ಬೆಳಗಾವಿ:ರಾತೋರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿ ಚಾಲಕ ಮತ್ತು ಕ್ಲೀನರ್​ಗೆ ಥಳಿಸಿ ಲಾರಿ ಸಮೇತ ಅರಿಶಿನ ದೋಚಿದ್ದ ಖದೀಮರೀಗ ಕಂಬಿ ಎಣಿಸುವಂತಾಗಿದೆ.
ಭರ್ಜರಿ ಕಾರ್ಯಾಚರಣೆ ನಡೆಸಿರುವ ಚಿಕ್ಕೋಡಿ ಪೊಲೀಸರು 7 ದರೋಡೆಕೋರರನ್ನು ಬಂಧಿಸಿದ್ದು, 1.3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿರಿಅನುಮಾನಾಸ್ಪದ ಸೂಟ್​ಕೇಸ್ ಕಂಡು ಬೆಚ್ಚಿದ ಜನತೆ, ಸ್ಥಳಕ್ಕೆ ಬಾಂಬ್​ ಪತ್ತೆ ದಳ ಭೇಟಿ
ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಗಣೇಶ ಕಲ್ಲಪ್ಪ ಕೋಳಿ(34), ದಾದಾಸಾಹೇಬ ಶಂಕರ ಟೋಣ್ಣೆ(34), ಜನಾರ್ದನ ಫೆಂಡ(33), ಗುರುನಾಥ ಹಾಲಳ್ಳಿ(29), ಶಿವಾನಂದ ಪನದಿ(35), ಕಲೀಂ ಮಾಲದಾರ(30) ಮತ್ತು ಪಾಂಡುರಂಗ ಹಳ್ಳೂರ(31) ಬಂಧಿತರು.
ಜೂ.7ರಂದು ತಮಿಳುನಾಡಿನ ಎಂ.ಚಿನ್ನಸ್ವಾಮಿ ಎಂಬುವರು ಲಾರಿಯಲ್ಲಿ ಅರಿಶಿನ ತುಂಬಿಕೊಂಡು ಕಬ್ಬೂರ ಗ್ರಾಮದಿಂದ ಚಿಕ್ಕೋಡಿಗೆ ಬರುತ್ತಿದ್ದರು. ಕಬ್ಬೂರದಿಂದ 2 ಕಿ.ಮೀ. ದೂರದಲ್ಲಿ ಲಾರಿಯನ್ನು ಅಡ್ಡಗಟ್ಟಿದ್ದ ದರೋಡೆಕೋರರು ಚಾಲಕ ಹಾಗೂ ಕ್ಲೀನರ್​ನ ಕೈಕಾಲು ಕಟ್ಟಿ ಅಥಣಿ ತಾಲೂಕಿನ ಹಳ್ಳಿಗೆ ಎಸೆದು, ಲಾರಿ ಸಮೇತ 13 ಲಕ್ಷ ರೂ.‌ ಮೌಲ್ಯದ ಅರಿಶಿನ ದರೋಡೆ ಮಾಡಿದ್ದರು.
ಇದನ್ನೂ ಓದಿರಿಆಭರಣ ಕದ್ದನೆಂದು 12 ವರ್ಷದ ಬಾಲಕನಿಗೆ ಸಿಗರೆಟ್​ನಿಂದ ಸುಟ್ಟರು, ವಿದ್ಯುತ್​ ಶಾಕ್​ ನೀಡಿದರು!
ಈ ಕುರಿತು ದೂರು ದಾಖಲಿಸಿಕೊಂಡಿದ್ದ ಚಿಕ್ಕೋಡಿ ಠಾಣೆ ಪೊಲೀಸರು ಖದೀಮರ ಪತ್ತೆಗೆ ಮೂರು ತಂಡ ರಚನೆ ಮಾಡಿದ್ದರು. ಕಾರ್ಯಾಚರಣೆಯಲ್ಲಿ ದರೋಡೆಕೋರರು ಸಿಕ್ಕಿಬಿದ್ದಿದ್ದು, ಆರೋಪಿಗಳಿಂದ 2 ಲಾರಿ, ಟ್ರ್ಯಾಕ್ಟರ್, 2 ಕಾರು, ದ್ವಿಚಕ್ರ ವಾಹನ ಸೇರಿ ಒಟ್ಟು 1.3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್​ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಇದನ್ನೂ ಓದಿರಿVIDEO| ಲವ್​ ಮಾಡಿದ್ದಕ್ಕೆ ಹುಡುಗನ ಮೇಲೆ ಪುಡಿ ರೌಡಿಗಳ ಅಟ್ಟಹಾಸ: ಪಾರ್ಕ್​ಗೆ ಕರೆದೊಯ್ದು ಥಳಿತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 2 =
Remember me
