ಬೆಂಗಳೂರು:ಸ್ಯಾಂಡಲ್​​ವುಡ್​ ನಟ ಶಿವ ರಾಜ್​​ಕುಮಾರ್​ ಅವರನ್ನು ದೊಡ್ಡಮನೆ  ಕುಡಿ, ಮುತ್ತಣ್ಣ, ಶಿವಣ್ಣ, ಹ್ಯಾಟ್ರಿಕ್​​ ಹೀರೋ ಎಂದು ಅಭಿಮಾನಿಗಳಿಗೆ ಪರಿಚಯ. ಆದರೆ ನಿಮ್ಮ ನೆಚ್ಚಿನ ನಟ ಶಿವ ರಾಜ್​​ಕುಮಾರ್​​ ಅವರ ನಿಜವಾದ ಹೆಸರು ಇದು ಅಲ್ಲವೇ.. ಅಲ್ಲ.. ಎಂದು ಹೇಳಿದರೆ ನಿಮಗೆ ನಂಬಲು ಸಾಧ್ಯವಿಲ್ಲ ಅಲ್ವಾ? ಆದರೆ ನಾವು ಇಂದು ನಿಮಗೆ ಶಿವ ರಾಜ್​​ಕುಮಾರ್​ ಅವರ ಅಸಲಿ ಹೆಸರಿನ ಹಿಂದೆ ಇರುವ ಕಹಾನಿಯನ್ನು ಹೇಳಲಿದ್ದೇವೆ….
ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವ ರಾಜ್​​ಕುಮಾರ್ ಪತ್ನಿ, ಮಾಜಿ ಸಿಎಂ ದಿ. ಎಸ್‌. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.  ಈ ವೇಳೆ ಅವರ ಆಸ್ತಿ ವಿವರಗಳನ್ನು ಸಲ್ಲಿಸುವ ವೇಳೆ ಗೀತಾ ಅವರು ತಮ್ಮ ಪತಿ ಶಿವ ರಾಜ್​​ಕುಮಾರ್ ಅವರ ಹೆಸರಿನಲ್ಲಿದ್ದ ಆಸ್ತಿ ವಿವರ ಸಲ್ಲಿಸಿದ್ದಾರೆ ಈ ವೇಳೆ ಶಿವರಾಜ್​ ಕುಮಾರ್​ ಅವರ ಹೆಸರು ದಾಖಲೆಯಲ್ಲಿ ಬೇರೆನೆ ಇದೆ. ಹೀಗಾಗಿ ಇವರ ಹೆಸರಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಶಿವರಾಜ್ ಕುಮಾರ್ ನಿಜವಾದ ಹೆಸರು ಬೇರೆಯದ್ದೇ ಇದೆ ಅಂತೆ. ಪಾಸ್ ಪೋರ್ಟ್, ಬ್ಯಾಂಕ್ ಅಕೌಂಟ್, ಸರಕಾರಿ ದಾಖಲಾತಿಗಳಲ್ಲಿ ಅವರು ಹೆಸರು ಬೇರೆಯಾಗಿದ್ದು, ಸಿನಿಮಾ ರಂಗದಲ್ಲಿ ಮಾತ್ರ ಶಿವರಾಜ್ ಕುಮಾರ್ ಎಂದಿದೆಯಂತೆ. ಆ ಹೆಸರು ಏನಪ್ಪಾ ಅಂದ್ರೆ, ‘ನಾಗರಾಜು ಶಿವ ಪುಟ್ಟಸ್ವಾಮಿ’.

ರಾಜ್‍ಕುಮಾರ್ ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಜ್ಞಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು.  ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಆಗುತ್ತಿದ್ದಂತೆ ರಾಜ್​ಕುಮರ್​ ಅವರಿಗೆ ಸ್ನೇಹಿತರೊಬ್ಬರು ನೀಡಿದ್ದ ಸಲಹೆ ಮೆರೆಗೆ ಹೆಸರು ಬದಲಿಸಿ ಶಿವ ರಾಜ್​ಕುಮಾರ್​ ಎಂದು ಹೆಸರಿಟ್ಟರು. ಹೀಗಾಗಿ ಇವರು ಅಭಿಮಾನಿಗಳಿಗೆ ಶಿವ ರಾಜ್​​ಕುಮಾರ್​ ಎಂದು ಪರಿಚಿತರಾದರು. ಆದರೆ ಕೆಲವು ದಾಖಲೆಯಲ್ಲಿ  ಮಾತ್ರ ಪುಟ್ಟಸ್ವಾಮಿ ಎಂದೆ ಇಂದೂ ಕೂಡಾ ಇದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವಣ್ಣ, ‘ನನ್ನ ಹೆಸರು ನಾಗರಾಜು ಶಿವಪುಟ್ಟಸ್ವಾಮಿ’ ಎಂದು. ನಾನು ಚೆನ್ನೈನಲ್ಲೇ ಓದಿ ಬೆಳೆದಿದ್ದು. ಇವತ್ತಿಗೂ ನನ್ನ ಅಲ್ಲಿನ ಗೆಳೆಯರು ನನ್ನನ್ನ ಪುಟ್ಟಸ್ವಾಮಿ.. ಪುಟ್ಟು.. ಪುಟ್ಟು ಅಂತಲೇ ಕರೆಯುತ್ತಾರೆ. ಇಲ್ಲಿಗೆ ಬಂದಾದ್ಮೇಲೆ, ತಿಪಟೂರಿನಲ್ಲಿ ರಾಮಸ್ವಾಮಿ ಅಂತ ಇದ್ದರು. ಅವರು ಅಪ್ಪಾಜಿ ಅವರ ಸ್ನೇಹಿತರು. ಅವರ ಸಲಹೆ ಮೇರೆಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅಂತ ಹೆಸರಿಡಲಾಯಿತು’’ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.

ಈ ಹಿಂದೆ ಡಾ.ರಾಜ್ ಕುಮಾರ್ ಅವರು ಅದೆಷ್ಟು ಬಾರಿ ಶಿವರಾಜ್ ಕುಮಾರ್ ಕುರಿತು ಮಾತನಾಡುವಾಗ ತಮ್ಮ ತಂದೆಯ ಹೆಸರನ್ನೇ ಶಿವಣ್ಣನಿಗೆ ಇಟ್ಟಿದ್ದು ಎಂದು ಹೇಳಿದ್ದಾರೆ. ಶಿವಪುಟ್ಟಸ್ವಾಮಿ ನಿಜವಾದ ಹೆಸರು ಎಂದೂ ಹೇಳಿದ್ದಾರೆ. ಇಂದು ಬಹಿರಂಗವಾಗಿಯೇ ಶಿವರಾಜ್ ಕುಮಾರ್ ತಮ್ಮ ನಿಜವಾದ ಹೆಸರನ್ನು  ಈ ಹಿಂದೆ ಹೇಳಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + eleven =
Remember me
