ಮೈಸೂರು:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್​ಒಯು) ವತಿಯಿಂದ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇವರೊಂದಿಗೆ, ಆರ್​ವಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ವಿ.ಎಸ್.ಮೂರ್ತಿ ಮತ್ತು ಬೆಂಗಳೂರಿನ ಟಾಟಾ ಗ್ಲೋಬಲ್ ಸಂಪನ್ಮೂಲ ನಿರ್ವಹಣಾ ಸೇವಾ ಸಂಸ್ಥೆಯ ಉಪಾಧ್ಯಕ್ಷ ಈ.ಎಸ್.ಚಕ್ರವರ್ತಿ ಅವರಿಗೂ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದರು.
ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕೆಎಸ್​ಒಯು 17ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಈ ಕ್ಷಣಕ್ಕೆ ಸಾಕ್ಷಿಯಾಯಿತು. ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಎ.ಬಿ.ಬಸವರಾಜು ಘಟಿಕೋತ್ಸವ ಭಾಷಣ ಮಾಡಿದರು. ಮುಕ್ತ ವಿವಿ ಕುಲಪತಿ ಡಾ.ಎಸ್.ವಿದ್ಯಾಶಂಕರ್, ಕುಲಸಚಿವ ಡಾ.ಆರ್.ರಾಜಣ್ಣ ಇನ್ನಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ 31 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್​ಡಿ ಪದವಿ, 48 ಜನರಿಗೆ ಚಿನ್ನದ ಪದಕ, 38 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. 2018-19 ಮತ್ತು 2019-20ನೇ ಶೈಕ್ಷಣಿಕ ಸಾಲಿನ 8,338 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು.
ತಂದೆ ಡಾ.ವಿಜಯ ಸಂಕೇಶ್ವರ ಅವರೇ ನನಗೆ ರೋಲ್ ಮಾಡಲ್. ನನ್ನೆಲ್ಲ ಸಾಧನೆಗೆ ಅವರೇ ಕಾರಣ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಹೇಳಿದರು. ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಾನು 14-15ನೇ ವಯಸ್ಸಿನಲ್ಲಿರುವಾಗಲೇ ತಂದೆಯವರೊಂದಿಗೆ ವೃತ್ತಿಯಲ್ಲಿ ಸಕ್ರಿಯನಾದೆ. ಶಾಲಾ-ಕಾಲೇಜಿನ ಕಲಿಕೆಯ ಜತೆ ಕಚೇರಿಯಲ್ಲೇ ಹೆಚ್ಚಿನ ಸಮಯ ಕಳೆದಿರುವೆ. ತಂದೆಯವರ ತರಬೇತಿ ನನಗೆ ಆರ್ವಿು ಟ್ರೖೆನಿಂಗ್​ನಂತೆ ಇತ್ತು. ಅಲ್ಲೇ ಶಿಸ್ತು ಕಲಿಸಿಕೊಟ್ಟರು. ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ಇತ್ತೀಚೆಗೆ ಅವರಿಗೂ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪುರಸ್ಕಾರ ದೊರೆತಿದೆ ಎಂದು ಸಂತಸದಿಂದ ನುಡಿದರು. ನನ್ನ ತಂದೆಯವರು ಒಂದು ಟ್ರಕ್​ನಿಂದ ವೃತ್ತಿ ಜೀವನ ಆರಂಭಿಸಿದ್ದರು. ಇದೀಗ 5000ಕ್ಕೂ ಅಧಿಕ ಲಾರಿಗಳನ್ನು ಹೊಂದುವ ಮೂಲಕ ನಾವು ದೇಶದ ಲಾಜಿಸ್ಟಿಕ್ ಕ್ಷೇತ್ರದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ ಎಂದು ಹೆಮ್ಮೆಯಿಂದ ತಿಳಿಸಿದರು. ಈ ಪದವಿಯನ್ನು ಖುಷಿಯಿಂದ ಸ್ವೀಕರಿಸಿರುವೆ. ಜವಾಬ್ದಾರಿಯೂ ಹೆಚ್ಚಾಗಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವೆ. ನನ್ನ ಸಾಧನೆ ಹಿಂದೆ ವಿಆರ್​ಎಲ್ ಬಳಗದ ಕೊಡುಗೆ ಮತ್ತು ನನ್ನ ಕುಟುಂಬದ ಬೆಂಬಲ ಇದೆ ಎಂದರು.
81, 75ರ ಹರಯದಲ್ಲಿ ಪದವಿಯ ಗರಿಮೆ:ರಾಜ್ಯ ಮುಕ್ತ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ ಸಮಾರಂಭ ವೃದ್ಧರ ಶೈಕ್ಷಣಿಕ ಸಾಧನೆಗೆ ಸಾಕ್ಷಿಯಾಯಿತು. 81 ವರ್ಷದ ಶ್ರೀನಿವಾಸಮೂರ್ತಿ, 75 ವರ್ಷದ ಎನ್.ಶ್ರೀಧರ್ ಸ್ನಾತಕೋತ್ತರ ಪದವಿ ಪಡೆದು ಇಳಿವಯಸ್ಸಿನಲ್ಲಿ ಸಾಧಕರಾಗಿ ಇತರರಿಗೆ ಮಾದರಿಯಾದರು. ಶ್ರೀನಿವಾಸಮೂರ್ತಿ ಮಾತೃಭಾಷೆ ಕನ್ನಡದಲ್ಲಿ, ಎನ್.ಶ್ರೀಧರ್ ಪ್ರಾಚೀನ ಭಾಷೆ ಸಂಸ್ಕೃತ ವಿಷಯದಲ್ಲಿ ಎಂ.ಎ. ಪದವಿ ಮುಡಿಗೇರಿಸಿ ಕೊಂಡರು.
ಮಾಸ್ಕ್​ ಧರಿಸುವುದು ಕಡ್ಡಾಯ, ಉಗುಳಿದ್ರೂ ದಂಡ: ಸರ್ಕಾರದಿಂದ ಹೊಸದಾಗಿ ಮತ್ತೆ ಆದೇಶ..

ಹಿಜಾಬ್​ಗಾಗಿ ಪಿಯುಸಿ ಪರೀಕ್ಷೆಯನ್ನೇ ಬಹಿಷ್ಕರಿಸಿದ ಆರು ವಿದ್ಯಾರ್ಥಿನಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + two =
Remember me
