ಬೆಂಗಳೂರು:ಪ್ರತ್ಯೇಕ ಧರ್ಮದ ವಿಚಾರದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ‘ಪಶ್ಚಾತ್ತಾಪ’ ಹಾಗೂ ಬಹಿರಂಗ ಸ್ಪಷ್ಟೀಕರಣದ ನಡುವಿನ ವ್ಯತ್ಯಾಸ ಈಗ ಕಾಂಗ್ರೆಸ್​ನಲ್ಲಿ ಹೊಸ ತಳಮಳಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಹುಟ್ಟುಹಬ್ಬ ಸಮಾರಂಭಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ಕೊಟ್ಟಿದ್ದರು. ಇದೀಗ ಸಿದ್ದರಾಮಯ್ಯ ರಂಭಾಪುರಿ ಪೀಠದಲ್ಲಿ ಜಗದ್ಗುರುಗಳ ಆಶೀರ್ವಾದ ಪಡೆದಿದ್ದಾರೆ. ಇದೆಲ್ಲವೂ ಚುನಾವಣೆ ಭಾಗ, ಪಕ್ಷದ ಮೇಲಿರುವ ಪ್ರಬಲ ಸಮುದಾಯದ ಕೋಪವನ್ನು ತಣ್ಣಗಾಗಿಸುವ ತಂತ್ರ. ಈ ರೀತಿಯ ಭೇಟಿ ದೆಹಲಿಯಲ್ಲಿ ಚರ್ಚೆಯಾಗಿ ತೀರ್ವನವಾದ ಸಂಗತಿ ಎಂಬ ಗುಸುಗುಸು ಕಾಂಗ್ರೆಸ್ ಚಾವಡಿಯಲ್ಲಿದೆ.
ಕೊಡಗು ಹಾಗೂ ಚಿಕ್ಕಮಗಳೂರು ಅತಿವೃಷ್ಟಿ ಪ್ರವಾಸದ ವೇಳೆ ಮಠಗಳಿಗೆ ಭೇಟಿ ಪೂರ್ವನಿರ್ಧರಿತ ವಾಗಿರಲಿಲ್ಲ, ಸಿದ್ದರಾಮಯ್ಯ ಅವರ ಅಧಿಕೃತ ಪ್ರವಾಸ ಕಾರ್ಯಕ್ರಮದಲ್ಲಿ ಕೂಡ ಇರಲಿಲ್ಲ ಎಂಬುದು ಗಮನಾರ್ಹ. ಈ ಹಿಂದೆ ನಡೆದ ಚುನಾವಣೆ ಸಂಬಂಧಿಸಿದ ಸಭೆಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು, ಕೊರತೆಗಳು, ಓರೆಕೋರೆಗಳಿದ್ದರೆ ಈಗಲೇ ಸರಿಮಾಡುತ್ತ ಹೋಗಬೇಕೆಂಬುದು ನಿರ್ಧಾರವಾಗಿತ್ತು. ಹೈಕಮಾಂಡ್ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿತ್ತು.
ಮುಖ್ಯವಾಗಿ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಂದ ಕ್ಷಮಾಪಣೆ ಕೇಳಿಸಲು ಪಕ್ಷ ಕೂಡ ಪರೋಕ್ಷವಾಗಿ ಬಯಸಿತ್ತು ಎನ್ನಲಾಗಿದೆ. ರಂಭಾಪುರಿ ಮಠಕ್ಕೆ ಸಿದ್ದರಾಮಯ್ಯ ಭೇಟಿ ಹಾಗೂ ಧರ್ಮದ ವಿಚಾರದಲ್ಲಿ ಪಶ್ಚಾತ್ತಾಪ ಪಟ್ಟರೆನ್ನಲಾದ ಮಾಹಿತಿಗೂ ಮೇಲಿನ ವಿಚಾರಗಳಿಗೂ ತಾಳೆಯಾಗುತ್ತಿತ್ತು.
ಇಷ್ಟೆಲ್ಲದರ ನಡುವೆ ಸಿದ್ದರಾಮಯ್ಯ ರಿವರ್ಸ್ ಗೇರ್ ಹಾಕಿರುವುದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿದೆ. ‘ಈ ವಿಷಯ ಇಲ್ಲಿಗೆ ಮುಗಿಯಿತು ಎಂದುಕೊಂಡು ನಿರಾಳರಾಗಿದ್ದೆವು, ಈಗ ವೀರಶೈವ ಲಿಂಗಾಯತ ಸಮುದಾಯಕ್ಕೆ ಈ ಬೆಳವಣಿಗೆ ಹೊಸ ಸಂದೇಶ ಕಳಿಸಿದಂತಾಗಿದೆ’ ಎಂದು ಹಿರಿಯ ನಾಯಕರೊಬ್ಬರು ವಿಜಯವಾಣಿಗೆ ತಿಳಿಸಿದರು.
ಬೆಂಗಳೂರು:ಧರ್ಮಗುರುಗಳ ದರ್ಶನಕ್ಕೆ ತೆರಳಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಲ್ಲಿಯೂ ವಿತಂಡ ವಿವಾದ ಸೃಷ್ಟಿಸಿರುವುದು ಎಷ್ಟು ಸರಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಜನವಿರೋಧಿ ಅಡಳಿತ ಹಾಗೂ ರಾಜಕಾರಣದ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ ರಾಜಕಾರಣಕ್ಕೆ ಕೈಹಾಕಿ ಮುಖಭಂಗ ಅನುಭವಿಸಿದ ಸಿದ್ದರಾಮಯ್ಯನವರಿಂದ ಪಶಾ ತ್ತಾಪದ ಮಾತನ್ನು ಯಾರೂ ನಿರೀಕ್ಷಿಸುವುದಿಲ್ಲ ಎಂದು ಕಾಲೆಳೆದಿದ್ದಾರೆ. ಒಂದು ಕಡೆ ಧರ್ಮ ಒಡೆಯುವ, ಮತ್ತೊಂದು ಕಡೆ ವೀರ ಸಾವರ್ಕರ್ ಅಂತಹ ಸ್ವಾತಂತ್ರ್ಯ ಸೇನಾನಿಗಳನ್ನು ಅಪಮಾನಿಸುವ ಮೂಲಕ ಮತಾಂಧರನ್ನು ಎತ್ತಿ ಕಟ್ಟುವ ನಿಮ್ಮ ನಡೆಯನ್ನು ಜನರು ಗಮನಿಸುತ್ತಿದ್ದಾರೆ. ಧರ್ಮ ರಾಜಕಾರಣದ ಬಿಸಿ ಅನುಭವಿಸಿಯೂ ಮತ್ತದೇ ಹಾದಿಯಲ್ಲಿ ಸಾಗಿರುವ ನಿಮಗಾಗಿ ದೊಡ್ಡ ಕಂದಕ ಕಾಯುತ್ತಿದೆ ಎಂದು ವಿಜಯೇಂದ್ರ ಸರಣಿ ಟ್ವೀಟ್ ಮೂಲಕ ಕುಟುಕಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
