ಕೆ.ಎನ್. ರಾಘವೇಂದ್ರ ಮಂಡ್ಯನಾಲ್ಕು ಬಾರಿ ಗರ್ಭಪಾತವಾದ ಹಿನ್ನೆಲೆಯಲ್ಲಿ ಮತ್ತೆ ಅನಾಹುತ ಎದುರಾಗಬಾರದು ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್್ಸ)ಯಲ್ಲೇ ಬರೋಬ್ಬರಿ ಆರೂವರೆ ತಿಂಗಳು ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸೆ.6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯ ವಾಗಿದ್ದಾರೆ. ಮಂಡ್ಯದ ತಗ್ಗಹಳ್ಳಿ ನಿವಾಸಿ ಮಾದೇಶ್ ಪತ್ನಿ ಜಯಲಕ್ಷ್ಮೀ ಚಿಕಿತ್ಸೆ ಪಡೆದು ಮಗುವಿಗೆ ಜನ್ಮ ನೀಡಿದ್ದಾರೆ. ಮಕ್ಕಳಿಲ್ಲದೆ ನೊಂದಿದ್ದ ಕುಟುಂಬಕ್ಕೆ ಹೊಸ ಬೆಳಕು ಬಂದಂತಾಗಿದೆ.
ಉಚಿತ ಚಿಕಿತ್ಸೆ: ನಂಜನಗೂಡು ತಾಲೂಕು ತಗಡೂರು ನಿವಾಸಿ ಜಯಲಕ್ಷ್ಮೀ ಏಳು ವರ್ಷದ ಹಿಂದೆ ಮಾದೇಶ್ ಅವರನ್ನು ವಿವಾಹವಾಗಿದ್ದರು. ನಾಲ್ಕು ಬಾರಿ ಗರ್ಭಿಣಿಯಾದರೂ ಆರೋಗ್ಯದ ಸಮಸ್ಯೆಯಿಂದ ಮೂರು ತಿಂಗಳಲ್ಲಿಯೇ ಗರ್ಭಪಾತವಾಗುತ್ತಿತ್ತು. ಇದರಿಂದಾಗಿ ಕುಟುಂಬದವರು ನೊಂದಿದ್ದರು. ಈ ನಡುವೆ ಮತ್ತೊಮ್ಮೆ ಗರ್ಭಿಣಿಯಾದರು. ಸ್ನೇಹಿತರ ಸಲಹೆ ಮೇರೆಗೆ ಮಿಮ್ಸ್​ನ
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ. ಮನೋಹರ್ ಅವರನ್ನು ಭೇಟಿ ಮಾಡಿ ತಪಾಸಣೆಗೊಳಪಟ್ಟರು. ಹಿಂದಿನ ಪ್ರಕರಣದ ಮಾಹಿತಿ ಪಡೆದ ಡಾ.ಮನೋಹರ್, ಆಸ್ಪತ್ರೆಯಲ್ಲಿಯೇ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಈ ಮಾಹಿತಿಯನ್ನು ಕುಟುಂಬದವರಿಗೂ ತಿಳಿಸಿದರು. ಕೂಲಿ ಮಾಡಿಕೊಂಡು ಬದುಕು ನಡೆಸುತ್ತಿರುವ ಕುಟುಂಬಕ್ಕೆ ಔಷಧಕ್ಕೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಮಿಮ್್ಸ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಸ್ಥಾನೀಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಅವರೊಂದಿಗೆ ರ್ಚಚಿಸಿ ಉಚಿತವಾಗಿಯೇ ಚಿಕಿತ್ಸೆ ನಿರ್ಧಾರ ತೆಗೆದುಕೊಂಡರು.
