ನವದೆಹಲಿ:ಮಹಾರಾಷ್ಟ್ರ, ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಕರೊನಾದಿಂದ ಚೇತರಿಕೆ ಕಂಡ ವ್ಯಕ್ತಿಗಳಲ್ಲಿ ಪತ್ತೆಯಾಗುತ್ತಿರುವ ಮಾರಣಾಂತಿಕ ಕಪು್ಪ ಶಿಲೀಂಧ್ರ ಸೋಂಕು (ಬ್ಲಾ್ಯಕ್ ಫಂಗಸ್) ಆತಂಕ ಮೂಡಿಸಿರುವ ಬೆನ್ನಲ್ಲೇ, ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ಲಾ್ಯಕ್ ಫಂಗಸ್ ಸೋಂಕಿನಿಂದ ಮಹಾರಾಷ್ಟ್ರದಲ್ಲಿ ಈವರೆಗೆ 52 ಜನರು ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ. ಪುಣೆಯಲ್ಲಿ 270 ಇಂಥ ಪ್ರಕರಣಗಳು ಪತ್ತೆಯಾಗಿವೆ. ದುರ್ಬಲ ಆರೋಗ್ಯ ಅಥವಾ ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ಕೋವಿಡ್ ಸೋಂಕು ತಗುಲಿದ ಮಧುಮೇಹಿಗಳ ಶರೀರದಲ್ಲಿ ಇದು ಬೇಗ ಪತ್ತೆಯಾಗುತ್ತಿದೆ. ಸಾಮಾನ್ಯವಾಗಿ ಕೋವಿಡ್ ಚಿಕಿತ್ಸೆ ಪಡೆದ ಎರಡು ಅಥವಾ ಮೂರು ವಾರ ನಂತರ ಇದು ಬಹಿರಂಗವಾಗುತ್ತದೆ. ಕೋವಿಡ್ ಚಿಕಿತ್ಸೆಯಲ್ಲಿ ಸ್ಟಿರಾಯ್್ಡ ಔಷಧ ಸೇವಿಸಿದವರಲ್ಲಿ ಮತ್ತು ಇತರೆ ರೋಗಗಳಿಂದ ಬಳಲುತ್ತಿರುವವರಲ್ಲೂ ಈ ಸೋಂಕು ಪತ್ತೆಯಾಗಿದೆ.
ಬ್ಲ್ಯಾಕ್​ ಫಂಗಸ್ ಬಗ್ಗೆ ರಾಜ್ಯದ ಸ್ಥಿತಿಗತಿ ಕುರಿತ ತಜ್ಞರ ವರದಿ ಶನಿವಾರ ಅಥವಾ ಭಾನುವಾರ ಸರ್ಕಾರದ ಕೈ ಸೇರಲಿದೆ. ತಜ್ಞರ ಶಿಫಾರಸಿನಂತೆ ಮುಂದಿನ ಕಾರ್ಯತಂತ್ರ ರೂಪಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಮಾಹಿತಿಗಳ ಪ್ರಕಾರ ಪ್ರತಿ ದಿನ 25-30 ಹೊಸ ಪ್ರಕರಣಗಳು ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಇನ್ನಷ್ಟು ಹೆಚ್ಚಾಗಬಹುದೆಂಬ ಆತಂಕವೂ ಇದೆ. ಈ ಕಾಯಿಲೆಗೆ ಬಳಸುವ ಆಂಪೊಟೊರಿಸಿಯನ್ 40 ಸಾವಿರ ವೈಯಲ್ ಸಿದ್ಧವಿದೆ. ಮುಂಜಾಗ್ರತೆಯಾಗಿ ರಾಜ್ಯಕ್ಕೆ 1,050 ವೈಯಲ್​ಅನ್ನು ಕೇಂದ್ರ ನೀಡಿದೆ. ಇನ್ನೂ ಹೆಚ್ಚು ಪಡೆದುಕೊಳ್ಳಲು ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗುತ್ತಿದೆ. ಜತೆಗೆ ತಜ್ಞರ ವರದಿ ಆಧರಿಸಿ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ, ಚಿಕಿತ್ಸಾ ವಿಧಾನದ ಬಗ್ಗೆ ಮಾರ್ಗಸೂಚಿ ಹೊರಡಿಸುವ ಬಗ್ಗೆಯೂ ಆರೋಗ್ಯ ಇಲಾಖೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
2 ದಿನಗಳ ಹಿಂದೆ ನಾಪತ್ತೆಯಾಗಿದ್ದ ದಾಯಾದಿ ಸಹೋದರಿಯರ ಶವ ಬಾವಿಯಲ್ಲಿ ಪತ್ತೆ; ಸಾವಿನ ಸುತ್ತ ಮೂಡಿವೆ ಹಲವು ಅನುಮಾನಗಳು!

ಇಲ್ಲಿ ಕಳ್ಳರು ಶವಗಳನ್ನೂ ಬಿಡುತ್ತಿಲ್ಲ; ಕೋವಿಡ್ ಸೋಂಕಿನಿಂದ ಮೃತಪಟ್ಟವರ ಚಿನ್ನಾಭರಣ ಕಳವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 6 =
Remember me
