ದೊಡ್ಡಬಳ್ಳಾಪುರ:ಇತ್ತೀಚಿಗೆ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಯುವಕನೊಬ್ಬ ಡೆತ್​ನೋಟ್​ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜಕೀಯ ಕಿರುಕುಳವೇ ಸಾವಿಗೆ ಕಾರಣ ಎನ್ನಲಾಗಿದೆ.
ದೊಡ್ಡಬಳ್ಳಾಪುರ ನಗರದ ಕಚೇರಿಪಾಳ್ಯದ ವಿನೋದ್​(30) ಮೃತ ದುರ್ದೈವಿ. ನಗರಸಭೆ ಸದಸ್ಯೆ ಪತಿ ಮಂಜುನಾಥ್​ ಹಾಗೂ ಇನ್ನೂ ಮೂವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್​ನೋಟ್​ ಬರೆದಿಟ್ಟು ವಿನೋದ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೆ.16ರ ಬೆಳಗ್ಗೆ ಸ್ನೇಹಿತನ ಬೈಕ್​ನಲ್ಲಿ ತಳಗವಾರ ಗ್ರಾಮಕ್ಕೆ ಡ್ರಾಪ್​ ತೆಗೆದುಕೊಂಡಿದ್ದ ವಿನೋದ್​, ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಇದೇ ವೇಳೆ ಕೆರೆ ದಡದಲ್ಲಿ ಡೆತ್​ನೋಟ್​ ಹಾಗೂ ಚಪ್ಪಲಿ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ಶವ ಪತ್ತೆಯಾಯಿತು.
ಅನಾಮಿಕ ಪತ್ರ:ವಿನೋದನಿಗೆ ಅಂಚೆ ಮೂಲಕ ಇತ್ತೀಚೆಗೆ ಅನಾಮಿಕ ಪತ್ರ ಬಂದಿತ್ತು. ಮಾನಸಿಕ ಒತ್ತಡಕ್ಕೆ ಸಿಲುಕಿದ್ದ, ಇಡೀ ದಿನ ಮನೆಯಲ್ಲಿ ಒಂಟಿಯಾಗಿಯೇ ಇದ್ದ, ಬಳಿಕ ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ.
ಪಕ್ಷಾಂತರ ಕಾರಣವೇ?:ಈ ಹಿಂದೆ ನಗರಸಭೆ ಚುನಾವಣೆಯಲ್ಲಿ ಮಂಜುನಾಥ್​ರ​ ಪತ್ನಿ ಗೆಲುವಿನಲ್ಲಿ ವಿನೋದ್​ ಪ್ರಮುಖ ಪಾತ್ರ ವಹಿಸಿದ್ದ. ಬಳಿಕ ಇಬ್ಬರ ನಡುವೆ ಸಂಬಂಧ ಕೆಟ್ಟಿತ್ತು, ಇತ್ತೀಚೆಗೆ ವಿನೋದ್​ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ, ಇದು ಮಂಜುನಾಥ್​ ಹಾಗೂ ಆತನ ಹಿಂಬಾಲಕರ ಕೆಂಗಣ್ಣಿಗೆ ಕಾರಣವಾಗಿತ್ತು. ಅವರು ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂದು ದೂರಿರುವ ವಿನೋದ್​ರ ಪತ್ನಿ ಅನುಷಾ, ಇದು ಆತ್ಮಹತ್ಯೆಯಲ್ಲ. ಪೂರ್ವ ಸಂಚಿನ ಕೊಲೆ ಎಂದು ಆರೋಪಿಸಿದ್ದಾರೆ. ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಬೇಕು ಎಂದು ಪ್ರಕರಣ ದಾಖಲಿಸಿದ್ದಾರೆ.
ರೇವಣ್ಣ ನಮ್ಮ ಪಕ್ಷದ ಜ್ಯೋತಿಷಿ… ಎನ್ನುತ್ತಲೇ ಇಂದು ನಡೆಯಬೇಕಿದ್ದ ಬಹುನಿರೀಕ್ಷಿತ ಕಾರ್ಯವನ್ನು ಮುಂದೂಡಿದ ಎಚ್​ಡಿಕೆ!

ಸ್ಕೂಲ್​ ಬಸ್​ಗೆ 3 ವರ್ಷದ ಬಾಲಕಿ ಬಲಿ! ತಾತನ ಮನೆ ಮುಂದೆ ಆಟವಾಡುತ್ತಿರುವಾಗಲೇ ದುರಂತ

ಇಂತಹ ಹೆಂಗಸು ನನಗೆ ಬೇಡ, ಮಗನೇ ನಿನ್ನ ಅಮ್ಮ ಸರಿಯಿಲ್ಲ, ಆಕೆ ಜತೆ ಇರಬೇಡ… ಎಂದು ಮನದ ನೋವು ಬಿಚ್ಚಿಟ್ಟು ದುರಂತ ಅಂತ್ಯ ಕಂಡ ತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
