ಬೆಂಗಳೂರು:ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಬರವಣಿಗೆಯು ಮೆಡಿಕಲ್​ ಶಾಪ್​ ಸಿಬ್ಬಂದಿಗೆ ಮಾತ್ರ ಅರ್ಥವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಅದು ನಿಜವೂ ಹೌದು. ಬಹುತೇಕ ವೈದ್ಯರು ಬರಹ ಅಸ್ಪಷ್ಟವಾಗಿರುತ್ತದೆ. ಆದರೆ, ಎಲ್ಲಾ ವೈದ್ಯರು ಬರವಣಿಗೆ ಅಸ್ಪಷ್ಟವಾಗಿರುತ್ತದೆ ಎಂದು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ಏಕೆಂದರೆ, ಇಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಬೆಂಗಳೂರಿನ ವೈದ್ಯರೊಬ್ಬರು ಬರೆದಿರುವ ಔಷಧ ಚೀಟಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಬೆಂಗಳೂರಿನ ವೈದ್ಯರೊಬ್ಬರು ಇಂಗ್ಲಿಷ್​ ಬದಲು ಕನ್ನಡದಲ್ಲೇ ಔಷಧ ಚೀಟಿಯನ್ನು ಬರೆಯುವ ಮೂಲಕ ಇತರೆ ವೈದ್ಯರಿಗೆ ಮಾದರಿಯಾಗಿದ್ದಾರೆ. ಅಲ್ಲದೆ, ವೈದ್ಯಲೋಕದಲ್ಲಿ ಬದಲಾವಣೆಗೆ ನಾಂದಿ ಹಾಡಿದ್ದಾರೆ.
ನಗರದ ಕೆ.ವಿ.ಡೆಂಟಲ್ ಕ್ಲಿನಿಕ್ ಆಸ್ಪತ್ರೆಯ ವೈದ್ಯ ಹರಿಪ್ರಸಾದ್ ಸಿ.ಎಸ್. ಅವರು ಬದಲಾವಣೆ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ. ತಮ್ಮ ಬಳಿ ಆರೋಗ್ಯ ತಪಾಸಣೆಗೆ ಬಂದ ವ್ಯಕ್ತಿಗೆ ಕನ್ನಡದಲ್ಲೇ ಔಷಧಿ ಚೀಟಿಯನ್ನು ಬರೆದುಕೊಟ್ಟು ಮಾದರಿಯಾಗಿದ್ದಾರೆ.
ಔಷಧ ಚೀಟಿಯ ಪ್ರಕಾರ ಸೆ.2ರಂದು ರವಿಶಂಕರ್​ ಎಂಬ ವ್ಯಕ್ತಿ ಡಾ. ಹರಿಪ್ರಸಾದ್​ ಅವರ ಬಳಿ ಆರೋಗ್ಯ ತಪಾಸಣೆಗೆ ಹೋಗಿದ್ದಾರೆ. ಈ ವೇಳೆ ಜೆನ್​​ ಮ್ಯಾಕ್ಸ್​ 500 ಎಂಜಿ ಊಟದ ನಂತರ ಹಾಗೂ ಮೇಗಡಾಲ್​ ಮಾತ್ರೆ ಊಟದ ನಂತರ ಎಂದು ಕನ್ನಡಲ್ಲಿ ಬರೆದಿದ್ದಾರೆ. ಔಷಧಿಯನ್ನು ಎಷ್ಟು ದಿನ ತೆಗೆದುಕೊಳ್ಳಬೇಕು ಮತ್ತು ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ಸಹ ಕನ್ನಡದಲ್ಲೇ ಬರೆದಿದ್ದಾರೆ. ಹೀಗಾಗಿ ಈ ಔಷಧ ಚೀಟಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಅಂದಹಾಗೆ ರಾಜ್ಯದಲ್ಲಿ ಇನ್ಮುಂದೆ ವೈದ್ಯರು ಕನ್ನಡದಲ್ಲೇ ಔಷಧಿ ಚೀಟಿ ಬರೆಯಲು ಆದೇಶ ಹೊರಡಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ. ಒಂದೇ ವೇಳೆ ಕನ್ನಡದಲ್ಲಿ ಬರೆಯಲು ಬರದಿದ್ದರೆ, ಪ್ರಾಧಿಕಾರಿಂದ ಕಲಿಕಾ ಕೇಂದ್ರ ಆರಂಭಿಸುತ್ತೇವೆ ಎಂದು ಸಹ ಬಿಳಿಮಲೆ ಹೇಳಿದ್ದಾರೆ.
ಕೆಲದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಔಷಧ ಚೀಟಿಯ ಫೋಟೋ ಭಾರಿ ವೈರಲ್​ ಆಗುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ನಾಗೌಡ್ ಸಾಮಾಜಿಕ ಆರೋಗ್ಯ ಕೇಂದ್ರಕ್ಕೆ 46 ವರ್ಷದ ಅರವಿಂದ್ ಕುಮಾರ್ ಸೇನ್​ ಎಂಬುವರು ಇತ್ತೀಚೆಗೆ ಭೇಟಿ ನೀಡಿದ್ದರು. ತನಗೆ ಜ್ವರ ಮತ್ತು ದೇಹದಲ್ಲಿ ನೋವಿದೆ ಎಂದು ಹೇಳಿ ಒಪಿಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಅಮಿತ್ ಸೋನಿ ಅವರನ್ನು ಭೇಟಿಯಾದಾಗ, ಪರೀಕ್ಷೆ ನಡೆದ ವೈದ್ಯರು ಔಷಧ ಚೀಟಿಯನ್ನು ಬರೆದುಕೊಟ್ಟಿದ್ದಾರೆ. ಇದಾದ ಬಳಿಕ ಅರವಿಂದ್​ ಜೈನ್ ಅವರು ಔಷಧ ಖರೀದಿಸಲು ಆಸ್ಪತ್ರೆ ಬಳಿಯ ಮೆಡಿಕಲ್ ಸ್ಟೋರ್‌ಗೆ ತೆರಳಿದ್ದರು. ಆದರೆ ಮೆಡಿಕಲ್ ಶಾಪ್​ನ ಸಿಬ್ಬಂದಿ ವೈದ್ಯರು ನೀಡಿದ ಚೀಟಿ ನೋಡಿ ಶಾಕ್ ಆಗಿದ್ದಾರೆ. ಏಕೆಂದರೆ, ಚೀಟಿಯಲ್ಲಿ ಡಬ್ಲ್ಯು ಪದ ಮತ್ತು 225 ಸಂಖ್ಯೆ ಬಿಟ್ಟರೆ ಬೇರೆ ಯಾವುದೇ ಪದವೂ ಅರ್ಥವಾಗದೇ ಗೊಂದಲಕ್ಕೀಡಾದರು.
ಬಳಿಕ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡು, ಇದರಲ್ಲಿ ಬರೆದಿರುವ ಔಷಧಿಯ ಹೆಸರು ನಿಮಗೆ ತಿಳಿದಿದೆಯೇ? ಎಂಬ ಶೀರ್ಷಿಕೆ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಔಷಧ ಚೀಟಿ ಬರೆದ ವೈದ್ಯರ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಫೋಟೋ ವೈರಲ್ ಆದ ಬೆನ್ನಲ್ಲೇ ವೈದ್ಯಕೀಯ ಮಂಡಳಿ, ಔಷಧ ಚೀಟಿ ಬರೆದ ಡಾ. ಅಮಿತ್ ಸೋನಿ ಅವರಿಗೆ ನೋಟಿಸ್ ಕಳುಹಿಸಿದ್ದು, ಉತ್ತರ ನೀಡುವಂತೆ ಕೋರಿದ್ದು, ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಔಷಧ ಚೀಟಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗುತ್ತಿರುವ ಡಾಕ್ಟರ್​ ಇವರು! ಅಂಥದ್ದೇನಿದೆ ಈ ಚೀಟಿಯಲ್ಲಿ?

ಔಷಧ ಚೀಟಿ ನೋಡಿ ಮೆಡಿಕಲ್​​ ಸಿಬ್ಬಂದಿ ಶಾಕ್​! ಪ್ರಿಸ್ಕ್ರಿಪ್ಷನ್ ಬರೆದ ಡಾಕ್ಟರ್​ಗೆ ಎದುರಾಯ್ತು ಸಂಕಷ್ಟ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 − three =
Remember me
