ಮೈಸೂರು:ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಸೂಚನೆ ಅದರ ಬಾಟಲಿಗಳ ಮೇಲೆಯೇ ಇರುತ್ತದೆ. ಹೀಗೆ ನಿಗದಿತ ಮಾರ್ಗಸೂಚಿಗಳ ಪ್ರಕಾರ ಮಾಡಿರುವ ಮದ್ಯವೇ ಆರೋಗ್ಯಕ್ಕೆ ಹಾನಿಕರವಾಗಿದ್ದರೆ, ಹಾನಿಕಾರಕ ಅಂಶ ಪತ್ತೆ ಆಗಿರುವಂಥ ಮದ್ಯ ಇನ್ನೆಷ್ಟು ಅಪಾಯಕಾರಿ ಆಗಿರಲಿಕ್ಕಿಲ್ಲ!
ಹೌದು.. ಕಂಪನಿಯೊಂದರ ಘಟಕದಲ್ಲಿ ನಿರ್ದಿಷ್ಟ ದಿನವೊಂದರಲ್ಲಿ ಬಾಟ್ಲಿಂಗ್​ ಮಾಡಲಾದ ಬಿಯರ್​ಗಳಲ್ಲಿ ಸೆಡಿಮೆಂಟ್ ಶೇಖರಣೆ ಆಗಿರುವುದು ಕಂಡುಬಂದಿದೆ. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್​ ಘಟಕದಲ್ಲಿ ಜು. 15ರಂದು ಬಾಟ್ಲಿಂಗ್ ಮಾಡಲಾದ ಬಿಯರ್ ದಾಸ್ತಾನಿನ ಕೆಲವು ಬಾಟಲಿಗಳಲ್ಲಿ ಸೆಡಿಮೆಂಟ್​ ಶೇಖರಣೆ ಆಗಿರುವುದು ಕಂಡುಬಂದಿದೆ ಎಂದು ಅಬಕಾರಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ:ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ ನನಗೆ ಕೊಡೆ: ಹೈಕೋರ್ಟ್​​ ತಡೆ ಸಿಗುತ್ತಿದ್ದಂತೆ ಉಪೇಂದ್ರ ಫಸ್ಟ್ ರಿಯಾಕ್ಷನ್​
ಸದರಿ ದಾಸ್ತಾನು ಕುರಿತಂತೆ ರಾಸಾಯನಿಕ ಪ್ರಯೋಗಾಲಯದಿಂದ ವರದಿ ಪಡೆದುಕೊಳ್ಳುವ ನಿರ್ಧಾರವನ್ನು ಆಧರಿಸಿ ಮುಂದಿನ ಮಾಹಿತಿ ನೀಡುವವರೆಗೂ ಆರೋಗ್ಯ ದೃಷ್ಟಿಯಿಂದ ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕೋರಲಾಗಿದೆ. ಅಂದಹಾಗೆ ಈ ಬಿಯರ್​ ಬಾಟಲಿಗಳು ಈಗಾಗಲೇ ಹಲವೆಡೆಗೆ ವಿತರಣೆ ಆಗಿವೆ.

ಹೇಗಿದೆ ನೋಡಿ ಕಾಕತಾಳೀಯ!: ಇಂದಿರುವುದೂ ಸ್ವಾತಂತ್ರ್ಯ ಸಿಕ್ಕಿದ್ದ ದಿನದಂದು ಇದ್ದ ತಿಥಿ-ನಕ್ಷತ್ರವೇ!

ಇಲ್ಲಿನ ಶಿಕ್ಷಕರು ಉದ್ಯೋಗಕ್ಕೆ ಸೇರುವ ಮುನ್ನ ಈ ಕೆಲಸ ಮಾಡಲೇಬೇಕು: ಏನಿದು ಲ್ಯಾಬ್​ ಸ್ಕೂಲ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − two =
Remember me
