ದೊಡ್ಡಬಳ್ಳಾಪುರ:ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿರುವುದಾಗಿ ‌ ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ಎದುರು ಧರಣಿ ನಡೆಸಿದ ಘಟನೆ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ಗ್ರಾಮದ ಸವಿತಾ (22) ಮೃತ ಬಾಣಂತಿ. ಇಂದು ಬೆಳಗ್ಗೆ 9 ಗಂಟೆಗೆ ಸವಿತಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅರ್ಚನ ಎಂಬ ವೈದ್ಯರು, ಸವಿತಾಗೆ ಸಹಜ ಹೆರಿಗೆ ಮಾಡಿಸಿದ್ದಾರೆ. ಆದರೆ ಹೆರಿಗೆ ನಂತರ ರಕ್ತ ಸ್ರಾವ ಹೆಚ್ಚಾಗುತ್ತಿದ್ದಂತೆ ಬೇರೆ ಕಡೆ ರಕ್ತ ತರುವಂತೆ ಸೂಚಿಸಿದ್ದಾರೆ.
ಬೇರೆ ಕಡೆಯಿಂದ ರಕ್ತ ತಂದ ನಂತರ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಅಲ್ಲದೇ ಮಧ್ಯಾಹ್ನ 2 ಗಂಟೆಯ ನಂತರ ಮಗು ಮತ್ತು ತಾಯಿಯನ್ನು ಆಸ್ಪತ್ರೆಯಿಂದ ಹೊರಗೆ ಕಳಿಸಿದ್ದಾರೆ. ಹೆರಿಗೆ ನಂತರ ತಾಯಿ-ಮಗು ಚೆನ್ನಾಗಿದ್ದಾರೆ ಎಂದು ತಿಳಿಸಿದ್ದ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಸಾವನ್ನಪ್ಪಿದ್ದಾರೆಂದು ಆರೋಪಿಸಿ, ರೊಚ್ಚಿಗೆದ್ದ ಮೃತಳ‌ ಕುಟುಂಬಸ್ಥರು ಆಸ್ಪತ್ರೆ ಎದುರು ಧರಣಿ ನಡೆಸಿದ್ದಾರೆ.
ಅಪ್ಪು ಕೊನೆ ಚಿತ್ರಕ್ಕೆ ಭಾರಿ ಬೇಡಿಕೆ; ದಾಖಲೆ ಸೃಷ್ಟಿಸುವ ಮುನ್ಸೂಚನೆ ನೀಡಿದ ‘ಜೇಮ್ಸ್’!

ಸಹಾಯ ಕೇಳಿದ ನಶೆಯಲ್ಲಿದ್ದ ಯುವತಿಗೆ ಕ್ಯಾಬ್​​ ಚಾಲಕ ಹೀಗಾ ಮಾಡೋದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 8 =
Remember me
