ತುಮಕೂರು:ಜಗತ್ತು ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಇನ್ನೂ ಕೆಲವರು ಮೌಢ್ಯಕ್ಕೆ ಶರಣಾಗಿರುವುದು ದುರಂತದ ಸಂಗತಿ. ತುಮಕೂರಿನ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಹಾಗೂ ಮಗುವನ್ನು ಊರಿನಿಂದ ಹೊರಗೆ ಇಡಲಾಗಿತ್ತು.
ಗೊಲ್ಲರ ಸಂಪ್ರದಾಯದಂತೆ ಒಂದು ತಿಂಗಳು ಬಾಣಂತಿ ಮತ್ತು ಮಗು ಊರಿನಿಂದ ಹೊರಗೆ ಇರಬೇಕಿತ್ತು. ಆದರೆ, ನಿರಂತರ ಮಳೆಯಿಂದ ವಾತಾವರಣ ಥಂಡಿಯಾಗಿದ್ದು, ವಿಪರೀತ ಶೀತದಿಂದ ಬಳಲಿದ ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ಜು.23ರಂದು ಮೃತಟ್ಟಿತು.
ಇದನ್ನೂ ಓದಿ:ಮೌಢ್ಯಕ್ಕೆ ಮಗು ಬಲಿ ಪ್ರಕರಣ​: ಕೊನೆಗೂ ಮನೆ ಸೇರಿದ ಬಾಣಂತಿ, ಇದನ್ನು ಮೊದಲೇ ಮಾಡಿದ್ದರೆ ಮಗು ಉಳಿಯುತ್ತಿತ್ತು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ತೋವಿನಕೆರೆ ಬಳಿಯ ಬಡಮುದ್ದಯ್ಯನಪಾಳ್ಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮೃತಪಟ್ಟಿದ್ದ ಮಗುವನ್ನ ಸಿದ್ದೇಶ್ ಸ್ವಗ್ರಾಮವಾದ ಬಡಮುದ್ದಯ್ಯನಪಾಳ್ಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು‌. ಸದ್ಯ ಪರಿಕ್ಷೆಗಾಗಿ ವೈದ್ಯರು ಮಗುವಿನ ದೇಹದ ಕೆಲ ಅಂಗಾಗಳನ್ನು ಸಂಗ್ರಹಿಸಿಕೊಂಡು ಕೊಂಡಯ್ದಿದ್ದಾರೆ.
ಇದನ್ನೂ ಓದಿ:ಪರೀಕ್ಷೆಗೆ ಬಂದಿದ್ದ ಬಾಣಂತಿ ಅಭ್ಯರ್ಥಿಯ ಮಗುವನ್ನು ಆರೈಕೆ ಮಾಡಿ ಮಾನವೀಯತೆ ಮೆರೆದ ಮಹಿಳಾ ಪೇದೆ!
ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಉಪಸ್ಥಿತಿಯಲ್ಲಿ ಶವವನ್ನು ಹೊರಕ್ಕೆ ತೆಗೆಯಲಾಗಿದ್ದು ಮಗು ಸಾವಿನ ನಿಜವಾದ ಕಾರಣ ತಿಳಿಯಲು ಶವ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 2 =
Remember me
