ಬೆಂಗಳೂರು:ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್​ಎಸ್) ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ವೈದ್ಯರ ಜತೆಗೆ ಸರ್ಕಾರ ಮಂಗಳವಾರ ನಡೆಸಿದ ಮಾತುಕತೆ ಪೂರ್ಣ ಪ್ರಮಾಣದಲ್ಲಿ ಫಲಪ್ರದವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರದ ತನಕ ಮತ್ತೊಮ್ಮೆ ಗಡುವು ನೀಡಲಾಗಿದ್ದು, ಅಲ್ಲಿ ತನಕ ಮುಷ್ಕರ ಮುಂದುವರಿಸಲು ವೈದ್ಯರ ಸಂಘ ನಿರ್ಧರಿಸಿದೆ.
ಆರೋಗ್ಯ ಸಚಿವ ಶ್ರೀರಾಮುಲು, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವೈದ್ಯಕೀಯ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ವೈದ್ಯರ ಮನವೊಲಿಕೆ ಮಾಡಲು ಸತತ ಪ್ರಯತ್ನ ನಡೆಯಿತಾದರೂ, ಅವರು ಸಮಾಧಾನವಾಗಲಿಲ್ಲ.ಇದನ್ನೂ ಓದಿ:ಚೀನಾ ಹೂಡಿಕೆಯ ಕಂಪನಿಗೆ ಪ್ರಚಾರ, ಸಚಿನ್ ವಿರುದ್ಧ ಆಕ್ರೋಶ
ವೇತನ ಪರಿಷ್ಕರಣೆ ಆದೇಶ ಹೊರಡಿಸಬೇಕು ಎಂದು ಪಟ್ಟುಹಿಡಿದ ವೈದ್ಯರಿಗೆ, ಸರ್ಕಾರ ಹಲವು ಸುತ್ತಿನ ಮಾತುಕತೆ ನಡೆಸಿದರೂ, ಸಭೆಯಲ್ಲಿ ಯಾವುದೇ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಸಚಿವರುಗಳು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಅದು ಆದೇಶವಾಗಿ ಹೊರ ಬರುವ ತನಕ ಪ್ರತಿಭಟನೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ. ಶುಕ್ರವಾರ ಸಭೆ ನಡೆಸಿ ಸಚಿವರ ಜತೆ ಮತ್ತೊಮ್ಮೆ ರ್ಚಚಿಸಿ ತೀರ್ಮಾನ ಬಳಿಕ ತೀರ್ಮಾನ ಮಾಡಲಾಗುವುದು. ಅಲ್ಲಿಯ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದು ವೈದ್ಯರ ಸಂಘದ ಅಧ್ಯಕ್ಷ ಡಾ.ಜಿ.ಎ.ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದರು. ಶುಕ್ರವಾರದ ತನಕ ಪ್ರತಿಭಟನೆ ನಡೆಸುವ ಕಾರಣ, ಕರೋನಾ ಬುಲೆಟಿನ್ ಸೇರಿದಂತೆ ಇತರ ಕಾಯಿಲೆಗಳ ಅಂಕಿ ಅಂಶ ಸಿಗಲ್ಲ ಎಂದು ಹೇಳಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯರು ಕರೊನಾ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಈಗ ಸಂಬಳ ಹೆಚ್ಚಳ ಮಾಡುವಂತೆ ಕೇಳಿದ್ದಾರೆ. ಸಿಎಂ ಜತೆ ಮಾತುಕತೆ ನಡೆಸಿದ್ದೇವೆ. ವೈದ್ಯರಿಗೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಅವರು ಮುಷ್ಕರ ವಾಪಸು ಪಡೆದು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.