ಹಾವೇರಿ:ಇಲ್ಲಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಸವೇಶ್ವರ ನಗರದ ಡಾ. ಜಗದೀಶ್ ಗೊಡ್ಡೆಮ್ಮಿ (47) ಮೃತರು. ಇಎನ್​ಟಿ(ಕಿವಿ, ಮೂಗು, ಗಂಟಲು) ವಿಭಾಗದ ತಜ್ಞ ವೈದ್ಯರಾಗಿದ್ದ ಜಗದೀಶ್, ಗೌರಮ್ಮ ಸ್ಮಾರಕ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿರಿಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!
ಮೂರು ದಿನದ ಹಿಂದಷ್ಟೇ (ಆ.20) ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಮೃತಪಟ್ಟಿದ್ದರು. ಇವರ ಸಾವು ಆತ್ಮಹತ್ಯೆ-ಕೊಲೆ ಎಂಬ ವಿವಾದ ಹಸಿಯಾಗೇ ಇದೆ. ಇದರ ಬೆನ್ನಲ್ಲೇ ಮತ್ತೊಬ್ಬ ವೈದ್ಯರು ಆತ್ಮಹತ್ಯೆಗೆ ಮಾಡಿಕೊಂಡಿರುವುದು ದುರಂತ.
ಡಾ. ಜಗದೀಶ್ ಗೊಡ್ಡೆಮ್ಮಿ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಹಾವೇರಿಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಪ್ರಭಾವತಿ ಸ್ಥಳ ಪರಿಶೀಲನೆ ನಡೆಸಿದರು.
ಆರೋಗ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ: ಜಿಪಂ ಸಿಇಒ ವಿರುದ್ಧ ಸಿಡಿದೆದ್ದ ವೈದ್ಯರು..ಕೊಲೆ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − four =
Remember me
