಿಕಾರಕ್ಕೇರಬೇಕು. ಪ್ರತಿಯೊಬ್ಬರಿಗೂ ಪಕ್ಷ ಸಂಘಟನೆಯ ಹೊಣೆಗಾರಿಕೆ ಇರಬೇಕು ಎಂದರು.
ಡಿಜಿಟಲ್ ಯೂತ್:ಕಾರ್ಯಕ್ರಮದ ತಯಾರಿಗೆ 16 ಸಾವಿರ ಡಿಜಿಟಲ್ ಯೂತ್ ನೋಂದಣಿ ಆಗಿದ್ದಾರೆ. ಅವರನ್ನು ಬಳಸಿಕೊಂಡು ಕಾರ್ಯಕ್ರಮ ಪೂರ್ವತಯಾರಿ ಮಾಡಲಾಗುತ್ತಿದೆ. ಪ್ರತಿ ಪಂಚಾಯಿತಿಗೆ ಸಹಾಯ ಮಾಡಲು 400 ಜನರನ್ನು ನೇಮಿಸಿದ್ದು, ಈ ಪೈಕಿ ಇನ್ನೂ 120 ಮಂದಿ ನಿಗದಿತ ಸ್ಥಳಕ್ಕೆ ಹೋಗಿಲ್ಲ. ಯಾರು ಹೋಗಿಲ್ಲ ಎಂದು ಹೇಳಬಲ್ಲೆ ಎಂದ ಅವರು, ಕಾರ್ಯಕ್ರಮ ನಡೆಸುವ ಸ್ಥಳದಲ್ಲೇ ಸಭೆ ನಡೆಸಬೇಕು. ಶಾಸಕರ ಮನೆಯಲ್ಲೋ, ಮಾಜಿ ಅಭ್ಯರ್ಥಿ ಮನೆಯಲ್ಲೋ ಕುಳಿತು ಸಭೆ ಮಾಡುವುದಲ್ಲ. ಕಾರ್ಯಕ್ರಮ ಸಂಯೋಜಕರಿಗೆ ಐಡಿ ಕಾರ್ಡ್ ಸಹಿತ ಟ್ರ್ಯಾಕರ್​ ಕೊಡಲಾಗುತ್ತಿದೆ. ನೀವು ಎಲ್ಲಿ ಹೋಗಿದ್ದೀರಿ, ಎಲ್ಲಿ ಕುಳಿತಿದ್ದೀರಿ, ಎಲ್ಲಿ ಮಲಗಿದ್ದೀರಿ ಎಂದೂ ಗೊತ್ತಾಗುತ್ತದೆ ಎಂದರು.
ಗುಂಪುಗಾರಿಕೆಗೆ ಅವಕಾಶವಿಲ್ಲ:ದೆಹಲಿಯಿಂದ ಆದೇಶವಿದ್ದರೂ ಬ್ಲಾಕ್, ಡಿಸಿಸಿ, ಕೆಪಿಸಿಸಿ ಮೂಲಕವೇ ನಿಮ್ಮ ಚಟುವಟಿಕೆ ನಡೆಯಬೇಕು. ನಿಮ್ಮದೇ ಪ್ಯಾರಲಲ್ ಆಗಿ ನೇಮಕ ಮಾಡಿ ಗೊಂದಲ ಸೃಷ್ಟಿಗೆ ಈ ಡಿಕೆಶಿ ಬಿಡಲ್ಲ, ಅವಕಾಶ ಕೊಡಲ್ಲ ಎಂದು ಶಿವಕುಮಾರ್ ಎಚ್ಚರಿಸಿದರು. ನಿಮ್ಮದೊಂದು ಗುಂಪು, ಅವರದ್ದೊಂದು ಗುಂಪು ಎಂಬುದಿಲ್ಲ. ನಮ್ಮದು ಒಂದೇ ಗುಂಪು, ಒಂದೇ ಧರ್ಮ ಕಾಂಗ್ರೆಸ್ ಧರ್ಮ ಎಂದರು.
ಕರೊನಾ ಸಂಕಷ್ಟ ಮುಗಿದರೂ, ಮುಂದೈತೆ ಮಾರಿ ಹಬ್ಬ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