ಇದನ್ನೂ ಓದಿ:ವಿದೇಶದಲ್ಲಿ ಕೋಟ್ಯಂತರ ರೂ. ಆಸ್ತಿ: ರವಿ ಪೂಜಾರಿ ವಿಚಾರಣೆಗೆ ಇ.ಡಿ. ಸಿದ್ಧತೆ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ವೈದ್ಯರು ನಾಡಿನ ವಿವಿಧ ಭಾಗದಲ್ಲಿ ವೈದ್ಯ ಸೇವೆ ನೀಡುವ ಮೂಲಕ ತಮ್ಮ ಕಾರ್ಯ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ವೇತನ ಹೆಚ್ಚಳದ ಬಗ್ಗೆ ಒಂದು ನಿರ್ಧಾರ ಕೂಡಾ ಆಗಿದೆ. ಅದು ಯಾವ ರೀತಿ ಎಂದು ವೈದ್ಯರಿಗೆ ಹೇಳಿದ್ದೇವೆ. ವೈದ್ಯ ಸಂಘದ ಪದಾಧಿಕಾರಿಗಳು ಅವರ ಸ್ನೇಹಿತರ ಜತೆ ಮಾತನಾಡಿ ನಿರ್ಧಾರಕ್ಕೆ ಬರುತ್ತಾರೆ ಎಂದರು. ಸಂಬಳದ ಜತೆಗೆ ಇನ್ಸೆಂಟಿವ್ ಅಂತ ಕೊಡುವುದನ್ನು ಸಂಬಳದ ಜತೆ ಸೇರಿಸಬೇಕು ಎಂಬ ಬೇಡಿಕೆ ಇದೆ. ಅವರ ಬೇಡಿಕೆಗೆ ಸ್ಪಂದಿಸಲಾಗಿದೆ. ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ವೈದ್ಯರು ಪ್ರತಿಭಟನೆ ಬಿಟ್ಟು ಜನರ ಸೇವೆ ಮಾಡುವ ಕೆಲಸ ಮಾಡಬೇಕು. ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿ, ವಾರದಿಂದ ವೈದ್ಯರ ಜತೆ ಸಮಾಲೋಚನೆ ಮಾಡಲಾಗುತ್ತಿದೆ. ಆರ್ಥಿಕ ದುಸ್ಥಿತಿ ಹಾಗೂ ಅವರ ಬೇಡಿಕೆ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗಿದೆ. ವೈದ್ಯರಿಗೆ ನೈತಿಕ ಸ್ಪೂರ್ತಿ ನೀಡುವ ಸಲುವಾಗಿ ಸರ್ಕಾರ ಅವರ ಪರವಾಗಿ ತೀರ್ಮಾನ ಕೈಗೊಂಡಿದೆ. ವೈದ್ಯರು ತಮ್ಮ ಸಹೋದ್ಯೋಗಿಗಳ ಜತೆ ರ್ಚಚಿಸಿ ಪ್ರತಿಭಟನೆ ಹಿಂಪಡೆಯುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಅಧಿವೇಶನಕ್ಕೆ ಇನ್ನು ಐದು ದಿನ ಬಾಕಿ ಇರುವಂತೆಯೇ ಸಚಿವರಾದ ಕೆ.ಗೋಪಾಲಯ್ಯ, ಭೈರತಿ ಬಸವರಾಜ್​ಗೆ ಕರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗೌರಿಶಂಕರ್​ಗೆ ಕರೊನಾ: ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರಿಗೆ ಸೋಂಕು ತಗುಲಿದೆ.
ಕುಮಟಾ: ಶಾಸಕ ದಿನಕರ ಶೆಟ್ಟಿ ಸಹೋದರಿ ಶಾಂತಿ ಶೆಟ್ಟಿ (72) ಕರೊನಾ ಸೋಂಕಿನಿಂದ ಮಂಗಳವಾರ ಮೃತಪಟ್ಟಿದ್ದಾರೆ. ಮೃತರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಶಾಸಕರ ಕುಟುಂಬಸ್ಥರಲ್ಲಿ 6 ಮಂದಿಗೆ ಒಂದೇ ದಿನ ಸೋಂಕು ಪತ್ತೆಯಾಗಿತ್ತು. ಎರಡು ದಿನದ ಹಿಂದೆ ಶಾಸಕ ದಿನಕರ ಶೆಟ್ಟಿ ಹಾಗೂ ಅವರ ಸಹೋದರನಿಗೂ ಪಾಸಿಟಿವ್ ಬಂದಿದೆ.
ಈ ಫೋಟೋ ನೋಡಿ ಸುಧಾಮೂರ್ತಿ ತರಕಾರಿ ಮಾರುತ್ತಿದ್ದಾರೆ ಎಂದುಕೊಂಡರೆ ತಪ್ಪು; ಸತ್ಯ ಬೇರೇನೆ ಇದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
