ಬೆಂಗಳೂರು:ಕಠಿಣ ನಿರ್ಬಂಧಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡವರಿಗೆ ಪರಿಹಾರ ಪ್ಯಾಕೇಜ್ ಘೊಷಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ, ಮೊದಲು ಕರೊನಾ ನಿಯಂತ್ರಣ ನಮ್ಮ ಮುಂದಿರುವ ಗುರಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕರೊನಾ ಸೋಂಕು ಸಂಪರ್ಕ ಕಡಿತಗೊಳಿಸಲೆಂದು ಬಿಗಿ ನಿರ್ಬಂಧಗಳನ್ನು ಜಾರಿ ಗೊಳಿಸಿದೆ. ವಿಷಮ ಪರಿಸ್ಥಿತಿಗೆ ಪರಿಹಾರ ಕಂಡು ಕೊಳ್ಳುವುದು ಮುಖ್ಯವಾಗಿದೆ. ಜನರ ಜೀವ ರಕ್ಷಣೆಗೆ ಆದ್ಯತೆ ನೀಡಿದ್ದು, ಮಾರ್ಗಸೂಚಿಯನ್ನು ತಪ್ಪದೆ ಪಾಲಿಸಿ ಸಹಕರಿಸಬೇಕು ಎಂದು ಕೋರಿದರು.
ವಾರ್ ರೂಂಗಳಿಗೆ ಶಹಬ್ಬಾಸ್:ಎರಡೂ ವಾರ್ ರೂಂಗಳ ಕಾರ್ಯವೈಖರಿ ಪರಿಶೀಲಿಸಿ, ಅಧಿಕಾರಿಗಳ ಜತೆಗೆ ರ್ಚಚಿಸಿ ಮಾಹಿತಿ ಪಡೆದಿರುವೆ. ಇದೇ ವೇಳೆ ಕೆಲವು ಸಲಹೆ-ಸೂಚನೆಗಳನ್ನು ನೀಡಿರುವೆ. ಇಡೀ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ವಾರ್ ರೂಂ ವ್ಯವಸ್ಥೆಯಿದೆ. ಅಧಿಕಾರಿಗಳು ಪಾಳಿ ಪ್ರಕಾರ 24 ತಾಸು ಕಾರ್ಯನಿರ್ವಹಿಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಂಕಷ್ಟ ಸಂದರ್ಭದಲ್ಲಿ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಸಚಿವರು ಸಕ್ರಿಯ:ಕರೊನಾ ನಿರ್ವಹಣೆ ಪರಿಶೀಲನೆಗೆ ಸಿಎಂ ಫೀಲ್ಡಿಗೆ ಇಳಿಯುತ್ತಿದ್ದಂತೆ ಬಹುತೇಕ ಸಚಿವರು ಸಕ್ರಿಯರಾಗಿ ಕಾಣಿಸಿಕೊಂಡಿದ್ದಾರೆ. ಸಭೆಗಳನ್ನು ನಡೆಸುವುದಕ್ಕೆ ಸೀಮಿತವಾಗಿದ್ದ ಸಚಿವರು ಕೋವಿಡ್ ಕೇರ್ ಕೇಂದ್ರ, ವಾರ್ ರೂಂಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ವೈದ್ಯರು ಹೇಳಿದರೂ ಕದಲದ ರೋಗಿಗಳು:ತಿಂಗಳು ಕಳೆದು, ವೈದ್ಯರು ಸಲಹೆ ನೀಡಿದ ನಂತರವೂ 337 ರೋಗಿಗಳು ಆಸ್ಪತ್ರೆ ಬಿಟ್ಟು ಕದಲಿಲ್ಲ. 20 ದಿನಗಳು ಕಳೆದ ಮೇಲೂ 503 ರೋಗಿಗಳು ಇನ್ನೂ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾರೆ. ಈ ಕುರಿತ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದ ಯಡಿಯೂರಪ್ಪ, ವಾರ್ ರೂಂ ದಕ್ಷತೆಯಿಂದ ಕೆಲಸ ಮಾಡುತ್ತಿರುವುದಕ್ಕೆ ನಿದರ್ಶನವಿದು ಎಂದರು. 20 ದಿನಗಳು, ತಿಂಗಳು ಕಳೆದ ರೋಗಿಗಳಿಗೆ ಇನ್ನು ಆಸ್ಪತ್ರೆ ಸಾಕಪ್ಪಾ, ಮನೆಯಲ್ಲೇ ಚಿಕಿತ್ಸೆ ಪಡೆಯಿರಿ. ಬೇರೆ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಗೆ ಅವಕಾಶ ಮಾಡಿ ಕೊಡಿ ಎಂದು ತಿಳಿಹೇಳಿ, ಆಸ್ಪತ್ರೆಯಿಂದ ತೆರವು ಮಾಡಲು ಸೂಚಿಸಿರುವೆ ಎಂದು ಸಿಎಂ ತಿಳಿಸಿದರು. ವಿವಿಧ ಆಸ್ಪತ್ರೆಗಳಲ್ಲಿರುವ ಒಟ್ಟು 9,242 ರೋಗಿಗಳ ಪೈಕಿ 1ರಿಂದ 10 ದಿನಗಳಾದವರು 6,500, 11ರಿಂದ 20 ದಿನಗಳಾದವರು 1,900, 20 ದಿನಗಳಿಗಿಂತ ಮೇಲ್ಪಟ್ಟವರು 503 ಮತ್ತು 30 ದಿನಗಳಾದವರು 337 ರೋಗಿಗಳು ಸೇರಿದ್ದಾರೆ. ಏ.1ರಂದು 3,000 ಇದ್ದ ಹಾಸಿಗೆಗಳ ಸಂಖ್ಯೆ 12,299ಕ್ಕೆ ಏರಿವೆ. ಅನಗತ್ಯವಾಗಿ ಆಸ್ಪತ್ರೆಗಳಲ್ಲಿ ಇರುವವರನ್ನು ಹೊರಗೆ ಕಳುಹಿಸಿದರೆ ಅಗತ್ಯವುಳ್ಳವರಿಗೆ ಸಕಾಲಕ್ಕೆ ಬೆಡ್ ಹಂಚಿಕೆ ಸಾಧ್ಯವಿದೆ ಎಂದು ಬಿಎಸ್​ವೈ ಪರಿಹಾರ ಸೂಚಿಸಿದರು.
ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 13 =
Remember me
