ಬೆಂಗಳೂರು: ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಮ್ಮ ಹಾಗೂ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆ ನಂತರ ಮನೆಗೆ ಹೋಗುವ ಬದಲು ಪ್ರತ್ಯೇಕವಾಗಿ ವಾಸ ಮಾಡಲು ನಿರ್ಧರಿಸಿದ್ದಾರೆ.
ಸರ್ಕಾರ ಕೂಡ ವೈದ್ಯರ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಅವರಿಗಾಗಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ನಾವು ಎಷ್ಟೇ ಎಚ್ಚರವಹಿಸಿದರೂ ಪ್ರತಿನಿತ್ಯ ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ವೈರಸ್ ನಮ್ಮ ದೇಹದಲ್ಲಿ ಸೇರುವ ಸಾಧ್ಯತೆ ಇರುತ್ತದೆ. ಈ ವೇಳೆ ನಾವು ಮನೆಗೆ ಹೋದಾಗ ನಮ್ಮ ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಬೆರೆಯಲು ಆಗುವುದಿಲ್ಲ. ನನ್ನ ಮತ್ತು ನಮ್ಮ ಕುಟುಂಬದ ಆರೋಗ್ಯ ದೃಷ್ಟಿಯಿಂದ ಮನೆಗೆ ಹೋಗದಿರುವುದೇ ಸೂಕ್ತ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಆಸ್ಪತ್ರೆ ಸಮೀಪದಲ್ಲಿರುವ ಪಿ.ಜಿ.ಯಲ್ಲಿ ಆಶ್ರಯ ಪಡೆಯಲು ವಿಚಾರಿಸಿದರೂ ಮಾಲೀಕರು ಒಪ್ಪಲಿಲ್ಲ. ಹೀಗಾಗಿ ವಿಧಿ ಇಲ್ಲದೆ ಮನೆಗೆ ಹೋಗುತ್ತಿದ್ದೇವೆ. ಪ್ರತಿ 14 ದಿನಗಳಿಗೊಮ್ಮೆ ನಾವು ಕರೊನಾ ತಪಾಸಣೆಗೆ ಒಳಪಡುತ್ತೇವೆ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.
https://www.vijayavani.net/covid-19-tablighi-jamaat-virus-at-bidar/
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 − 2 =
Remember me
