ಬೆಂಗಳೂರು:ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಹ್ಯಾಟ್ರಿಕ್​ ಜಯ ಸಾಧಿಸುವ ಹುಮ್ಮಸ್ಸಿನೊಂದಿಗೆ ಮುನಿರತ್ನ ಮುನ್ನುಗ್ಗುತ್ತಿದ್ದರೆ, ಕೆಪಿಸಿಸಿ ಚುಕ್ಕಾಣಿ ಹಿಡಿದ ಬಳಿಕ ಎದುರಾಗಿರುವ ಮೊದಲ ಚುನಾವಣೆಯನ್ನು ಡಿಕೆಶಿ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.
ಬಹಿರಂಗ ಪ್ರಚಾರದ ಕೊನೇ ದಿನವಾದ ಭಾನುವಾರ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಡಿಕೆ ಬ್ರದರ್ಸ್​ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿಯೇ ಸದ್ದು ಮಾಡಿದೆ. ಕನಕಪುರದವರು ಆರ್​ಆರ್​ ನಗರ ಕ್ಷೇತ್ರದಲ್ಲಿ ಶನಿವಾರ ರಾತ್ರಿ 7 ಕಡೆ ಹಣ ಹಂಚಿಕೆ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಕೆಲವರು ವಾಹನ ಬಿಟ್ಟು ಓಡಿ ಹೋಗಿದ್ದಾರೆ. ಎಫ್​​ಐಆರ್​ ದಾಖಲಾಗಿವದೆ. ಕನಕಪುರದಿಂದ ಜನರನ್ನು ಕರೆಸಿ ಬೆಂಗಳೂರು ಹಾಳು ಮಾಡುವ ಅಗತ್ಯವಿತ್ತೆ ? ಬೆಂಗಳೂರನ್ನು ಶಾಂತಿಯಿಂದ ಇರೋಕೆ ಬಿಡಿ ಎಂದು ಮುನಿರತ್ನ ಕಟುವಾಗಿ ಟೀಕಿಸಿದ್ದರು. ಮುನಿರತ್ನಗೆ ಏನೋ ಹೆಚ್ಚು-ಕಮ್ಮಿ ಆಗಿ ಗೊಂದಲದಲ್ಲಿದ್ದಾನೆ. ಅವರ ಪಕ್ಷದಲ್ಲೇ ಆತನಿಗೆ ಸಮಸ್ಯೆಯಿದೆ. ಮುನಿರತ್ನ ನಿಜಸ್ವರೂಪ ಈಗ ಗೊತ್ತಾಗಿದೆ. ಡೈಲಾಗ್​ಗಳು ಸಿನಿಮಾಗೆ ಮಾತ್ರ ಸೀಮಿತವಾಗಿಲ್ಲ, ನಿಜ ಜೀವನದಲ್ಲೂ ಬಳಕೆಯಾಗುತ್ತವೆ ಎಂದು ಈಗ ತಿಳಿದಿದೆ ಡಿಕೆಶಿ ಕಟುವಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.
2023ಕ್ಕೆ ಕಾಂಗ್ರೆಸ್​ ಪಕ್ಷವನ್ನು ಡಿ.ಕೆ.ಶಿವಕುಮಾರ್​ ಉಳಿಸಲ್ಲ. ಡಿಕೆಶಿ ಸಿಎಂ ಎಂದರೆ ಸಿದ್ದರಾಮಯ್ಯ ಹೊರ ಹೋಗುತ್ತಾರೆ. ಸಿದ್ದರಾಮಯ್ಯ ಸಿಎಂ ಅಂದರೆ ಡಿಕೆಶಿ ಹೋಗುವರು. ಇಬ್ಬರೂ ಒಟ್ಟಿಗೆ ಹೋಗುವ ಪರಿಸ್ಥಿತಿ ಕಾಂಗ್ರೆಸ್​ನಲ್ಲಿಲ್ಲ. ಡಿಕೆಶಿ ಫೋನ್​ ಕದ್ದಾಲಿಕೆ ಗೊತ್ತಿದೆ. ಚುನಾವಣೆ ಬಳಿಕ ಆ ಬಗ್ಗೆ ಎಲ್ಲ ವಿವರ ನೀಡುವೆ ಎಂಬ ಮುನಿರತ್ನ ಹೇಳಿಕೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್​, ಮುನಿರತ್ನರನ್ನು ಮಂತ್ರಿ ಮಾಡುವುದಾಗಿ ಮುಖ್ಯಮಂತ್ರಿ ಹೇಳುತ್ತಿದ್ದ ವೇಳೆ ಬಿಜೆಪಿ ನಾಯಕರು ಮತ್ತು ಮುನಿರತ್ನರಿಂದ ಕೇಸು ಹಾಕಿಸಿಕೊಂಡಿದ್ದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಅವರೆಲ್ಲೂ ಮುಂದಿನ ದಿನಗಳಲ್ಲಿ ಅವರದ್ದೇ ಆದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಮುನಿರತ್ನ ಹೇಳುವ ಮೂಲಕ ಕ್ಷೇತ್ರದ ಮತದಾರರಿಗೆ ಅಪಮಾನಿಸಿದ್ದಾರೆ. ಯಡಿಯೂರಪ್ಪನವರು ಮುನಿರತ್ನ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹಿಂದೆಯೇ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಚುನಾವಣೆ ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ. ಎಲ್ಲ ಆರೋಪಗಳಿಗೆ ನ.3ರಂದು ಉತ್ತರ ನೀಡುವೆ ಎಂದು ಡಿಕೆಶಿ ಮಾತಿನಲ್ಲೇ ಚಾಟಿ ಬೀಸಿದ್ದಾರೆ.
VIDEO| ಸಮಾವೇಶದಲ್ಲೇ ಕುಸಿದುಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ!

ಪರಿಷತ್​ ಚುನಾವಣೆ: ನಾಲ್ಕು ಕ್ಷೇತ್ರಗಳ ಮತ ಎಣಿಕೆ ಮುಂದೂಡಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + sixteen =
Remember me
