ಬೆಂಗಳೂರು:ಕರೊನಾ ನಿಯಂತ್ರಣಕ್ಕಾಗಿ ಮತ್ತೆ ಮತ್ತೆ ವಿಸ್ತರಣೆ ಮಾಡಲಾಗಿರುವ ಲಾಕ್​ಡೌನ್​ ಜೂ. 14ರ ಬಳಿಕವೂ ಪುನಃ ವಿಸ್ತರಣೆ ಆಗಲಿದೆಯೇ ಎಂಬ ಅನುಮಾನಗಳ ನಡುವೆಯೇ ಮತ್ತೊಂದು ಸಾಧ್ಯತೆಯೂ ಹೊರಬಿದ್ದಿದೆ. ಅದೇನೆಂದರೆ ನಿಗದಿತ ದಿನಾಂಕಕ್ಕೂ ಮೊದಲೇ ಲಾಕ್​ಡೌನ್​ ತೆರವಾಗುವ ಸಾಧ್ಯತೆಗಳೂ ನಿಚ್ಚಳವಾಗಿ ಕಾಣಿಸಲಾರಂಭಿಸಿವೆ.
ಸದ್ಯ ವಿಸ್ತರಣೆ ಮಾಡಲಾಗಿರುವ ಲಾಕ್​ಡೌನ್​ ಜೂ. 14ಕ್ಕೆ ಮುಗಿಯಲಿದೆ. ಮಾತ್ರವಲ್ಲ ರಾಜ್ಯದಲ್ಲಿ ವಿಸ್ತರಿತ ಲಾಕ್​ಡೌನ್​ನಿಂದಾಗಿ ಕರೊನಾ ಸೋಂಕಿತರ ಪ್ರಮಾಣಕ್ಕಿಂತ ಗುಣಮುಖರಾಗುವವರ ಸಂಖ್ಯೆಯೇ ಹೆಚ್ಚಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜೂ.14ಕ್ಕೆ ಲಾಕ್​ಡೌನ್​ ಕೊನೆಯಾಗುವುದು ಖಚಿತ ಎಂಬಂತಾಗಿದೆ. ಇದಕ್ಕೆ ಪೂರಕವೆಂಬಂತೆ ಸಿಎಂ ಕೂಡ ಮೊನ್ನೆ ಹೇಳಿಕೆ ನೀಡಿದ್ದರು. ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.11.09ರಷ್ಟಿದ್ದು, ಅದು ಶೇ.05ಕ್ಕೆ ಬಂದರೆ ರಾಜ್ಯವನ್ನು ಅನ್​ಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ:ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!
ಆದರೆ ಇದೀಗ ಮತ್ತೊಂದು ಸಾಧ್ಯತೆ ಬಹಿರಂಗಗೊಂಡಿದ್ದು, ಲಾಕ್​ಡೌನ್​ ಜೂ. 14ಕ್ಕೂ ಮೊದಲೇ ಅಂತ್ಯಗೊಳ್ಳುವ ಲಕ್ಷಣಗಳು ಕಾಣಿಸಿವೆ. ಇದನ್ನು ಪುಷ್ಠೀಕರಿಸುವ ನಿಟ್ಟಿನಲ್ಲಿ ಕೆಎಸ್​ಆರ್​ಟಿಸಿಯಲ್ಲಿನ ಬೆಳವಣಿಗೆಗಳು ಕಂಡುಬಂದಿವೆ. ಅದೇನೆಂದರೆ ಜೂ. 8ರಿಂದಲೇ ಕೆಎಸ್​ಆರ್​ಟಿಸಿ ಬಸ್​ಗಳು ಸಂಚರಿಸಲಿವೆ. ಅದಕ್ಕಾಗಿ ಮುಂಚಿತವಾಗಿ ಆನ್​ಲೈನ್ ಬುಕಿಂಗ್​ಗೆ ಅವಕಾಶ ನೀಡಿರುವ ಕೆಎಸ್​ಆರ್​ಟಿಸಿ, ಜೂ. 8ರಂದೇ ಬಸ್​ಗಳು ರಸ್ತೆಗಿಳಿಯುವುದು ಪಕ್ಕಾ ಎಂಬ ಮಾಹಿತಿ ಬಿಟ್ಟುಕೊಟ್ಟಿದೆ. ಈ ಮೂಲಕ ಜೂ. 8ರಂದೇ ರಾಜ್ಯ ಅನ್​ಲಾಕ್​ ಆಗುವ ಸುಳಿವು ಹೊರಬಿದ್ದಿದ್ದು, ಅಂದೇ ಲಾಕ್​ಡೌನ್​ ಮುಕ್ತಾಯಗೊಂಡರೂ ಅಚ್ಚರಿ ಏನಿಲ್ಲ.
ಆನ್‌ಲೈನ್ ಟಿಕೆಟ್ ಕಾಯ್ದಿರಿಸುವಿಕೆಗಾಗಿhttps://t.co/jnSXtGx8bgಗೆ ಭೇಟಿ ನೀಡಿ
Visithttps://t.co/jnSXtGx8bgfor online ticket booking#KSRTC#FlyBuspic.twitter.com/ojiH3v0xMo
— KSRTC (@KSRTC_Journeys)June 6, 2021


ಕೊಲೆ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪೊಲೀಸ್ ವಶಕ್ಕೆ!; ಕಾರು ಡಿಕ್ಕಿ ಹೊಡೆಸಿ ಕೊಲೆಗೈದ ಆರೋಪ

ರಾಜ್ಯದಲ್ಲಿ ಶತಕ ಬಾರಿಸಿದ ಪೆಟ್ರೋಲ್​ ದರ; ಕೆಲವೆಡೆ 100 ದಾಟಿತು ಲೀಟರ್ ಬೆಲೆ, ಇನ್ನಿದೆ ನೂರೆಂಟು ಬರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fifteen =
Remember me
