ಬೆಂಗಳೂರು:ಐಪಿಎಸ್​ ಅಧಿಕಾರಿಗಳಾಗಿರುವ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ಅವರ ನಡುವಿನ ಜಟಾಪಟಿ ಮುಂದುವರಿಯುತ್ತಲೇ ಇದ್ದು, ಮತ್ತೊಂದು ಹಂತಕ್ಕೆ ಹೋಗುತ್ತಿರುವಂತೆ ಭಾಸವಾಗುತ್ತಿದೆ. ಈ ಮಧ್ಯೆ ಹೇಮಂತ್ ನಿಂಬಾಳ್ಕರ್ ಅವರು ಬಿಗ್ ಬಿ ಅಮಿತಾಭ್ ಬಚ್ಚನ್​ ಮೂಲಕ ಸತ್ಯ ಏನೆಂದು ಹೇಳಲು ಪ್ರಯತ್ನಿಸಿದ್ದಾರೆ.
ಸುರಕ್ಷಾ ನಗರ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ಡಿ. ರೂಪಾ ಮತ್ತು ಹೇಮಂತ್ ನಿಂಬಾಳ್ಕರ್ ನಡುವೆ ಇತ್ತೀಚೆಗೆ ಬಹಿರಂಗ ವಾಕ್ಸಮರ ನಡೆದಿತ್ತು. ನಂತರ ಇಬ್ಬರನ್ನೂ ಸರ್ಕಾರ ವರ್ಗಾವಣೆ ಮಾಡಿತ್ತು. ಆಗ ಟ್ವಿಟರ್‌ನಲ್ಲಿ ತಮ್ಮ ನೇರ ಅಭಿಪ್ರಾಯ ಹಂಚಿಕೊಂಡಿದ್ದ ರೂಪಾ, ‘‘ಸಿಬಿಐನಿಂದ ದೋಷಾರೋಪಣೆ ಎದುರಿಸುತ್ತಿರುವ ನಿಂಬಾಳ್ಕರ್‌ರನ್ನೂ, ನನ್ನನ್ನೂ ಸರ್ಕಾರ ಒಂದೇ ತಕ್ಕಡಿಯಲ್ಲಿಟ್ಟು ಅಳೆಯುತ್ತಿರುವುದಕ್ಕೆ ನನಗೆ ಅಸಮಾಧಾನವಾಗಿದೆ’’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಬಳಿಕ, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಎಂ.ಡಿ.ಯಾಗಿ ರೂಪಾ ಅಧಿಕಾರ ವಹಿಸಿಕೊಂಡಿದ್ದರು.
ಇದನ್ನೂ ಓದಿ:7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!
ರೂಪಾ ಆರೋಪ ಹಿನ್ನೆಲೆಯಲ್ಲಿ ಈ ಹಿಂದೆಯೇ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದ ಹೇಮಂತ್ ನಿಂಬಾಳ್ಕರ್​, ಈಗ ಸತ್ಯ ಎಂದರೇನು, ಸುಳ್ಳು ಎಂದರೇನು ಎಂಬುದನ್ನು ಅಮಿತಾಭ್ ಬಚ್ಚನ್​ ಅವರ ಮೂಲಕ ಪುನರುಚ್ಚರಿಸಿದ್ದಾರೆ. ‘ಸತ್ಯ ಯಾವತ್ತೂ ನಾನೇ ಸತ್ಯ ಎಂದು ಹೇಳಿಕೊಳ್ಳಲು ಹೋಗುವುದಿಲ್ಲ. ಆದರೆ ಸುಳ್ಳು ಯಾವಾಗಲೂ ನಾನು ಮಾತ್ರ ಸತ್ಯ ಎನ್ನುತ್ತದೆ’ ಎಂಬುದಾಗಿ ಹೇಮಂತ್ ಹೇಳಿದ್ದಾರೆ. ಅರ್ಥಾತ್, ಅಮಿತಾಭ್ ಬಚ್ಚನ್​ ಅವರು ಹಿಂದಿಯಲ್ಲಿ ಹೇಳಿದ್ದ ಇದೇ ಮಾತನ್ನು ಕೋಟ್​ ಮಾಡಿ, ಇಂಗ್ಲಿಷ್​ನಲ್ಲಿ ಮತ್ತದನ್ನೇ ಹೇಳಿ ರಿ-ಟ್ವೀಟ್​ ಮಾಡಿಕೊಂಡಿದ್ದಾರೆ ಹೇಮಂತ್. ಈ ಮೂಲಕ ಡಿ. ರೂಪಾ ಆರೋಪಕ್ಕೆ ಹೇಮಂತ್​ ಹೀಗೆ ಟಾಂಗ್ ಕೊಟ್ಟಿರಬಹುದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
Truth never claims that I am the Truth,But lie always claims that ONLY I am the Truth..https://t.co/Dk4ptZAP42
— Hemant Nimbalkar IPS (@IPSHemant)January 4, 2021

ಅಮ್ಮ ಇರಲಿಲ್ಲ, ಅದಕ್ಕೆ ಅಪ್ಪ ಟ್ಯಾಬ್ಲೆಟ್​ ತಗೊಂಡು ಮಗುವಿಗೆ ಹಾಲು ಕುಡಿಸಿದ!

ಮತ್ತೊಬ್ಬ ನಟಿ ಅರೆಸ್ಟ್​; ಮತ್ತೆ ಸದ್ದು ಮಾಡುತ್ತಿರುವ ಡ್ರಗ್ಸ್ ಮಾರಾಟ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
