ಬೆಂಗಳೂರು:‘ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ’ ಆರೋಪದಡಿ ಬಂಧನ ಭೀತಿಯಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್​ ರೇವಣ್ಣರನ್ನು ಎಸ್​ಐಟಿ ಅಧಿಕಾರಿಗಳು ಗುರುವಾರ ತಡರಾತ್ರಿ 12:40ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರೆಸ್ಟ್​ ಮಾಡಿದ್ದಾರೆ.
ಈ ವೇಳೆ ಎಸ್‌ಐಟಿ ಅಧಿಕಾರಿಗಳು ಮಹಿಳಾ ಪೊಲೀಸರನ್ನೇ ಕಳುಹಿಸಿ ಪ್ರಜ್ವಲ್ ಅವರನ್ನು ಬಂಧಿಸಿದ್ದಾರೆ.  ಪ್ರಜ್ವಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎಸ್‌ಐಟಿ ತಂಡದಲ್ಲಿರುವ ಐಪಿಎಸ್ ಅಧಿಕಾರಿಗಳಾದ ಸುಮನ್ ಪನ್ನೇಕರ್ ಹಾಗೂ ಸೀಮಾ ಲಾಟ್ಕರ್ ನೇತೃತ್ವದ ತಂಡ ವಶಕ್ಕೆ ಪಡೆದಿದೆ. ಅದು ಯಾಕೆ ಎಂಬ ಚರ್ಚೆ ಶುರುವಾಗಿದೆ.
5 women Police officers including SP escorted#NDAMP candidate and#RapeAccusedPrajwal Revanna to CID HQ after arrest.In a bid to send a strong message to the public & survivors in the#PrajwalRevannarape cases. The move is aimed to show the seriousness of#Karnatakagovt.pic.twitter.com/uOhGoqaq3K
ಇದನ್ನೂ ಓದಿ:ಪ್ರೀತಿಸಲು ಯುವತಿ ನಿರಾಕರಣೆ; ನೇಹಾ, ಅಂಜಲಿ ಮಾದರಿ ನಡೆಯಿತು ಮತ್ತೊಂದು ಹತ್ಯೆ
ಜೀಪ್‌ ಚಾಲಕ ಹೊರತು ಪಡಿಸಿದರೆ ಉಳಿದವರೆಲ್ಲಾ ಮಹಿಳಾ ಅಧಿಕಾರಿಗಳು, ಸಂಸದನ ಬಂಧನ ಸಂದರ್ಭದಲ್ಲಿದ್ದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಮುಜುಗರ ಉಂಟುಮಾಡುವ ನಿಟ್ಟಿನಲ್ಲಿ ಬಂಧಿಸಲಾಗಿದೆ. ಹೀಗಾಗಿ ಪ್ರಜ್ಞಾಪೂರ್ವಕವಾಗಿಯೇ ಮಹಿಳಾ ಪೊಲೀಸರನ್ನು ಕಳುಹಿಸಿ ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ ಎಂದು ಉನ್ನತ ಸುದ್ದಿ ಮೂಲಗಳು ತಿಳಿಸಿವೆ.
ಪ್ರಜ್ವಲ್‌ಗೆ ಸ್ಪಷ್ಟ ಸಂದೇಶ ಕಳಿಸಲೆಂದೇ ಮಹಿಳಾ ಪೊಲೀಸರನ್ನು ಕಳಿಸಲಾಗಿತ್ತು. ಅಲ್ಲದೇ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಬೇಕು. ನಾವಿದ್ದೇವೆ ಧೈರ್ಯವಾಗಿ ಬಂದು ದೂರು ನೀಡುವಂತೆ ಸಂದೇಶ ರವಾನಿಸಬೇಕು. ಹೀಗಾಗಿ ಮಹಿಳಾ ಅಧಿಕಾರಿಗಳಿಂದ ಎಸ್‌ಐಟಿ ಪ್ರಜ್ವಲ್​ರನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
