ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಸ್ಯಾಂಡಲ್​ವುಡ್ ನಟ ದರ್ಶನ್ ಆತನನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಡಿ ಗ್ಯಾಂಗ್​ ಜೈಲಿನಲ್ಲಿದೆ. ರೌಡಿ ಗ್ಯಾಂಗ್​ಗಳ ಜತೆ ದರ್ಶನ್​ ಜೈಲಿನಲ್ಲಿ ಕಾಲ ಕಳೆಯುತ್ತಿರುವ ಫೋಟೋ ವೈರಲ್​​ ಆಗಿದ್ದು ಒಂದು ಕಡೆ ಆದರೆ ಮತ್ತೊಂದು ಇಂಟ್ರಸ್ಟಿಂಗ್​ ವಿಚಾರ ಬೆಳಕಿಗೆ ಬಂದಿದೆ.
ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಕುಳಿತು ಬೆಂಗಳೂರಿನ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಕುಳಿತುಕೊಂಡು ದರ್ಶನ್ ಸಿಗರೇಟ್‌ ಸೇದುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ. ಪ್ಲಾಸ್ಟಿಕ್‌ ಕುರ್ಚಿಯಲ್ಲಿ ಕುಳಿತುಕೊಂಡಿರುವ ದರ್ಶನ್‌, ಒಂದು ಕೈನಲ್ಲಿ ಟೀ ಕಪ್ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್‌ ಹಿಡಿದುಕೊಂಡಿದ್ದಾನೆ. ಆತನ ಜೊತೆಗೆ ಮತ್ತೊಬ್ಬ ಕೈದಿಯಾಗಿರುವ ಮ್ಯಾನೇಜರ್‌ ನಾಗರಾಜ್‌ ಕೂಡ ಇದ್ದಾನೆ. ದರ್ಶನ್‌ ಕೂದಲು ತೆಗೆದಿರುವುದು ಫೋಟೋದಲ್ಲಿ ಕಂಡುಬಂದಿದೆ. ಮತ್ತೋರ್ವ ಕುಳ್ಳ ಸೀನ ಎಂದು ತಿಳಿದುಬಂದಿದೆ.
ಈ ಫೋಟೋ ಹೇಗೆ ಹೊರಗಡೆ ಬಂತು ಎಂಬ ಕಥೆ ಕೂಡ ಕುತೂಹಲವಾಗಿದೆ. ವೇಲು ಎನ್ನುವ ಖೈದಿ ಈ ಫೋಟೋವನ್ನು ತೆಗೆದಿದ್ದು, ತನ್ನ ಹೆಂಡತಿಗೆ ಆತ ಜೈಲಿನಿಂದ ಫೊಟೋ ಕಳುಹಿಸಿದ್ದ. ಈಗ ಅದು ಹೊರಬಂದಿದೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಯಾವುದೇ ಸ್ಪಷ್ಟವಾದ ಮಾಹಿತಿ ಇಲ್ಲ.
ಈ ಒಂದು ಫೋಟೋ ವೈರಲ್​ ಆಗಿರುವ ಬೆನ್ನಲ್ಲೇ ಮತ್ತೆ ಕೆಲವು ಫೋಟೋಗಳು ಹಾಗೆ ವಿಡಿಯೋ ಕಾಲ್​ ಕ್ಲಿಪ್​ಗಳು ವೈರಲ್​​ ಆಗಿದ್ದವು. ಆದರೆ ಈ ಫೋಟೋದಲ್ಲಿ ವೈರಲ್​ ಆಗಿರುವುದರಲ್ಲಿ ರೌಡಿ ನಾಗ ಹಾಕಿರುವ ಬಟ್ಟೆ ವಿಚಾರವಾಗಿ ಸುದ್ದಿಯಾಗುತ್ತಿದೆ.
ದರ್ಶನ್ ಪಕ್ಕದಲ್ಲಿ ಆರಾಮಾಗಿ ಕೂತು ಹರಟೆ ಹೊಡೆಯುತ್ತಿರುವ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಸ್ಟೈಲ್ ಹಾಗೂ ಟೀ ಶರ್ಟ್‌ ಸಿಕ್ಕಾಪಟ್ಟೆ ದುಬಾರಿಯಾಗಿದೆ.

ನಾಗ ಧರಿಸಿರೋ ಈ ಶರ್ಟ್ ಮಾಮೂಲಿ ಬ್ರ್ಯಾಂಡ್‌ನದ್ದಲ್ಲ. ಇದು ಬಾಲ್ಮೈನ್ ಅನ್ನೋ ಪ್ಯಾರಿಸ್ ಮೂಲದ ಕಂಪನಿಯ ಟೀ ಶರ್ಟ್‌ ಆಗಿದೆ. ಬಾಲ್ಮೈನ್ ಟೀ ಶರ್ಟ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಸಾಮಾನ್ಯವಾಗಿ ಇಷ್ಟು ದುಬಾರಿ ಟೀ ಶರ್ಟ್‌ಗಳನ್ನು ಸಿನಿಮಾ ತಾರೆಯರು, ಸೂಪರ್ ಸ್ಟಾರ್‌ಗಳು ಧರಿಸಿದ್ದಾರೆ. ಮಾರುಕಟ್ಟೆಯಲ್ಲಿ ಈ ಟೀ ಶರ್ಟ್‌ನ ಮೇಲೆ ಬರೋಬ್ಬರಿ 470 ಡಾಲರ್ಸ್‌ಗಳಿದೆ. ಭಾರತದಲ್ಲಿ ಸರಿ ಸುಮಾರು 40-50 ಸಾವಿರ ರೂಪಾಯಿ ಇದು ಬೆಲೆ ಬಾಳುತ್ತಿದೆ.
ಪ್ಯಾರಿಸ್ ಮೂಲದ ಬಾಲ್ಮೈನ್ ಜಗತ್ತಿನಲ್ಲೇ ಅತ್ಯುನ್ನತ ಶರ್ಟ್ಸ್‌, ಜಾಕೆಟ್‌ಗಳನ್ನು ತಯಾರಿಸುವ ಕಂಪನಿಯಾಗಿದೆ. ಇದರ ಶಾಖೆಗಳು ಇಟಲಿ, ಚೀನಾ, ಜಪಾನ್, ಬಲ್ಗೇರಿಯಾ, ಪೋರ್ಚುಗಲ್ ಮತ್ತು ಪೋಲಾಂಡ್‌ನಲ್ಲಿದೆ. ಇಲ್ಲಿಂದಲೇ ಜಗತ್ತಿನ ಶ್ರೀಮಂತ ವ್ಯಕ್ತಿಗಳು ಬಾಲ್ಮೈನ್ ಟೀ ಶರ್ಟ್‌ಗಳನ್ನು ಆಮದು ಮಾಡಿಕೊಳ್ಳುತ್ತಾರೆ.
ದರ್ಶನ್​ಗೆ ಜೈಲಿನಲ್ಲಿ ಸಿಗ್ತಿದೆ ಸಿಗರೇಟ್, ಬಿರಿಯಾನಿ, ಎಣ್ಣೆ! ದಾಸನಿಗೆ ಇಷ್ಟೇಲ್ಲಾ ವ್ಯವಸ್ಥೆ ಮಾಡ್ತಿರೋದು ಯಾರು ಗೊತ್ತಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four + 8 =
Remember me