ಮಾ.10ರಂದು ಜಯಲಕ್ಷ್ಮೀ ಆಸ್ಪತ್ರೆಗೆ ದಾಖಲಾದರು. ಅಂದಿನಿಂದಲೇ ಪ್ರತಿನಿತ್ಯ ಔಷಧ, ಮಾತ್ರೆಯನ್ನು ನಿರಂತರವಾಗಿ ನೀಡಲಾಗುತ್ತಿತ್ತು. ಜತೆಗೆ ಬಾಣಂತಿಯರಿಗಷ್ಟೇ ನೀಡಲಾಗುತ್ತಿದ್ದ ಊಟದ ವ್ಯವಸ್ಥೆಯನ್ನು ಈಕೆಗೂ ವಿಸ್ತರಣೆ ಮಾಡುವ ಮೂಲಕ ಮಿಮ್್ಸ ಆಡಳಿತ ಮಾನವೀಯ ನಡೆ ಅನುಸರಿಸಿತು. ಖಾಸಗಿಯಾಗಿ ಇದೇ ಚಿಕಿತ್ಸೆ ಪಡೆದಿದ್ದರೆ ದಿನಕ್ಕೆ ಕನಿಷ್ಠ ಒಂದೂವರೆ ಸಾವಿರ ರೂ. ಕೊಡಬೇಕು. ಜಯಲಕ್ಷ್ಮೀ ಆರೂವರೆ ತಿಂಗಳಲ್ಲಿ ಒಂದು ದಿನ ಮಾತ್ರ ಅಂದರೆ ವರಮಹಾಲಕ್ಷ್ಮೀ ಹಬ್ಬದಂದು ಮನೆಗೆ ಹೋಗಿದ್ದರು. ಡಾ.ಮನೋಹರ್, ಡಾ.ಶಿವಕುಮಾರ್, ಡಾ.ಸಂಧ್ಯಾ, ಡಾ.ಉಮೇಶ್, ಡಾ.ಕೀರ್ತಿ, ಡಾ.ತಮ್ಮಣ್ಣ ಅವರ ಜತೆಗೆ ಶುಶ್ರೂಷಕರ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಉತ್ತಮ ಚಿಕಿತ್ಸೆ ಮೂಲಕವೇ ಗಮನ ಸೆಳೆದಿರುವ ಡಾ. ಮನೋಹರ್, ಫೆಬ್ರವರಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದರು. ಏಳು ತಿಂಗಳ ಗರ್ಭಿಣಿಗೆ ಕರುಳ ಮೇಲೆ ಕರುಳು ಇತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಯಶಸ್ಸು ನಮ್ಮ ವೈದ್ಯರು ಹಾಗೂ ಸಿಬ್ಬಂದಿಗೆ ಸಲ್ಲಬೇಕು. ಇಂತಹ ವೈದ್ಯರ ತಂಡ ನಮ್ಮಲ್ಲಿರುವುದು ಹೆಮ್ಮೆಯ ವಿಚಾರ. ಜತೆಗೆ ಶುಶ್ರೂಷಕರ ಸೇವೆಯನ್ನು ಮರೆಯುವಂತಿಲ್ಲ. ಮಿಮ್ಸ್​ನಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವುದು ಇದು ಸಾಕ್ಷಿಯಾಗಿದೆ.
| ಡಾ.ಬಿ.ಜೆ.ಮಹೇಂದ್ರ ಮಿಮ್್ಸ ನಿರ್ದೇಶಕ
ಮಗು ಬೇಕೆನ್ನುವ ಕಾರಣಕ್ಕೆ ಆಸ್ಪತ್ರೆಯಲ್ಲಿ ಉಳಿದೆ. ಒಂದು ದಿನ ಮಾತ್ರ ಮನೆಗೆ ಹೋಗಿದ್ದೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಮನೆಯವರಂತೆ ನೋಡಿಕೊಂಡರು. ನಮ್ಮ ಕುಟುಂಬದವರ ಪಾಲಿಗೆ ಡಾ. ಮನೋಹರ್ ದೇವರು. ಅವರಿಗೆ ಸದಾ ಋಣಿಯಾಗಿರುತ್ತೇವೆ.
| ಜಯಲಕ್ಷ್ಮೀ ಹಾಗೂ ಮಾದೇಶ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + three =
Remember me
