ಹುಬ್ಬಳ್ಳಿ:ಕೋವಿಡ್​-19 ಪ್ರಕರಣಗಳ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಿಸಲಾಗಿರುವ ಲಾಕ್​ಡೌನ್​ ಈಗಾಗಲೇ ಮೂರನೇ ಸಲ ವಿಸ್ತರಣೆಗೊಂಡಿದ್ದು, ಸದ್ಯದ ನಿರ್ಧಾರದ ಪ್ರಕಾರ ಈ ಲಾಕ್​ಡೌನ್​ ಜೂ. 14ರ ವರೆಗೆ ಜಾರಿಯಲ್ಲಿರಲಿದೆ. ಆದರೆ ಅದಾದ ಬಳಿಕವೂ ಲಾಕ್​ಡೌನ್​ ಮುಂದುವರಿಯಲಿದೆಯೇ ಇಲ್ಲವೋ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಇಂದು ಧಾರವಾಡ ಜಿಲ್ಲೆಯ ಕೋವಿಡ್ ನಿಯಂತ್ರಣ ಹಾಗೂ ಇತರೆ ಅಭಿವೃದ್ಧಿ ವಿಷಯಗಳ ಪರಿಶೀಲನೆ ಸಭೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು ಲಾಕ್​ಡೌನ್ ಕುರಿತ ಆಲೋಚನೆಯನ್ನು ಬಹಿರಂಗಪಡಿಸಿದರು.
ಈ ಹಿಂದೆ ಲಾಕ್​ಡೌನ್​ ವಿಸ್ತರಣೆ ಸಂದರ್ಭದಲ್ಲೇ ಮುಂದೆ ಮತ್ತೆ ಲಾಕ್​ಡೌನ್​ ವಿಸ್ತರಣೆ ಮಾಡುವ ಅಗತ್ಯ ಬಂದರೂ ಬಂದೀತು ಎಂಬ ಮಾತನ್ನು ಸಿಎಂ ಹೇಳಿದ್ದರು. ಈ ಹಿಂದಿನಂತೆಯೇ ಜನರು ಉತ್ತಮ ರೀತಿಯಲ್ಲಿ ಸಹಕರಿಸಿದರೆ ಲಾಕ್​ಡೌನ್​ ಮುಗಿಯಲಿದೆ, ಇಲ್ಲದಿದ್ದರೆ ಮುಂದುವರಿಸಬೇಕಾದೀತು ಎಂದು ಕೂಡ ಅವರು ಹೇಳಿದ್ದರು.
ಇದನ್ನೂ ಓದಿ:ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!
ಇದೀಗ ಲಾಕ್​ಡೌನ್​ ಕುರಿತ ತಮ್ಮ ಲೆಕ್ಕಾಚಾರವನ್ನು ಸಿಎಂ ಯಡಿಯೂರಪ್ಪ ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.11.09ರಷ್ಟಿದ್ದು, ಅದು ಶೇ.05ಕ್ಕೆ ಬಂದರೆ ರಾಜ್ಯವನ್ನು ಅನ್​ಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ತಿಳಿಸಿದ್ದಾರೆ. ಒಂದುವೇಳೆ ಈ ಪ್ರಮಾಣಕ್ಕೆ ಪಾಸಿಟಿವಿಟಿ ಪ್ರಮಾಣ ಇಳಿಯದಿದ್ದರೆ ಲಾಕ್​ಡೌನ್​ ಮುಂದುವರಿದರೂ ಅಚ್ಚರಿ ಇಲ್ಲ ಎಂಬುದನ್ನು ಅವರು ಈ ಮೂಲಕ ಪರೋಕ್ಷವಾಗಿ ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ್ರಾ ಈ ಖ್ಯಾತ ರ‍್ಯಾಪರ್?; ಆದಿತ್ಯ ತಿವಾರಿ ನಾಪತ್ತೆ, ಇನ್​ಸ್ಟಾಗ್ರಾಮ್​ನಲ್ಲಿದೆ ಸಂದೇಹಾಸ್ಪದ ಪೋಸ್ಟ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
