ಬೆಂಗಳೂರು:ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ತೋರಿಸುತ್ತಾನೆ. ಅದನ್ನು ನೋಡಲು ನಿರಾಕರಿಸಿದರೆ ಚಿತ್ರ ಹಿಂಸೆ ನೀಡಿ ವಿಕೃತಿ ಮೆರೆಯುತ್ತಾನೆ… ಎಂದು ಪತಿ ವಿರುದ್ಧವೇ ವೈದ್ಯೆಯೊಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಬಿಸ್ಮಿಲ್ಲಾನಗರದ ನಿವಾಸಿ 28 ವರ್ಷದ ವೈದ್ಯೆ ನೀಡಿದ ದೂರು ನೀಡಿದವರು. ಈ ವೈದ್ಯೆಯನ್ನು 2019 ಜೂನ್​ನಲ್ಲಿ ಖಾಸಗಿ ಕಂಪನಿ ಉದ್ಯೋಗಿ ಲತೀರ್​ ರೆಹೆಮಾನ್​ ಮದುವೆಯಾಗಿದ್ದ. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು.
‘ಮದುವೆಯಾದ ಆರಂಭದಲ್ಲಿ ಚೆನ್ನಾಗಿಯೇ ಇದ್ದ ಲತೀರ್​, ತದನಂತರ ವರದಕ್ಷಿಣೆ ತರುವಂತೆ ನನಗೆ ಕಿರುಕುಳ ಕೊಡುತ್ತಿದ್ದ. ನೀನು ನೋಡೋಕೆ ಅಂದವಾಗಿಲ್ಲ. ಹೆಚ್ಚಿನ ವರದಕ್ಷಿಣೆ ಸಿಗಬಹುದು ಎಂದು ವಿವಾಹವಾಗಿದ್ದೆ ಎಂದು ನನಗೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದ. ಅಲ್ಲದೆ ಯಾವಾಗಲೂ ಮೊಬೈಲ್​ನಲ್ಲಿ ಅಶ್ಲೀಲ ಫೋಟೊ ಮತ್ತು ವಿಡಿಯೋ ವೀಕ್ಷಿಸುತ್ತಿದ್ದ. ನನಗೂ ವಿಡಿಯೋ ನೋಡಲು ಒತ್ತಾಯಿಸುತ್ತಿದ್ದ. ಇದನ್ನು ನಿರಾಕರಿಸಿದರೆ ಬೆದರಿಸಿ ಹಿಂಸೆ ಕೊಡುತ್ತಿದ್ದ’ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ವರದಕ್ಷಿಣೆ ತಾರದ ಹಿನ್ನೆಲೆಯಲ್ಲಿ ನನಗೆ ಮಾಹಿತಿ ನೀಡದೆ ಪತಿ ದುಬೈಗೆ ತೆರಳಿದ್ದ. ಕೆನರಾ ಬ್ಯಾಂಕ್​ನ ನನ್ನ ಖಾತೆಯಲ್ಲಿದ್ದ ಹಣ ತೆಗೆದುಕೊಂಡು ದುಬೈನಲ್ಲಿ ಬೆಟ್ಟಿಂಗ್​ ಆಡಿ ದುಂದುವೆಚ್ಚ ಮಾಡಿದ್ದ. ಇತ್ತ ಲತೀಪ್​ನ ಪಾಲಕರು ಸಂಬಳವನ್ನು ಮನೆಗೆ ಕೊಡುವಂತೆ ನನ್ನನ್ನು ಒತ್ತಾಯಿಸಿದ್ದರು. ದುಬೈನಿಂದ ಕರೆ ಮಾಡಿದ ಪತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಫೋಟೋಗಳನ್ನು ಸ್ನೇಹಿತರಿಗೆ ಕಳಿಸಿ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದ್ದಾನೆ. ನನ್ನ ಚಿನ್ನಾಭರಣಗಳನ್ನೆಲ್ಲ ಪತಿಯ ಪಾಲಕರು ಕೊಡದೆ ಸತಾಯಿಸುತ್ತಿದ್ದಾರೆ. ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ ಮನೆಯಿಂದ ನನ್ನನ್ನು ನನ್ನ ಗಂಡ ಹೊರ ಹಾಕಿದ್ದಾನೆ’ ಎಂದು ದೂರಿನಲ್ಲಿ ವೈದ್ಯೆ ಆರೋಪಿಸಿದ್ದಾರೆ.
https://www.vijayavani.net/magadi-love-case-young-woman-death-three-people-arrest/
ಪಿಪಿಇ ಕಿಟ್​ ಧರಿಸಿ ಬಂದ ಗೆಳೆಯನೊಂದಿಗೆ ಟೆಕ್ಕಿ ಪತ್ನಿ ಎಸ್ಕೇಪ್​! ಬೆಚ್ಚಿ ಬೀಳ್ತೀರಿ ಆಕೆಯ ಮಾಸ್ಟರ್​ ಪ್ಲ್ಯಾನ್​ ಕೇಳಿದ್ರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
