ಬೆಂಗಳೂರು:ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ದಾಖಲೆ ಬಿಡುಗಡೆ ವಾರ್ ಶುರುವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆದಿದೆ. ಅದಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ದಾಖಲೆ ತಮ್ಮ ಬಳಿ ಇದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಪೆನ್ ಡ್ರೈವ ರಹಸ್ಯ ಬಹಿರಂಗಗೊಳಿಸಲೇ ಇಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಸಚಿವರು ಸವಾಲು ಹಾಕಿದರೂ ಪೆನ್‌ಡ್ರೈವ್ ಬಿಡುಗಡೆಯಾಗಲಿಲ್ಲ.
ನೈಸ್ ತನಿಖೆಗೆ ಒತ್ತಾಯಿಸಿ ಬಿಜೆಪಿ ನಾಯಕರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದರೂ ಅದು ಕೂಡ ಅಂತಹ ಪ್ರಯೋಜನವಾಗಲಿಲ್ಲ. ಸರ್ಕಾರಕ್ಕೆ ಬಿಸಿ ತಟ್ಟಲೂ ಇಲ್ಲ. ಈಗ ಆ ಎಲ್ಲ ದಾಖಲೆಗಳನ್ನು ನೇರವಾಗಿ ಪ್ರಧಾನಿಗೆ ಕೊಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.ಅದಾದ ಮೇಲೆ ಬಿಬಿಎಂಪಿ ಅವ್ಯವಹಾರ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಆದರೆ ಎಲ್ಲೂ ಬಿಬಿಎಂಪಿ ಅವ್ಯವಹಾರ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಲ್ಲ. ಇದಕ್ಕೂ ಕೂಡ ಡಿಸಿಎಂ ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ, ನಮ್ಮ ಬಳಿಯೂ ದಾಖಲೆಗಳಿವೆ ನಾವೂ ಶುಭ ಗಳಿಗೆ, ಶುಭ ಸಂದರ್ಭ ನೋಡಿಕೊಂಡು ಬಿಡುಗಡೆ ಮಾಡುತ್ತೇನೆ ಎಂದು ಶಿವಕುಮಾರ್ ಗುಡುಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ದಾಖಲೆ ಬಿಡುಗಡೆಯ ವಾಗ್ಯುದ್ಧ ನಡೆಯುತ್ತಿದೆ.
ಪೆನ್ ಡ್ರೈವ್ ವಿಚಾರದಲ್ಲಿ ಜೆಡಿಎಸ್‌ಗೆ ಏನೂ ಲಾಭವಾಗಿಲ್ಲ. ಪೆನ್ ಡ್ರೈವ್ ರಾಜ್ಯ ರಾಜಕೀಯದಲ್ಲಿ ದೊಡ್ಡ ಸದ್ದು ಕೂಡ ಮಾಡಲಿಲ್ಲ. ಆಡಳಿತ ಕಾಂಗ್ರೆಸ್‌ನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವೂ ಆಗಲಿಲ್ಲ. ಬದಲಾಗಿ ಕಾಂಗ್ರೆಸ್ ಸವಾಲಿನಿಂದ ಜೆಡಿಎಸ್ ನಾಯಕರು ಮುಜುಗರಕ್ಕೊಳಗಾಗಿದ್ದೂ ಸುಳ್ಳಲ್ಲ.ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸ್, ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ ಎಂದು ಆಡಳಿತ ಕಾಂಗ್ರೆಸ್ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದೆ. ಆದರೆ ನಾನು ಪೆನ್ ಡ್ರೈವ್ ಬಿಡುಗಡೆ ಮಾಡಿದರೆ ನಿಮಗೆ ಕ್ರಮ ಕೈಗೊಳ್ಳುವ ತಾಕತ್ತಿದೆಯಾ ಎಂಬು ಕೇಳುತ್ತಿದ್ದಾರೆಯೇ ಹೊರತು ರಹಸ್ಯ ಬಹಿರಂಗಮಾಡಿಲ್ಲ.
ಈಗ ಬಿಬಿಎಂಪಿಯಲ್ಲಿ ನಡೆದಿರುವ ಅವ್ಯವಹಾರವನ್ನು ಒಂದೆರಡು ದಿನಗಳಲ್ಲಿ ಮಾಧ್ಯಮಗಳ ಮುಂದಿಡುವುದಾಗಿ ಹೇಳಿದ್ದಾರೆ. ಆದರೆ ಅವರು ದಾಖಲೆ ಬಿಡುಗಡೆ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ. ಆದರೂ ಕುಮಾರಸ್ವಾಮಿ ಮಾತುಗಳು ಬಿಜೆಪಿ, ಕಾಂಗ್ರೆಸ್ ಜತೆಗೆ ಜೆಡಿಎಸ್ ಪಾಳೆಯದಲ್ಲಿ ಕುತೂಹಲ ಮೂಡಿದೆ.
ಯಾವ ದಾಖಲೆ? ಯಾರ ಕಾಲದ್ದು? ಯಾರ ತಲೆಗೆ ಸುತ್ತಿಕೊಳ್ಳುತ್ತೆ ಎಂಬ ತರಹೇವಾರಿ ಚರ್ಚೆಗಳು ಆರಂಭಗೊಂಡಿವೆ.ಬಿಬಿಎಂಪಿ ಹಗರಣ ವಿಚಾರದಲ್ಲಿ ಕುಮಾರಸ್ವಾಮಿ ಬಯಲಿಗೆಳೆಯುವ ವಿಷಯ ಠುಸ್ ಪಟಾಕಿ ಆದರೆ ಹೇಗೆ? ಎಂಬ ಪ್ರಶ್ನೆ ಜೆಡಿಎಸ್ ಹಲವು ನಾಯಕರನ್ನು ಕಾಡುತ್ತಿದೆ ಎನ್ನಲಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − 3 =
Remember me
