ಬೆಂಗಳೂರು:“ಪಶ್ಚಿಮ್​ ಬಂಗಾ ಫಾರ್ಮಾಸ್ಯುಟಿಕಲ್​’ ಕಂಪನಿ ಪೂರೈಸಿರುವ ರಿಂಗರ್​ ಲ್ಯಾಕ್ಟೇಟ್​ ಗ್ಲೂಕೋಸ್​ ಕಳಪೆ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ರೋಗಿಗಳಿಗೆ ವಿತರಣೆ ಮಾಡದಂತೆ ಕರ್ನಾಟಕ ರಾಜ್ಯ ವೈದ್ಯಕಿಯ ಸರಬರಾಜು ನಿಗಮ( ಕೆಎಸ್​ಎಂಎಸ್​ಸಿಎಲ್​) ಸುತ್ತೋಲೆ ಹೊರಡಿಸಿದೆ.
ಕಂಪನಿ ತಯಾರಿಸಿ ಸರಬರಾಜು ಮಾಡಿರುವ ಈ ಔಷಧದ ಎರಡು ಬ್ಯಾಚ್​ ಉತ್ತಮ ಗುಣಮಟ್ಟವಲ್ಲವೆಂದು ಔಷಧ ನಿಯಂತ್ರಣ ಇಲಾಖೆ ಘೋಷಿಸಿದೆ. ಹಾಗಾಗಿ, ಟೆಂಡರ್​ ನಿಯಮಾನುಸಾರ ಮಾ.22ರಿಂದ ಜಾರಿಗೆ ಬರುವಂತೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಔಷಧದ ಎಲ್ಲ ಬ್ಯಾಚ್​ಗಳನ್ನು ಔಷಧ ತಂತ್ರಾಂಶದಲ್ಲಿ ಫ್ರೀಜ್​ ಮಾಡಲಾಗಿದೆ. ಆದ್ದರಿಂದ, ಕಂಪನಿಯು ಔಷಧ ಉಗ್ರಾಣಕ್ಕೆ ಸದರಿ ಔಷಧವನ್ನು ಸರಬರಾಜು ಮಾಡಿದರೆ ಕೂಡಲೇ ಅದರ ವಿತರಣೆಯನ್ನು ನಿಲ್ಲಿಸಬೇಕೆಂದು ನಿಗಮ, ಔಷಧ ಉಗ್ರಾಣ ಪ್ರಭಾರಧಾರಕರಿಗೆ ಸೂಚಿಸಿದೆ.ರಾಜ್ಯದ ಎಲ್ಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಆರೋಗ್ಯ ಸಂಸ್ಥೆ ವೈದ್ಯಾಧಿಕಾರಿಗಳು ಸರಬರಾಜು ಆಗಿರುವ ಈ ಬ್ಯಾಚ್​ನ ಔಷಧಗಳನ್ನು ರೋಗಿಗಳಿಗೆ ನೀಡಬಾರದು. ಬದಲಿಗೆ ಬೇರೆ ಬ್ಯಾಚ್​ನ ಉತ್ತಮ ಗುಣಮಟ್ಟದ ಔಷಧ ನೀಡುವಂತೆ ನಿಗಮ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.
ಕೀಟನಾಶಕ ಪೂರೈಸಿದರೂ ಆಶ್ಚರ್ಯವಿಲ್ಲ!: ಸರ್ಕಾರದ ವಿರುದ್ಧ ಕಟು ಟೀಕೆ
2023ರ ಸೆ.5ರಂದು ಕೆಎಸ್​ಎಂಎಸ್​ಸಿಎಲ್​, “ಪಶ್ಚಿಮ್​ ಬಂಗಾ ಫಾರ್ಮಾಸ್ಯುಟಿಕಲ್​’ ಕಂಪನಿಗೆ 20 ಕೋಟಿ ರೂ.ಮೌಲ್ಯದ ಗ್ಲೋಕೋಸ್​ ಪೂರೈಸುವಂತೆ ಕಾರ್ಯಾದೇಶ ಪತ್ರ ನೀಡಲಾಗಿತ್ತು. ಕೆಲ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರೂ ಈ ಕಂಪನಿಗೆ ಗ್ಲೋಕೋಸ್​ ಪೂರೈಸಲು ಕಾರ್ಯಾದೇಶ ಪತ್ರ ನೀಡಲಾಗಿತ್ತು. ಔಷಧ ಉಗ್ರಣಗಳಿಗೆ 20 ಕೋಟಿ ರೂ.ಮೌಲ್ಯದ ಐವಿ ್ಲೂಯಿಡ್ಸ್​ ಸರಬರಾಜು ಮಾಡಿತ್ತು. ಬಳಿಕ ಕೆಎಸ್​ಎಂಎಸ್​ಸಿಎಲ್​, ಈ ಔಷಧಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿತ್ತು. ಈ ವೇಳೆ ವಿವಿಧ ಔಷಧ ಉಗ್ರಣಗಳಲ್ಲಿ ದಾಸ್ತಾನು ಮಾಡಿದ್ದ ಗ್ಲೋಕೋಸ್​ ಸ್ಯಾಂಪಲ್​ನ್ನು ಔಷಧ ನಿಯಂತ್ರಣ ಇಲಾಖೆ, ಔಷಧಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದಾಗ ಕಳಪೆ ಎಂಬುದು ಸಾಬೀತಾಗಿತ್ತು. ಕೆಲ ಸರ್ಕಾರಿ ಆಸ್ಪತ್ರೆಗಳಿಗೆ ಈ ಔಷಧ ಪಡೆದಿದ್ದ ರೋಗಿಗಳಿಗೆ ದೇಹ ನಡುಗುವುದು ಸೇರಿ ಇತರೆ ಅಡ್ಡ ಪರಿಣಾಮ ಬೀರಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − two =
Remember me
