ಬೆಂಗಳೂರು:ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಯಲ್ಲೇ ರಾಜಕಾರಣಿಗಳೆಲ್ಲರೂ ಮುಳುಗಿ ಹೋಗಿರುವಾಗ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ಹೊಸ ‘ಯೋಗ’ವೊಂದು ಅರಸಿ ಬಂದಂತಿದೆ. ಅಂದರೆ ರಾಜಕೀಯದ ಜತೆಗೆ ಅವರು ಮತ್ತೊಮ್ಮೆ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಗೋಚರಿಸಿವೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಬಣ್ಣದಲೋಕದ ಮಂದಿ ಭೇಟಿಯಾಗಿರುವುದೇ ಇಷ್ಟೆಲ್ಲ ಕುತೂಹಲಕ್ಕೆ ಕಾರಣ. ನಿರ್ದೇಶಕರಾದ ಯೋಗರಾಜ ಭಟ್, ದುನಿಯಾ ಸೂರಿ ಜತೆಗೆ ವಿಕಾಸ್​ ಹಾಗೂ ಸುಧೀರ್ ಅವರು ಬಿ.ಸಿ. ಪಾಟೀಲ್ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಪಾಟೀಲರು ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲವೊಂದು ಮೂಡಿದೆ.
‘ಸೂರಿ, ಹರಿಕೃಷ್ಣ, ವಿಕಾಸ್, ಸುಧೀರ್.. ಒಂದು ಅದ್ಭುತ ಸಿನಿಮಾ ಲೈನ್ ಅಪ್ ಆಯ್ತು. ಸ್ನೇಹಿತರೆಲ್ಲರ ಮುದ್ದಾಟ ಗುದ್ದಾಟ ಹಾಗೂ ಸಪೋರ್ಟ್ ಜೊತೆ ನಿರ್ದೇಶನ ನನ್ನದು. ನಟವರ್ಗ ಅದ್ಭುತ, ಆದ್ರೆ ಇವತ್ತು ಹೇಳಂಗಿಲ್ಲ.. ಶೀಘ್ರದಲ್ಲೇ ಬಾಕಿ ಸುದ್ದಿ..’ ಎಂದು ಈ ಭೇಟಿಯ ಕುರಿತಂತೆ ಯೋಗರಾಜ ಭಟ್​ ಅವರು ಹೇಳಿಕೊಂಡಿರುವುದು ಕೌತುಕವನ್ನು ಹೆಚ್ಚಿಸಿದೆ.

ಯೋಗರಾಜ ಭಟ್​ ಅವರ ನಿರ್ದೇಶನದಲ್ಲಿ ಬಿ.ಸಿ. ಪಾಟೀಲರು ಹೀರೋ ಆಗಿ ನಟಿಸಲಿದ್ದಾರೆಯೇ ಅಥವಾ ಯಾವುದಾದರೂ ಒಂದು ಅತ್ಯಂತ ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಬಹುದೇ ಎಂಬೆಲ್ಲ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ. ಈ ಹಿಂದೆ ಬಿ.ಸಿ. ಪಾಟೀಲರು ನಾಯಕನಾಗಿ ಅಭಿನಯಿಸಿದ್ದ ‘ಕೌರವ’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಒಟ್ಟಿನಲ್ಲಿ ಈಗಿನ ಬೆಳವಣಿಗೆಯಿಂದ ‘ಹಲೋ ಹಲೋ ಕೌರವೇಶ, ಇದೇನಿದು ಹೊಸ ವೇಷ..’ ಎಂದು ಅಂದು ರೀಲ್​ನಲ್ಲಿ ಅರ್ಥಾತ್ ‘ಕೌರವ’ ಸಿನಿಮಾದಲ್ಲಿ ಕೇಳಿಬಂದಿದ್ದ ಸಾಲುಗಳು ಇಂದು ರಿಯಲ್​ ಆಗಿ ಕೇಳಿಬರುವಂತಾಗಿವೆ.
ಚಾನು ಹೆಸರು ಒಲಿಂಪಿಕ್ಸ್ ಪದಕ ಪಟ್ಟಿಗೆ ಸೇರುತ್ತಿದ್ದಂತೆ ಅಣ್ಣನಿಗೆ ನೆನಪಾಯಿತು ಕಟ್ಟಿಗೆ!

ಹೊಡೆದಾಟಕ್ಕೆ ತಿರುಗಿತು ಜಮೀನು ಕುರಿತ ಜಗಳ: ಹಾಲಿನ ಡೇರಿ ಅಧ್ಯಕ್ಷರಿಂದಲೇ ಹಲ್ಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
