ಬೆಂಗಳೂರು:ಕರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಸರ್ಕಾರ ನಿಗದಿ ಪಡಿಸಿದ ದರಕಿಂತ ಹೆಚ್ಚಿನ ದರ ವಿಧಿಸುವಂತಿಲ್ಲ. ಶೇ.50ರಷ್ಟು ಬೆಡ್​ಗಳನ್ನು ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಎಂದೇ ಮೀಸಲಿಡಬೇಕು ಎಂದು ಸೂಚನೆ ನೀಡಿರುವ ಸರ್ಕಾರ ಕೆಲ ಷರತ್ತು ವಿಧಿಸಿದೆ. ಅಂದಹಾಗೆ ಕರೊನಾ ರೋಗಿಗಳಿಗೆ ಸರ್ಕಾರ ನಿಗದಿ ಪಡಿಸಿರುವ ಚಿಕಿತ್ಸಾ ದರದ ವಿವರ ಇಲ್ಲಿದೆ.
ಇದನ್ನೂ ಓದಿರಿರೈಲ್ವೆ ಟಿಕೆಟ್ ಕಲೆಕ್ಟರ್​ ಸಾವಿನ ಬಳಿಕ ಕರೊನಾ ದೃಢ, ಅಂತಿಮ ದರ್ಶನ ಪಡೆದಿದ್ದ ಸಂಬಂಧಿಕರಿಗೀಗ ಢವಢವ!
ಸಾರ್ವಜನಿಕ ಆರೋಗ್ಯ ಇಲಾಖೆಯ ಶಿಫಾರಸು ಪಡೆದ ರೋಗಿಗಳಿಗೆ ಖಾಸಗಿ ಆಸ್ಪತ್ರೆಯ ಚಿಕಿತ್ಸಾ ದರ ಹೀಗಿದೆ. ಜನರಲ್ ವಾರ್ಡ್​ಗೆ 5200 ರೂ., ಎಚ್​ಡಿಯು- 7000 ರೂ., ಐಸೋಲೇಷನ್ ಐಸಿಯು ವಿತ್ ಔಟ್ ವೆಂಟಿಲೇಟರ್- 8500 ರೂ., ಐಸೋಲೇಷನ್ ಐಸಿಯು ವಿತ್ ವೆಂಟಿಲೇಟರ್ -10,000 ರೂ. ಶುಲ್ಕ ಇರಲಿದೆ.
ಇನ್ನು ಆರೋಗ್ಯ ಇಲಾಖೆ ಶಿಫಾರಸು ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋದವರಿಗೆ ಜನರಲ್ ವಾರ್ಡ್-10,000 ರೂ., ಎಚ್​ಡಿಯು- 12,000 ರೂ., ಐಸೋಲೇಷನ್ ಐಸಿಯು ವಿತ್ ಔಟ್ ವೆಂಟಿಲೇಟರ್- 15,000 ರೂ., ಐಸೋಲೇಷನ್ ಐಸಿಯು ವಿತ್ ವೆಂಟಿಲೇಟರ್ -25,000 ರೂ. ಬಿಲ್ ಇರಲಿದೆ.
ಹೆಲ್ತ್​ ಇನ್ಶೂರೆನ್ಸ್​ ಇರುವವರಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಪ್ಯಾನೆಲ್​ನಲ್ಲಿ ಸೇರಿರುವ ಆಸ್ಪತ್ರೆಗಳನ್ನ ಆಯ್ಕೆ ಮಾಡಲಾಗಿದೆ. ಬಿಪಿಎಲ್ ಮತ್ತು ಎಪಿಎಲ್ ಹಾಗೂ ವಲಸಿಗ ಕಾರ್ಮಿಕರಿಗೆ, ಪಿಡಿಎಸ್ ಕಾರ್ಡ್ ಇದ್ದರೂ ಚಿಕಿತ್ಸೆ ಕೊಡಬೇಕು.
ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + thirteen =
Remember me
