ವಿಜಯಪುರ:ನನಗೆ ವಯಸ್ಸಾಯಿತು ಎಂದು ಭಾವಿಸಬೇಡಿ, ನಾನು ಇನ್ನೂ ಗಟ್ಟಿಯಾಗಿಯೇ ಇದ್ದೇನೆ. ಪಕ್ಷದ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ, ಮುಂದೆಯೂ ಪಕ್ಷದ ಕಾರ್ಯದಲ್ಲಿ ಭಾಗಿಯಾಗಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಹೇಳಿದ್ದಾರೆ.
ವಿಜಯಪುರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇನ್ನು 10 ವರ್ಷಗಳ ಕಾಲ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಪಕ್ಷಕ್ಕಾಗಿ ಕೆಲಸ ಮಾಡಲು ನಾನು ಸದಾ ಉತ್ಸುಕನಾಗಿರುತ್ತೇನೆ. ಬರುವ ವಿಧಾನಸಭಾ ಚುನಾವಣೆಗಾಗಿ ಈಗಿನಿಂದಲೇ ಕೆಲಸ ಮಾಡುವೆ ಎಂದು ಹೇಳಿದರು.
ಯಡಿಯೂರಪ್ಪನವರಿಗೆ 79, 80 ವಯಸ್ಸಾಯಿತು ಅಂತ ಯೋಚನೆ ಮಾಡಬೇಡಿ, 90 ವರ್ಷ ದಾಟುವವರೆಗೂ ಇದೇ ರೀತಿ ಚಟುವಟಿಕೆಯಿಂದ ಕೆಲಸ ಮಾಡುತ್ತೇನೆ ಎಂದ ಬಿಎಸ್​ವೈ ಮಾತಿಗೆ ಕಾರ್ಯಕರ್ತರು ಸಿಳ್ಳೆ ಹೊಡೆಯುವ ಮೂಲಕ ಸಂಭ್ರಮಿಸಿದರು.(ದಿಗ್ವಿಜಯ ನ್ಯೂಸ್​)
ಖತಾರ್ ಏರ್​​ವೇಸ್​​ ನಿರ್ಬಂಧಿಸಿ ಟ್ವಿಟ್ಟರ್​​ ಅಭಿಯಾನ: ಕಾರಣವೇನು ಗೊತ್ತಾ?

ಬಹು ನಿರೀಕ್ಷಿತ “ಕಬ್ಜ” ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್ ಆರಂಭ

Sign in to your account
Please enter an answer in digits:16 − three =
Remember me
